Shamita Shetty: ಶಮಿತಾಗೆ ಕಿಸ್​ ಮಾಡಿ ವೆಲ್​ಕಮ್​ ಮಾಡಿದ ಶಿಲ್ಪಾ ಶೆಟ್ಟಿ

ರಾಜ್ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಶೆಟ್ಟಿ ಕುಗ್ಗಿ ಹೋಗಿದ್ದರು. ಅವರಿಗೆ ಈ ಘಟನೆ ನಿಜಕ್ಕೂ ಶಾಕಿಂಗ್​ ಆಗಿತ್ತು. ಈ ಘಟನೆಯಿಂದ ಹೊರ ಬರೋದು ಹೇಗೆ ಎನ್ನುವ ಚಿಂತೆ ಕಾಡಿತ್ತು.

Shamita Shetty: ಶಮಿತಾಗೆ ಕಿಸ್​ ಮಾಡಿ ವೆಲ್​ಕಮ್​ ಮಾಡಿದ ಶಿಲ್ಪಾ ಶೆಟ್ಟಿ
ಶಮಿತಾಗೆ ಕಿಸ್​ ಮಾಡಿ ವೆಲ್​ಕಮ್​ ಮಾಡಿದ ಶಿಲ್ಪಾ ಶೆಟ್ಟಿ

 ಶಿಲ್ಪಾ ಶೆಟ್ಟಿ ಹಾಗೂ ಅವರ ಸಹೋದರಿ ಶಮಿತಾ ಶೆಟ್ಟಿ ನಡುವೆ ಆಪ್ತತೆ ಇದೆ. ಶಿಲ್ಪಾ ಎಲ್ಲಾ ವಿಚಾರಗಳನ್ನು ಶಮಿತಾ ಜತೆ ಹಂಚಿಕೊಳ್ಳುತ್ತಾರೆ. ಒಬ್ಬರ ಕಷ್ಟಕ್ಕೆ ಮತ್ತೊಬ್ಬರು ಆಗುತ್ತಾರೆ. ಅಶ್ಲೀಲ ಸಿನಿಮಾ ನಿರ್ಮಾಣ ಪ್ರಕರಣದಲ್ಲಿ ರಾಜ್​ ಕುಂದ್ರಾ ಅರೆಸ್ಟ್​ ಆದಾಗ ಶಿಲ್ಪಾಗೆ ಶಮಿತಾ ಧೈರ್ಯ ತುಂಬಿದ್ದರು. ಈ ಬೆಳವಣಿಗೆ ಆದ ಕೆಲವೇ ದಿನಗಳಲ್ಲಿ ಶಮಿತಾ ಬಿಗ್​ ಬಾಸ್​ ಒಟಿಟಿಗೆ ಹೋಗುವ ಪ್ರಸಂಗ ಬಂದಿತ್ತು. ಈಗ ಶಮಿತಾ ಬಿಗ್​ ಬಾಸ್​ ಒಟಿಟಿಯಿಂದ ಹೊರ ಬಂದು ಶಿಲ್ಪಾ ಅವರನ್ನು ಭೇಟಿ ಆಗಿ ಮಾತನಾಡಿದ್ದಾರೆ.

ರಾಜ್ ಕುಂದ್ರಾ ಬಂಧನದ ನಂತರದಲ್ಲಿ ಶಿಲ್ಪಾ ಶೆಟ್ಟಿ ಕುಗ್ಗಿ ಹೋಗಿದ್ದರು. ಅವರಿಗೆ ಈ ಘಟನೆ ನಿಜಕ್ಕೂ ಶಾಕಿಂಗ್​ ಆಗಿತ್ತು. ಈ ಘಟನೆಯಿಂದ ಹೊರ ಬರೋದು ಹೇಗೆ ಎನ್ನುವ ಚಿಂತೆ ಕಾಡಿತ್ತು. ಆ ಸಂದರ್ಭದಲ್ಲಿ ಶಿಲ್ಪಾಗೆ ಧೈರ್ಯ ತುಂಬುವ ಕೆಲಸ ಮಾಡಿದ್ದರು ತಂಗಿ ಶಮಿತಾ ಶೆಟ್ಟಿ. ಆದರೆ, ಕೆಲವೇ ದಿನಗಳಲ್ಲಿ ಅವರು ಬಿಗ್​ ಬಾಸ್​ ಮನೆ ಒಳಗೆ ಹೋಗೋ ಪರಿಸ್ಥಿತಿ ಬಂದಿತ್ತು. ಇದರಿಂದ ಶಿಲ್ಪಾ ಸ್ವಲ್ಪ ಬೇಸರಪಟ್ಟಿಕೊಂಡಿದ್ದರು. ಆದರೆ, ಈಗ ಇಬ್ಬರೂ ಮತ್ತೆ ಒಂದಾಗಿದ್ದಾರೆ.

ರೀಯೂನಿಯನ್​ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶಿಲ್ಪಾ ಶೆಟ್ಟಿ ಹಂಚಿಕೊಂಡಿದ್ದಾರೆ. ಶಮಿತಾ ಶೆಟ್ಟಿ ಕೆಂಪು ಬಣ್ಣದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶಮಿತಾಗೆ ಶಿಲ್ಪಾ ಕಿಸ್ ಮಾಡಿದ್ದಾರೆ. ಸದ್ಯ ಈ ಫೋಟೋಗೆ ಅಭಿಮಾನಿಗಳು ಸಾಕಷ್ಟು ಪ್ರೀತಿ ತೋರಿಸುತ್ತಿದ್ದಾರೆ.

‘ಬಿಗ್​ ಬಾಸ್​ ಒಟಿಟಿ’ ವಿನ್ನರ್​ ಆಗಿ ದಿವ್ಯಾ ಅಗರ್​ವಾಲ್​ ಹೊರಹೊಮ್ಮಿದ್ದಾರೆ. ಭಾನುವಾರ (ಸೆಪ್ಟೆಂಬರ್​ 18) ನಡೆದ ಫಿನಾಲೆ ಎಪಿಸೋಡ್​ನಲ್ಲಿ ದಿವ್ಯಾ ಹೆಸರನ್ನು ವಿನ್ನರ್​ ಎಂದು ನಿರೂಪಕ ಕರಣ್​ ಜೋಹರ್​ ಘೋಷಣೆ ಮಾಡಿದ್ದಾರೆ. ಶಮಿತಾ ಶೆಟ್ಟಿ ಎರಡನೇ ರನ್ನರ್​ ಅಪ್​ ಆಗಿದ್ದಾರೆ. ನಿಶಾಂತ್​ ಭಟ್​ ಮೊದಲ ರನ್ನರ್​ ಅಪ್​ ಆಗಿದ್ದಾರೆ.

ಇದನ್ನೂ ಓದಿ: ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

Read Full Article

Click on your DTH Provider to Add TV9 Kannada