AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸೀತಾ’ ಪಾತ್ರಕ್ಕೆ ಕರೀನಾ ₹ 12 ಕೋಟಿ ಬೇಡಿಕೆ ಇಟ್ಟಿದ್ದು ನಿಜಾನಾ? ಸುದ್ದಿಯ ಅಸಲಿಯತ್ತು ಇಲ್ಲಿದೆ

Kangana Ranaut: ಬಾಲಿವುಡ್​ನ ಖ್ಯಾತ ನಟಿ ಕರೀನಾ ಕಪೂರ್ ಸೀತಾ ಪಾತ್ರಕ್ಕಾಗಿ 12 ಕೋಟಿ ರೂ ಬೇಡಿಕೆ ಇಟ್ಟಿದ್ದಾರೆ ಎಂದು ದೊಡ್ಡ ಸುದ್ದಿಯಾಗಿತ್ತು. ಆದರೆ ಆ ಸುದ್ದಿಯ ಅಸಲಿಯತ್ತು ಈಗ ಬಯಲಾಗಿದೆ.

‘ಸೀತಾ’ ಪಾತ್ರಕ್ಕೆ ಕರೀನಾ ₹ 12 ಕೋಟಿ ಬೇಡಿಕೆ ಇಟ್ಟಿದ್ದು ನಿಜಾನಾ? ಸುದ್ದಿಯ ಅಸಲಿಯತ್ತು ಇಲ್ಲಿದೆ
ಕರೀನಾ ಕಪೂರ್, ಕಂಗನಾ ರಣಾವತ್
TV9 Web
| Updated By: shivaprasad.hs|

Updated on:Sep 19, 2021 | 1:14 PM

Share

ಬಾಲಿವುಡ್​ನಲ್ಲಿ ನಟ- ನಟಿಯರ ಸಂಭಾವನೆ, ಪಾತ್ರಕ್ಕಾಗಿ ಅವರನ್ನು ಸಂಪರ್ಕಿಸಿದ್ದು, ಅವುಗಳನ್ನು ಕಲಾವಿದರು ತಿರಸ್ಕರಿಸುವುದು, ಅದು ಮತ್ಯಾರದ್ದೋ ಪಾಲಾಗುವುದು- ಈ ಸುದ್ದಿಗಳೆಲ್ಲವೂ ಮಾಮೂಲು. ಕಾಲ ಕಳೆದಂತೆ, ಈ ವಿಚಾರಗಳಿಗೆ ಸಂಬಂಧಪಟ್ಟಂತೆ ಹೊಸ ಹೊಸ ವಿಚಾರಗಳು ಮುನ್ನೆಲೆಗೆ ಬಂದು ಚರ್ಚೆಯಾಗುತ್ತವೆ. ಇದೀಗ ಕಂಗನಾ ರಣಾವತ್ ಅವರ ‘ದಿ ಇನ್​ಕಾರ್ನೇಷನ್ ಸೀತಾ’ ಚಿತ್ರದ ಕುರಿತಂತೆ ಇಂಥದ್ದೇ ಚರ್ಚೆಯಾಗುತ್ತಿದೆ. ಕಾರಣ, ಈ ಹಿಂದೆ, ಕರೀನಾ ಕಪೂರ್ ಅವರು ಸೀತಾ ಪಾತ್ರಕ್ಕಾಗಿ 12 ಕೋಟಿ ರೂ ಸಂಭಾವನೆ ಇಟ್ಟಿದ್ದರು ಎಂಬ ಸುದ್ದಿಯೊಂದು ಬಹಳಷ್ಟು ಚರ್ಚೆಯಾಗಿತ್ತು. ಜೊತೆಗೆ ದೀಪಿಕಾ ಪಡುಕೋಣೆ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದೂ ಸುದ್ದಿಯಾಗಿತ್ತು. ಅಂತಿಮವಾಗಿ ಸೀತಾ ಪಾತ್ರವನ್ನು ಕಂಗನಾ ನಿರ್ವಹಿಸುತ್ತಿದ್ದಾರೆ. ಆದರೆ ಚಿತ್ರತಂಡ ಈ ಸುದ್ದಿಗಳ ಬಗ್ಗೆ ಹೇಳುವುದೇ ಬೇರೆ.

‘ದಿ ಇನ್ಕಾರ್ನೇಷನ್ ಸೀತಾ’ ಚಿತ್ರದ ಲೇಖಕ ಮನೋಜ್ ಮುಂತಶೀರ್ ಪಾತ್ರಕ್ಕಾಗಿ ಕರೀನಾ ಅವರನ್ನು ಆಯ್ಕೆ ಮಾಡಿದ್ದರ ಕುರಿತು ’ಫ್ರೀ ಪ್ರೆಸ್ ಜರ್ನಲ್’ನೊಂದಿಗೆ ಮಾತನಾಡಿದ್ದಾರೆ. ಆ  ಸಂದರ್ಭದಲ್ಲಿ ಅವರು ಹಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ದೀಪಿಕಾ ಪಡುಕೋಣೆ ಮತ್ತು ಕರೀನಾ ಕಪೂರ್ ಸೀತಾ ಪಾತ್ರದಲ್ಲಿ ಕಾಣಿಸಿಕೊಳ್ಳುವ ವದಂತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘‘ಕಂಗನಾ ಅವರನ್ನು ಆ ಪಾತ್ರಕ್ಕೆ ಮೊದಲೇ ತೀರ್ಮಾನ ಮಾಡಲಾಗಿತ್ತು. ಆದ್ದರಿಂದಲೇ ಬೇರೆ ಯಾರನ್ನೂ ಸಂಪರ್ಕಿಸಿರಲಿಲ್ಲ’’ ಎಂದಿದ್ದಾರೆ.

“ನಾವು ಎಂದಿಗೂ ಇತರ ನಟಿಯರನ್ನು ಸಂಪರ್ಕಿಸಲಿಲ್ಲ. ಕಂಗನಾ ಅವರೇ ಸೀತಾ ಪಾತ್ರವನ್ನು ನಿರ್ವಹಿಸಬೇಕೆಂದು ಚಿತ್ರತಂಡ ಮೊದಲೇ ಬಯಸಿತ್ತು” ಎಂದು ಅವರು ಹೇಳಿದ್ದಾರೆ. ಅವರು ಬರೆದಿರುವ ಕತೆಯಲ್ಲಿ ಸೀತಾ ಪಾತ್ರವು ವಿವಿಧ ಛಾಯೆಗಳನ್ನು ಹೊಂದಿದ್ದು, ಅದನ್ನು ನಿರ್ವಹಿಸುವ ದೃಷ್ಟಿಯಿಂದ ಕಂಗನಾ ಅತ್ಯುತ್ತಮ ಆಯ್ಕೆಯಾಗಿದ್ದಾರೆ ಎಂದು ಮನೋಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಂಗನಾ ಹಂಚಿಕೊಂಡ ಚಿತ್ರದ ಟೈಟಲ್ ರಿಲೀಸ್ ಪೋಸ್ಟರ್:

ಕಂಗನಾ ಅವರಲ್ಲಿ ಆಧ್ಯಾತ್ಮಿಕ ಛಾಯೆಯಿದೆ. ಆದ್ದರಿಂದ ಸೀತಾ ಪಾತ್ರಕ್ಕೆ ಅವರನ್ನು ವಿಶೇಷವಾಗಿ ಸಿದ್ಧಪಡಿಸಬೇಕಾಗಿಲ್ಲ ಎನ್ನುವುದು ಮನೋಜ್ ಅವರ ಮಾತು. ‘‘ಸೀತೆ ನಾಚಿಕೆ ಸ್ವಭಾವದವಳು. ಆದರೆ ದುರ್ಬಲಳಲ್ಲ. ಆಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವಿರುವ ವ್ಯಕ್ತಿ. ಆಕೆ ಭಾರತೀಯ ಸ್ತ್ರೀ ವಾದವನ್ನು ಪ್ರತಿಬಿಂಬಿಸುತ್ತಾಳೆ’’ ಎಂದು ಮನೋಜ್ ಹೇಳಿದ್ದಾರೆ. “ದಿ ಇನ್ಕಾರ್ನೇಷನ್ ಸೀತಾ ಚಿತ್ರವು ನಮ್ಮ ವೃತ್ತಿಜೀವನವನ್ನು ವ್ಯಾಖ್ಯಾನಿಸುವ ಚಿತ್ರವಾಗಿದೆ. ಅದನ್ನು ಚೆನ್ನಾಗಿ ಮಾಡಿದಲ್ಲಿ ಇದು ಬಹಳ ಕಾಲ ಜನಮಾನಸದಲ್ಲಿ ನೆಲೆಯಾಗಲಿದೆ. ಇದನ್ನು ಭವ್ಯ ಮತ್ತು ಅದ್ದೂರಿಯಾಗಿ ತಯಾರಿಸಲು ಯೋಜಿಸಲಾಗುತ್ತಿದೆ’’ ಎಂದು ಅವರು ನುಡಿದಿದ್ದಾರೆ. ಈ ಚಿತ್ರವನ್ನು ಅಲೌಕಿಕ್ ದೇಸಾಯಿ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ:

‘ಬಂಧನ 2’ ಚಿತ್ರಕ್ಕೆ ಡೆಡ್ಲಿ ಆದಿತ್ಯ ಹೀರೋ; ಇದು ವಿಷ್ಣುವರ್ಧನ್​ ನಟನೆಯ ಕ್ಲಾಸಿಕ್​ ಸಿನಿಮಾದ ಮುಂದಿನ ಭಾಗ

Salman Khan: ಬಿಗ್​ಬಾಸ್​ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!

(Kareena Kapoor never approached for Sita and they asked only Kangana says Sita writer Manoj)

Published On - 1:10 pm, Sun, 19 September 21