ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್​ ಖಾನ್​

ಕಂಗನಾ ರಣಾವತ್​ ಅವರ ತಂಟೆಗೆ ಹೋಗಲು ಅನೇಕರು ಹಿಂದೇಟು ಹಾಕುತ್ತಾರೆ. ಹಾಗಿದ್ದರೂ ಕೂಡ ಕಮಾಲ್​ ಆರ್​. ಖಾನ್​ ಅವರು ಯಾವುದೇ ಮುಲಾಜಿಲ್ಲದೇ ಹೀಯಾಳಿಸುತ್ತಿದ್ದಾರೆ.

ಸೀತೆ ಪಾತ್ರ ಮಾಡಲು ಕಂಗನಾಗೆ 32 ಕೋಟಿ ರೂ. ಸಂಬಳ? ಇದು ದೊಡ್ಡ ಪ್ರಮಾದ ಎಂದ ಕಮಾಲ್​ ಖಾನ್​
ಕಂಗನಾ ರಣಾವತ್​, ಕಮಾಲ್​ ಆರ್​. ಖಾನ್​
Follow us
TV9 Web
| Updated By: ಮದನ್​ ಕುಮಾರ್​

Updated on: Sep 19, 2021 | 4:09 PM

ನಟಿ ಕಂಗನಾ ರಣಾವತ್​ ಅಭಿನಯದ ಸಿನಿಮಾಗಳು ಬ್ಯಾಕ್​ ಟು ಬ್ಯಾಕ್​ ಸೋತರೂ ಕೂಡ ಅವರಿಗೆ ಸಿಗುವ ಅವಕಾಶಗಳೇನೂ ಕಮ್ಮಿ ಆಗಿಲ್ಲ. ಹತ್ತು ಹಲವು ಕಾರಣಗಳಿಗಾಗಿ ಎಲ್ಲರ ಜೊತೆ ಕಿರಿಕ್​ ಮಾಡಿಕೊಳ್ಳುವ ಅವರು ಒಂದರ ನಂತರ ಒಂದು ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಈಗ ಅವರ ಕೈಯಲ್ಲಿ ಹಲವು ಸಿನಿಮಾಗಳಿವೆ. ತೇಜಸ್​, ಧಾಕಡ್​, ಎಮರ್ಜೆನ್ಸಿ, ಮಣಿಕರ್ಣಿಕಾ ರಿಟರ್ನ್ಸ್​​ ಸೇರಿದಂತೆ ಅನೇಕ ಪ್ರಾಜೆಕ್ಟ್​ಗಳಲ್ಲಿ ಕಂಗನಾ ತೊಡಗಿಕೊಂಡಿದ್ದಾರೆ. ಅವುಗಳ ಜೊತೆ ‘ಸೀತಾ’ ಸಿನಿಮಾ ಕೂಡ ಸೇರಿಕೊಂಡಿದೆ. ಈ ಚಿತ್ರಕ್ಕೆ ಅವರು ಪಡೆಯುತ್ತಿರುವ ಸಂಭಾವನೆ ಬರೋಬ್ಬರಿ 32 ಕೋಟಿ ರೂ. ಎನ್ನಲಾಗಿದೆ.

ಬಾಲಿವುಡ್​ನಲ್ಲಿ ಎಲ್ಲರ ಕಾಲೆಳೆಯುವ ನಟ, ವಿಮರ್ಶಕ ಕಮಾಲ್​ ಆರ್​. ಖಾನ್​ ಅವರು ಇತ್ತೀಚೆಗೆ ಕಂಗನಾ ರಣಾವತ್​ ವಿರುದ್ಧ ಹರಿಹಾಯುತ್ತಿದ್ದಾರೆ. ಕಂಗನಾ ನೀಡುವ ಎಡವಟ್ಟು ಹೇಳಿಕೆಗಳಿಗೆ ಕಮಾಲ್​ ಖಾನ್​ ಆಗಾಗ ತಿರುಗೇಟು ನೀಡುತ್ತಾ ಇರುತ್ತಾರೆ. ಈಗ ಅವರು ‘ಸೀತಾ’ ಸಿನಿಮಾಗೆ ಸಂಬಂಧಿಸಿದಂತೆ ಕಂಗನಾರನ್ನು ಹೀಯಾಳಿಸಿದ್ದಾರೆ. ಟ್ವಿಟರ್​ನಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿರುವ ಕಮಾಲ್ ಆರ್​. ಖಾನ್​ ಅವರು ಕಂಗನಾರ ಸಂಭಾವನೆ ಬಗ್ಗೆ ವ್ಯಂಗ್ಯವಾಡಿದ್ದಾರೆ.

‘ನನ್ನ ಮೂಲಗಳ ಪ್ರಕಾರ, ಕಂಗನಾ ರಣಾವತ್​ ಅವರು ಸೀತಾ ಸಿನಿಮಾಗೆ 32 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಆ ಮೂಲಕ ಬಾಲಿವುಡ್​ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಎಂಬ ಖ್ಯಾತಿಗೆ ಅವರು ಪಾತ್ರರಾಗಿದ್ದಾರೆ. ಆದರೆ ನಿರ್ಮಾಪಕರು ಯಾಕೆ ಇಂಥ ಪ್ರಮಾದ ಮಾಡಿದರು? ನಾನು ಶೀಘ್ರವೇ ಬಿಡುಗಡೆ ಮಾಡಲಿರುವ ವಿಮರ್ಶೆಯಲ್ಲಿ ಈ ಬಗ್ಗೆ ನಿಮಗೆ ಇನ್ನಷ್ಟು ವಿವರ ತಿಳಿಯಲಿದೆ’ ಎಂದು ಕಮಾಲ್​ ಆರ್​. ಖಾನ್​ ಟ್ವೀಟ್​ ಮಾಡಿದ್ದಾರೆ.

ಕಂಗನಾ ಅವರು ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ ಎಂಬುದು ಗೊತ್ತಿರುವ ವಿಚಾರ. ಹಾಗಾಗಿ ಅವರ ತಂಟೆಗೆ ಹೋಗಲು ಅನೇಕರು ಹಿಂದೇಟು ಹಾಕುತ್ತಾರೆ. ಹಾಗಿದ್ದರೂ ಕೂಡ ಕಮಾಲ್​ ಆರ್​. ಖಾನ್​ ಅವರು ಯಾವುದೇ ಮುಲಾಜಿಲ್ಲದೇ ಈ ರೀತಿ ಹೀಯಾಳಿಸುತ್ತಿದ್ದಾರೆ. ಅದಕ್ಕೆ ಕಂಗನಾ ಕಡೆಯಿಂದ ಯಾವಾಗ ಖಾರದ ಪ್ರತಿಕ್ರಿಯೆ ಬರಲಿದೆಯೋ ಗೊತ್ತಿಲ್ಲ. ಈ ಹಿಂದೆ ಸಲ್ಮಾನ್​ ಖಾನ್​ ಬಗ್ಗೆಯೂ ಕಮಾಲ್​ ಖಾನ್​ ಇಲ್ಲಸಲ್ಲದ ಮಾತುಗಳನ್ನಾಡಿ ಸುದ್ದಿ ಆಗಿದ್ದರು.

ಇದನ್ನೂ ಓದಿ:

ಕಂಗನಾ ರಣಾವತ್​ ಕೂ ಖಾತೆಗೆ 10 ಲಕ್ಷ ಫಾಲೋವರ್ಸ್​; ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚಿತು ಹವಾ

ಹೀನಾಯವಾಗಿ ಮುಗ್ಗರಿಸಿದ ‘ತಲೈವಿ’; ಮೊದಲ ದಿನ ಕಂಗನಾ ರಣಾವತ್​ ಚಿತ್ರ ಗಳಿಸಿದ್ದೆಷ್ಟು?

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ