ಅನುಷ್ಕಾ ಶೆಟ್ಟಿ ಪಾಲಿಗೆ ಮತ್ತೆ ನಾಗವಲ್ಲಿ ಪಾತ್ರ? ಫ್ಯಾನ್ಸ್ ಕಿವಿ ಚುರುಕಾಗಿಸಿದೆ ಈ ಸುದ್ದಿ

‘ಚಂದ್ರಮುಖಿ’ ಸೀಕ್ವೆಲ್​ ಮಾಡಲಿರುವ ನಿರ್ದೇಶಕ ರಾಘವ ಲಾರೆನ್ಸ್​ ಅವರು ಅನುಷ್ಕಾ ಶೆಟ್ಟಿ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ.

TV9kannada Web Team

| Edited By: Madan Kumar

Sep 20, 2021 | 9:56 AM

ರಾಘವ ಲಾರೆನ್ಸ್​ ನಿರ್ದೇಶನ ಮಾಡಲಿರುವ ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ಅವರು ನಾಗವಲ್ಲಿ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ಕೇಳಿ ಅಭಿಮಾನಿಗಳಲ್ಲಿ ನಿರೀಕ್ಷೆ ಮೂಡಿದೆ. 2006ರಲ್ಲಿ ತಮಿಳಿನಲ್ಲಿ ‘ಚಂದ್ರಮುಖಿ’ ಸಿನಿಮಾ ತೆರೆಕಂಡಿತ್ತು. ತೆಲುಗಿಗೂ ಡಬ್​ ಆಗಿ ಆ ಚಿತ್ರ ಬಿಡುಗಡೆ ಆಗಿತ್ತು. ಅದರ ಮುಂದುವರಿದ ಭಾಗ ಎಂಬಂತೆ ತೆಲುಗಿನಲ್ಲಿ ‘ನಾಗವಲ್ಲಿ’ ಚಿತ್ರ ನಿರ್ಮಾಣವಾದಾಗ ಅದರಲ್ಲಿ ನಾಗವಲ್ಲಿ ಪಾತ್ರ ಮಾಡುವ ಅವಕಾಶ ಅನುಷ್ಕಾ ಶೆಟ್ಟಿಗೆ ಒಲಿದಿತ್ತು. ಈಗ ತಮಿಳಿನಲ್ಲಿ ‘ಚಂದ್ರಮುಖಿ’ ಸೀಕ್ವೆಲ್​ ಸಿದ್ಧವಾಗುತ್ತಿದೆ. ಅದಕ್ಕೆ ರಾಘವ ಲಾರೆನ್ಸ್​ ನಿರ್ದೇಶನ ಮಾಡಲಿದ್ದಾರೆ. ಈ ಸಿನಿಮಾದಲ್ಲಿಯೂ ನಾಗವಲ್ಲಿ ಪಾತ್ರಕ್ಕೆ ಅನುಷ್ಕಾ ಅವರೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆಯಂತೆ.

ಈಗಾಗಲೇ ರಾಘವ ಲಾರೆನ್ಸ್​ ಮತ್ತು ಅನುಷ್ಕಾ ಶೆಟ್ಟಿ ನಡುವೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಅಂತಿಮವಾಗಿ ಅವರು ಒಪ್ಪಿಕೊಳ್ಳುತ್ತಾರೋ ಇಲ್ಲವೋ ಎಂಬ ಕೌತುಕ ಮೂಡಿದೆ. ‘ನಾಗವಲ್ಲಿ’, ‘ಅರುಂಧತಿ’ ರೀತಿಯ ಸೂಪರ್​ ನ್ಯಾಚುರಲ್​ ಕಥೆ ಇರುವ ಸಿನಿಮಾಗಳಲ್ಲಿ ಅನುಷ್ಕಾರನ್ನು ನೋಡಲು ಜನರು ಇಷ್ಟಪಡುತ್ತಾರೆ. ಆ ಕಾರಣಕ್ಕಾಗಿಯೇ ಅವರಿಗೆ ಈ ಆಫರ್​ ನೀಡಲಾಗಿದೆ ಎಂಬ ಮಾತು ಟಾಲಿವುಡ್​ ಅಂಗಳದಿಂದ ಕೇಳಿಬರುತ್ತಿದೆ.

ಇದನ್ನೂ ಓದಿ:

‘ಫಾಲೋ ಮಿ’; ಅಭಿಮಾನಿಗಳ ಬಳಿ ಅನುಷ್ಕಾ ಶೆಟ್ಟಿ ಮಾಡಿದ್ರು ವಿಶೇಷ ಮನವಿ

ದೀಪಿಕಾ, ಕತ್ರಿನಾ ಮಾತ್ರವಲ್ಲ, ಅನುಷ್ಕಾ ಶೆಟ್ಟಿ ಮೇಲೂ ಕಣ್ಣಿಟ್ಟಿದ್ದ ರಣಬೀರ್; ಬಹಿರಂಗವಾಗಿ ಹೇಳಿಕೊಂಡಿದ್ದ ನಟ

Follow us on

Click on your DTH Provider to Add TV9 Kannada