Junior NTR: ಅಬ್ಬಾ, RRR​ ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?

Junior NTR: ಅಬ್ಬಾ, RRR​ ಚಿತ್ರದಲ್ಲಿ ಹೀರೋಗೂ ಇದೆ ಐಡಿ ಕಾರ್ಡ್; ಅದಕ್ಕೆ ರಾಜಮೌಳಿ ರಿಯಾಕ್ಷನ್ ಏನು?
ಜೂನಿಯರ್ ಎನ್​ಟಿಆರ್ ಮತ್ತು ರಾಜಮೌಳಿ ತಮ್ಮ ಐಡಿ ಕಾರ್ಡ್​ಗಳೊಂದಿಗೆ

SS Rajamouli: ತೆಲುಗಿನ ಜನಪ್ರಿಯ ನಟ, ಆರ್​ಆರ್​ಆರ್ ಚಿತ್ರದ ನಾಯಕರಲ್ಲೊಬ್ಬರಾದ ಜೂನಿಯರ್ ಎನ್​ಟಿಆರ್ ಅವರಿಗೆ ಶೂಟಿಂಗ್ ಸೆಟ್​ನಲ್ಲಿ ಮೊದಲ ಬಾರಿಗೆ ಐಡಿ ಕಾರ್ಡ್​ ಅನ್ನು ನೀಡಲಾಗಿದೆ. ನಿರ್ದೇಶಕ ರಾಜಮೌಳಿ ಅವರೊಂದಿಗಿನ ಚಿತ್ರವನ್ನು ಹಂಚಿಕೊಂಡಿರುವ ಜೂನಿಯರ್ ಎನ್​ಟಿಆರ್, ಅದಕ್ಕೆ ಅಚ್ಚರಿಯ ಅಡಿಬರಹವನ್ನೂ ನೀಡಿದ್ದಾರೆ.

TV9kannada Web Team

| Edited By: shivaprasad.hs

Aug 06, 2021 | 8:00 PM

ಆರ್​ಆರ್​ಆರ್ ಚಿತ್ರತಂಡ ಸದ್ಯ ಉಕ್ರೇನ್​ನಲ್ಲಿ ಬೀಡುಬಿಟ್ಟಿದೆ. ಚಿತ್ರದ ಅಂತಿಮ ಹಂತದ ಚಿತ್ರೀಕರಣಕ್ಕಾಗಿ ಉಕ್ರೇನ್ ದೇಶಕ್ಕೆ ತೆರಳಿರುವ ಚಿತ್ರತಂಡ ಸದ್ಯ ಕೊರೊನಾ ಸಂದರ್ಭದ ನಡುವೆಯೂ ಚಿತ್ರೀಕರಣ ನಡೆಸುತ್ತಿದೆ. ಉಕ್ರೇನ್​ನಲ್ಲಿ ಚಿತ್ರತಂಡದ ಎಲ್ಲರಿಗೂ ಐಡಿ ಕಾರ್ಡ್ ಅನ್ನು ನೀಡಲಾಗಿದ್ದು, ಎಲ್ಲರಿಗೂ ಅದನ್ನು ಧರಿಸುವುದು ಕಡ್ಡಾಯವಾಗಿದೆ. ಇದಕ್ಕೆ ನಿರ್ದೇಶಕ ರಾಜಮೌಳಿ ಹಾಗೂ ಜೂನಿಯರ್ ಎನ್​ಟಿಆರ್ ಅವರೂ ಹೊರತಾಗಿಲ್ಲ. ಗುರುವಾರ(ಆಗಸ್ಟ್ 5) ಜೂ.ಎನ್​ಟಿಆರ್ ಇನ್ಸ್ಟಾಗ್ರಾಂನಲ್ಲಿ ಚಿತ್ರವೊಂದನ್ನು ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಐಡಿ ಕಾರ್ಡ್ ಫೊಟೊವನ್ನು ಬಹಿರಂಗಪಡಿಸಿದ್ದಾರೆ.

ಜೂನಿಯರ್ ಎನ್​ಟಿಆರ್ ಐಡಿ ಕಾರ್ಡ್ ಅನ್ನು ಧರಿಸಿ, ಫೊಟೊಗೆ ಪೋಸ್ ನೀಡಿದ್ದಾರೆ. ಎಲ್ಲರನ್ನೂ ಸೆಳೆದಿರುವುದು ಅವರ ಹಿಂದೆ ಕುಳಿತಿರುವ ರಾಜಮೌಳಿ ಅವರ ಭಂಗಿ. ನನಗೂ ಐಡಿ ಕಾರ್ಡ್ ಇದೆ ಎಂಬ ಭಾವದಲ್ಲಿ ತಮ್ಮ ಐಡಿ ಕಾರ್ಡ್​ಅನ್ನೂ ರಾಜಮೌಳಿ ಎತ್ತಿ ತೋರಿಸುತ್ತಿದ್ದಾರೆ. ಜೂ.ಎನ್​ಟಿಆರ್ ಹಂಚಿಕೊಂಡಿರುವ ಮತ್ತೊಂದು ಫೊಟೊದಲ್ಲಿ ತಮ್ಮ ಐಡಿ ಕಾರ್ಡ್​ನ ಕ್ಲೋಸ್ ಅಪ್ ಫೊಟೊವನ್ನು ಶೇರ್ ಮಾಡಿದ್ದಾರೆ. ಅದರಲ್ಲಿ ನಂದಮೂರಿ ತಾರಕ  ರಾಮ ರಾವ್ (ಎನ್​ಟಿಆರ್), ಹೀರೊ ಎಂದು ಬರೆಯಲಾಗಿದೆ.

ಜೂನಿಯರ್ ಎನ್​ಟಿಆರ್ ಹಂಚಿಕೊಂಡ ಚಿತ್ರ:

View this post on Instagram

A post shared by Jr NTR (@jrntr)

ಸದ್ಯದಲ್ಲಿ ಐಡಿ ಕಾರ್ಡ್  ಧರಿಸೇ ಇರಲಿಲ್ಲವಂತೆ ಜೂ.ಎನ್​ಟಿಆರ್!: ತಾವು ಹಂಚಿಕೊಂಡ ಚಿತ್ರಕ್ಕೆ ಅಡಿಬರಹವನ್ನೂ ನೀಡಿರುವ ಜೂನಿಯರ್ ಎನ್​ಟಿಆರ್, ತಾವು ಇತ್ತೀಚೆಗೆ ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲ. ಇದೇ ಮೊದಲ ಬಾರಿ ಎಂದು ಸಂಭ್ರಮ ಹಂಚಿಕೊಂಡಿದ್ದಾರೆ. ಅದರಲ್ಲೂ ಚಿತ್ರೀಕರಣದ ಸೆಟ್​ಗಳಲ್ಲಿ ಅವರು ಐಡಿ ಕಾರ್ಡ್ ಧರಿಸಿಯೇ ಇರಲಿಲ್ಲವಂತೆ. ಬಿಗ್​ ಬಜೆಟ್​ನಲ್ಲಿ ಆರ್​ಆರ್​ಆರ್ ತಯಾರಾಗುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ಹೊಸತನ್ನು ಪರಿಚಯಿಸುತ್ತಿದೆ. ಅದಕ್ಕೆ ಜೂನಿಯರ್ ಎನ್​ಟಿಆರ್ ಅವರಿಗೆ ಐಡಿ ಕಾರ್ಡ್ ಕೊಟ್ಟಿದ್ದನ್ನೂ ಸೇರಿಸಿಕೊಳ್ಳಬಹುದು ಬಿಡಿ ಎಂದು ಅಭಿಮಾನಿಗಳು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಉಕ್ರೇನ್​ನಲ್ಲಿ ಚಿತ್ರದ ಮುಖ್ಯ ಭಾಗಗಳನ್ನು ಚಿತ್ರೀಕರಿಸಲು ಚಿತ್ರತಂಡ ಸಿದ್ಧತೆ ನಡೆಸಿದೆ. ಉಕ್ರೇನ್​ಗೆ ವಿಮಾನ ಲ್ಯಾಂಡ್ ಆಗುವ ಸಂದರ್ಭವನ್ನೂ ಚಿತ್ರತಂಡ ಈ ಮೊದಲು ಹಂಚಿಕೊಂಡಿತ್ತು. ಸುಮಾರು 450ಕೋಟಿ ಬಜೆಟ್​ನಲ್ಲಿ ತಯಾರಾಗುತ್ತಿರುವ ಈ ಚಿತ್ರವನ್ನು ಅಕ್ಟೋಬರ್ 13ರಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.

ಇದನ್ನೂ ಓದಿ:

Hombale Films: ಹೊಂಬಾಳೆ ಫಿಲ್ಮ್ಸ್​ನ 11ನೇ ಚಿತ್ರ ಕಾಂತಾರ; ನಿರ್ದೇಶಕ ಮತ್ತು ನಾಯಕನಾಗಿ ರಿಷಬ್ ಶೆಟ್ಟಿ

ದಕ್ಷಿಣ ಭಾರತಕ್ಕೆ ವಲಸೆ ಹೊರಟ ಬಾಲಿವುಡ್​ನ ಖ್ಯಾತ ನಟಿಯರು; ಅದ್ದೂರಿ ಚಿತ್ರಗಳಲ್ಲಿ ಬಣ್ಣಹಚ್ಚಲು ತಯಾರು!

(Junior NTR shares pics of his ID card in RRR sets and see Rajamouli’s reaction)

Follow us on

Most Read Stories

Click on your DTH Provider to Add TV9 Kannada