ಸ್ವರ್ಗದಲ್ಲಿ ಮೇರು ನಟರ ಜತೆ ಸಂಚಾರಿ ವಿಜಯ್​ ಮಾತು; ಸಿನಿಮಾ ಪ್ರಚಾರಕ್ಕೆ ಹೀಗೊಂದು ಮಾರ್ಗ

ಸಂಚಾರಿ ವಿಜಯ್​ ‘ಪುಕ್ಸಟ್ಟೆ ಲೈಫು​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ವಿಜಯ್​ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಅವರು ಕಣ್ಣು ಮುಚ್ಚಿದರು.

ಸ್ವರ್ಗದಲ್ಲಿ ಮೇರು ನಟರ ಜತೆ ಸಂಚಾರಿ ವಿಜಯ್​ ಮಾತು; ಸಿನಿಮಾ ಪ್ರಚಾರಕ್ಕೆ ಹೀಗೊಂದು ಮಾರ್ಗ
ಯಮ ಲೋಕದಲ್ಲಿ ಮೇರು ನಟರ ಜತೆ ಸಂಚಾರಿ ವಿಜಯ್​ ಮಾತು; ಸಿನಿಮಾ ಪ್ರಚಾರಕ್ಕೆ ಹೀಗೊಂದು ಮಾರ್ಗ


ನಟ ಸಂಚಾರಿ ವಿಜಯ್​ ಮೃತಪಟ್ಟು ಮೂರು ತಿಂಗಳ ಮೇಲಾಗಿದೆ. ಆದಾಗ್ಯೂ ಅಭಿಮಾನಿಗಳಿಗೆ ಅವರು ಮೃತಪಟ್ಟಿದ್ದಾರೆ ಎನ್ನುವ ನೋವಿನಿಂದ ಹೊರ ಬರೋಕೆ ಸಾಧ್ಯವಾಗುತ್ತಿಲ್ಲ. ಈ ನಟನನ್ನು ನಾನಾ ರೀತಿಯಲ್ಲಿ ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ಈಗ ಹೊಸ ಎನಿಮೇಟೆಡ್​ ವಿಡಿಯೋ ಒಂದನ್ನು ಹರಿಬಿಡಲಾಗಿದೆ. ಈ ವಿಡಿಯೋದಲ್ಲಿ ಸಂಚಾರಿ ವಿಜಯ್​ ಅವರು ಸ್ವರ್ಗದಲ್ಲಿಸ್ಯಾಂಡಲ್​ವುಡ್​ ಹಿರಿಯ ನಟರ ಜತೆ ಮಾತನಾಡಿದ್ದಾರೆ.

ಸಂಚಾರಿ ವಿಜಯ್​ ‘ಪುಕ್ಸಟ್ಟೆ ಲೈಫು​’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಗ್ಗೆ ವಿಜಯ್​ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಅವರು ಕಣ್ಣು ಮುಚ್ಚಿದರು. ಈ ಸಿನಿಮಾಗೆ ಅರವಿಂದ್​ ಕುಪ್ಳೀಕರ್​ ನಿರ್ದೇಶನ ಇದ್ದರೆ, ವಸು ದೀಕ್ಷಿತ್​ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಈ ಸಿನಿಮಾ ಪ್ರಚಾರಕ್ಕೆ ಚಿತ್ರತಂಡ ಭಿನ್ನ ಪ್ರಯೋಗ ಮಾಡಿದೆ.

ರಾಜ್​ಕುಮಾರ್​, ಅಂಬರೀಷ್​, ವಿಷ್ಣುವರ್ಧನ್​, ಶಂಕರ್​ನಾಗ್​ ಸೇರಿ ಸಾಕಷ್ಟು ಹಿರಿಯ ನಟರು ಮೃತಪಟ್ಟಿದ್ದಾರೆ. ಇವರ ಜತೆ ವಿಜಯ್​ ಸಂಭಾಷಣೆ ನಡೆಸಿದ ರೀತಿಯಲ್ಲಿ ಎನಿಮೇಟೆಡ್​ ವಿಡಿಯೋ ಮಾಡಲಾಗಿದೆ. ಸ್ವರ್ಗದಲ್ಲೇ ಸಂಚಾರಿ ವಿಜಯ್​ ‘ಪುಕ್ಸಟ್ಟೆ ಲೈಫು’ ಬಗ್ಗೆ ಹೇಳಿಕೊಳ್ಳುತ್ತಾರೆ. ಅಂಬರೀಷ್​, ರಾಜ್​ಕುಮಾರ್​ ಮೊದಲಾದವರು ಸಿನಿಮಾ ನೋಡಿ ಎಂದು ಕೋರಿದ್ದಾರೆ. ಇದನ್ನು ನೋಡಿ ಸಾಕಷ್ಟು ಮಂದಿ ಖುಷಿಪಟ್ಟಿದ್ದಾರೆ.

ಇತ್ತೀಚೆಗೆ ಸಂಚಾರಿ ವಿಜಯ್ ಬಣ್ಣ ಹಚ್ಚಿರುವ ‘ಪುಕ್ಸಟ್ಟೆ ಲೈಫು’ ಚಿತ್ರದ ಟ್ರೈಲರ್ ಬಿಡುಗಡೆಯಾಗಿತ್ತು. ಅವರ ಭಿನ್ನವಾದ ಪಾತ್ರ ಗಮನ ಸೆಳೆದಿದೆ. ವೃತ್ತಿ ಜೀವನದಲ್ಲಿ ಪ್ರತಿ ಚಿತ್ರದಲ್ಲೂ ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ವಿಜಯ್, ಈ ಚಿತ್ರದ ಟ್ರೇಲರ್​ನಲ್ಲೂ ಭಿನ್ನ ಪಾತ್ರದ ಮೂಲಕ ನೋಡುಗರ ಮನಗೆದ್ದಿದ್ದಾರೆ. ಈ ಸಿನಿಮಾದಲ್ಲಿ ಬೀಗ ರಿಪೇರಿ ಮಾಡುವ ವ್ಯಕ್ತಿಯೊಬ್ಬನ ಪಾತ್ರವನ್ನು ವಿಜಯ್ ನಿರ್ವಹಿಸಿದ್ದಾರೆ.

ಸದ್ಯ, ಈ ಪ್ರಮೋಷನಲ್​ ವಿಡಿಯೋವನ್ನು ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಸೇರಿ ಸಾಕಷ್ಟು ಮಂದಿ ಹಂಚಿಕೊಳ್ಳುತ್ತಿದ್ದಾರೆ. ಈ ಮೂಲಕ ವಿಜಯ್​ ಅವರನ್ನು ನೆನಪಿಸಿಕೊಂಡಿದ್ದಾರೆ. ಚಕ್ರವರ್ತಿ ಚಂದ್ರಚೂಡ್​ ಅವರು ‘ಗೆಳೆಯ ನೀನಿರಬೇಕಿತ್ತು’ ಎನ್ನುವ ಕ್ಯಾಪ್ಶನ್​ನೊಂದಿಗೆ ಈ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ, ಈ ವಿಡಿಯೋ ಸಾಕಷ್ಟು ವೈರಲ್​ ಆಗುತ್ತಿದೆ.

ಇದನ್ನೂ ಓದಿ: ‘ಸಂಚಾರಿ ವಿಜಯ್ ರೀತಿ ನನಗೂ ಅವಮಾನ ಆಗಿದೆ‘; ‘ಜೊತೆ ಜೊತೆಯಲಿ’ ಅನಿರುದ್ಧ ಹೇಳಿದ ಕಹಿ ಸತ್ಯ

ಸಂಚಾರಿ ವಿಜಯ್ ಜನ್ಮದಿನಕ್ಕೂ ಮೊದಲೇ ಅಭಿಮಾನಿಗಳಿಗೆ ಸಿಕ್ತು ವಿಶೇಷ ಗಿಫ್ಟ್​

Read Full Article

Click on your DTH Provider to Add TV9 Kannada