ವಿಷ್ಣು ಆ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಬೇಕಿತ್ತು. ಆದರೆ..; ನಾಗತಿಹಳ್ಳಿ ಹಂಚಿಕೊಂಡ್ರು ಮಾಹಿತಿ

ಟಿವಿ9ನೊಂದಿಗೆ ಮಾತನಾಡುತ್ತಾ ಖ್ಯಾತ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷ್ಣುವರ್ಧನ್ ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.

ವಿಷ್ಣುವರ್ಧನ್ ಹಾಗೂ ನಾಗತಿಹಳ್ಳಿ ಚಂದ್ರಶೇಖರ್ ಕಾಂಬಿನೇಷನ್​ನಲ್ಲಿ ಬಂದ ‘ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರ ಸಿನಿ ರಸಿಕರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಖ್ಯಾತ ಜಾನಪದ ಹಾಡಿನ ಸಾಲನ್ನು ಚಿತ್ರದ ಶೀರ್ಷಿಕೆಯಾಗಿ ಏಕೆ ಇಟ್ಟಿದ್ದೆಂದು ನಾಗತಿಹಳ್ಳಿ ವಿವರಿಸಿದ್ದಾರೆ. ಮಲ್ಲಿಗೆ ಎನ್ನುವುದು ರೈತನ ಬದುಕಿನ ರೂಪಕ. ಅದು ಬಹಳ ಅಲ್ಪಾಯುಷಿ. ಆದರೆ ಇರುವಷ್ಟು ಕಾಲ ಬಹಳ ಕಂಪನ್ನು ಸೂಸುತ್ತದೆ. ರೈತನೂ ಹಾಗೆಯೇ. ಅದನ್ನು ಕಟ್ಟಿಕೊಡುವ ಉದ್ದೇಶದಿಂದ ಹಾಗೂ ಜಾನಪದವೂ ರೈತನಿಗೆ ನೇರವಾಗಿಯೇ ಸಂಬಂಧಿಸಿದ್ದರಿಂದ ಆ ಟೈಟಲ್ ಇಟ್ಟೆ ಎನ್ನುವುದು ಅವರ ನುಡಿ. ಈ ಚಿತ್ರದ ಶೂಟಿಂಗ್​ಗಾಗಿ ನೆದರ್​ಲ್ಯಾಂಡ್​ನ ಆಂಸ್ಟರ್​ಡ್ಯಾಮ್​ಗೆ ಹೋಗಬೇಕಿತ್ತು. ಆದರೆ ವಿಷ್ಣು ಅವರ ಆರೋಗ್ಯದ ಕಾರಣಗಳಿಂದ ಸಾಧ್ಯವಾಗಲಿಲ್ಲ ಎಂದ ನಾಗತಿಹಳ್ಳಿ ಚಿತ್ರಕ್ಕೆ ತಯಾರಿ ನಡೆಸಿದ ವಿಧಾನವನ್ನು ಮತ್ತು ವಿದೇಶಕ್ಕೆ ಚಿತ್ರೀಕರಣಕ್ಕೆ ಏಕೆ ಹೋಗಲು ಯೋಚಿಸಿದ್ದರು ಎನ್ನುವುದನ್ನು ಸಂದರ್ಶನದಲ್ಲಿ ಬಹಳ ಆಸಕ್ತಿಕರವಾಗಿ ವಿವರಿಸಿದ್ದಾರೆ. ಸಂದರ್ಶನ ನೋಡಿ.

ಇದನ್ನೂ ಓದಿ:

‘ಸೀತಾ’ ಪಾತ್ರಕ್ಕೆ ಕರೀನಾ ₹ 12 ಕೋಟಿ ಬೇಡಿಕೆ ಇಟ್ಟಿದ್ದು ನಿಜಾನಾ? ಸುದ್ದಿಯ ಅಸಲಿಯತ್ತು ಇಲ್ಲಿದೆ

‘ವಿಷ್ಣು​-ಅಂಬಿ​ ಇಷ್ಟಪಡುತ್ತಿದ್ದ ಕಾರು ಇನ್ನೂ ನನ್ನ ಬಳಿ ಇದೆ’; ನಾಗತಿಹಳ್ಳಿ ಚಂದ್ರಶೇಖರ್​

(Director Nagathihalli Chandrashekhar shares his memories with Vishnuvardhan and Matad Matad Mallige movie)

Click on your DTH Provider to Add TV9 Kannada