ಬಿಡುವಿಲ್ಲದೆ ದುಡಿಯುವ ಬಾಲಿವುಡ್ ತಾರೆಯರು ಸೆಟ್​ಗಳಲ್ಲಿ ಮೂರ್ಛೆ ಹೋದ ಪ್ರಸಂಗಳು ಒಂದೆರಡಲ್ಲ!

ಬಿಡುವಿಲ್ಲದೆ ದುಡಿಯುವ ಬಾಲಿವುಡ್ ತಾರೆಯರು ಸೆಟ್​ಗಳಲ್ಲಿ ಮೂರ್ಛೆ ಹೋದ ಪ್ರಸಂಗಳು ಒಂದೆರಡಲ್ಲ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 01, 2021 | 6:54 PM

ಕನ್ನಡದ ಮತ್ತೊಬ್ಬ ಹುಡುಗಿ ಐಶ್ವರ್ಯ ರೈ ಬಚ್ಚನ್ ಅವರು 2017 ರಲ್ಲಿ ತಮಿಳು ಸಿನಿಮಾವೊಂದರ ಶೂಟ್​ನಲ್ಲಿದ್ದಾಗ ಮೂರ್ಛೆ ಹೋಗಿದ್ದರು. ಕಪೂರ್ ಖಾಂದಾನಿನ ಸೊಸೆಯಾಗ ಹೊರಟಿರುವ ಆಲಿಯಾ ಭಟ್ ಗೆ ಸೆಟ್ ಗಳಲ್ಲಿ ಹಾಗೆ ಪ್ರಜ್ಞೆ ತಪ್ಪಿ ಬೀಳೋದು ಒಂದು ವಿಷಯವೇ ಅಲ್ಲ.

ಸಿನಿಮಾ ತಾರೆಯರು ಅದರಲ್ಲೂ ವಿಶೇಷವಾಗಿ ನಟಿಯರು ಬಿಡುವಿಲ್ಲದೆ ದುಡಿಯುತ್ತಾರೆ ಮತ್ತು ಅದು ಅವರಿಗೆ ಅನಿವಾರ್ಯವೂ ಹೌದು. ಅವರ ವೃತ್ತಿಯೇ ಹಾಗೆ, ಜನಪ್ರಿಯತೆಯ ಉತ್ತುಂಗದಲ್ಲಿರುವ ನಟಿಯರು ತಮ್ಮ ಕಮಿಟ್ಮೆಂಟ್ಗಳನ್ನು ಪೂರೈಸಲು ಎರಡು-ಮೂರು ಶಿಫ್ಟ್ಗಳಲ್ಲಿ ಕೆಲಸ ಮಾಡುತ್ತಾರೆ. ಊಟ-ತಿಂಡಿ ಸಮಯಕ್ಕೆ ಸರಿಯಾಗಿ ತಿನ್ನಲಾರರು, ಕಾರಲ್ಲಿ ಒಂದು ಸೆಟ್ ನಿಂದ ಮತ್ತೊಂದು ಸೆಟ್ ಪ್ರಯಾಣಿಸುವಾಗಲಷ್ಟೇ ನಿದ್ರೆ-ವಿಶ್ರಾಂತಿರಹಿತ ಕೆಲಸದಿಂದಾಗೇ ಅವರು ಸೆಟ್ ಗಳಲ್ಲಿ ಪ್ರಜ್ಞೆ ತಪ್ಪಿ ಬೀಳುವಂಥ ಪ್ರಸಂಗಗಳು ನಡೆಯುತ್ತಿರುತ್ತವೆ.

ನಿಮಗೆ ನೆನಪಿರಬಹುದು, ನಮ್ಮ ಕನ್ನಡದ ಹುಡುಗಿ ದೀಪಿಕಾ ಪಡುಕೋಣೆ ‘ಹ್ಯಾಪಿ ನ್ಯೂ ಈಯರ್,’ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದಾಗ ಸತತವಾಗಿ 16 ಗಂಟೆಗಳ ಕಾಲ ಕೆಲಸ ಮಾಡಿದ್ದರಂತೆ. ಅದಾದ ಮರುದಿನವೇ ಅವರೊಂದು ಅವಾರ್ಡ್ ಸಮಾಂರಂಭದಲ್ಲಿ ಪಾಲ್ಗೊಂಡಿದ್ದರು. ಸಮಾರಂಭ ನಡೆಯುತ್ತಿದ್ದಾಗ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದರು. ಉಪಚರಿಸಿದ ನಂತರ ಅವರ ಸರಿಯಾದಕನ್ನಡದ ಮತ್ತೊಬ್ಬ ಹುಡುಗಿ ಐಶ್ವರ್ಯ ರೈ ಬಚ್ಚನ್ ಅವರು 2017 ರಲ್ಲಿ ತಮಿಳು ಸಿನಿಮಾವೊಂದರ ಶೂಟ್​ನಲ್ಲಿದ್ದಾಗ ಮೂರ್ಛೆ ಹೋಗಿದ್ದರು. ಕಪೂರ್ ಖಾಂದಾನಿನ ಸೊಸೆಯಾಗ ಹೊರಟಿರುವ ಆಲಿಯಾ ಭಟ್ ಗೆ ಸೆಟ್ ಗಳಲ್ಲಿ ಹಾಗೆ ಪ್ರಜ್ಞೆ ತಪ್ಪಿ ಬೀಳೋದು ಒಂದು ವಿಷಯವೇ ಅಲ್ಲರು.

ಕನ್ನಡದ ಮತ್ತೊಬ್ಬ ಹುಡುಗಿ ಐಶ್ವರ್ಯ ರೈ ಬಚ್ಚನ್ ಅವರು 2017 ರಲ್ಲಿ ತಮಿಳು ಸಿನಿಮಾವೊಂದರ ಶೂಟ್​ನಲ್ಲಿದ್ದಾಗ ಮೂರ್ಛೆ ಹೋಗಿದ್ದರು. ಕಪೂರ್ ಖಾಂದಾನಿನ ಸೊಸೆಯಾಗ ಹೊರಟಿರುವ ಆಲಿಯಾ ಭಟ್ ಗೆ ಸೆಟ್ ಗಳಲ್ಲಿ ಹಾಗೆ ಪ್ರಜ್ಞೆ ತಪ್ಪಿ ಬೀಳೋದು ಒಂದು ವಿಷಯವೇ ಅಲ್ಲ ಮಾರಾಯ್ರೇ. ಯಾಕೆ ಗೊತ್ತುಂಟೋ?

ಅವರು ಶೂಟಿಂಗ್ ಗಳಲ್ಲಿ ಭಾಗವಹಿಸಿದ್ದಾಗ ಹಲವಾರು ಬಾರಿ ಮೂರ್ಛೆ ತಪ್ಪಿದ್ದಾರೆ. ಮೊನ್ನೆ ‘ಗಂಗೂಬಾಯಿ ಕಥಿಯಾವಾಡಿ’ ಸಿನಿಮಾದ ಸೆಟ್ನಲ್ಲಿ ಅವರು ಫೇಂಟ್ ಆಗಿದ್ದರು, ಇದಕ್ಕೆ ಮೊದಲು ‘ಸ್ಟೂಡೆಂಟ್ ಆಫ್ ದಿ ಈಯರ್’ ಮತ್ತು ‘ಶಾನ್ದಾರ್’ ಚಿತ್ರಗಳ ಸೆಟ್ಗಳಲ್ಲೂ ಅವರು ಪ್ರಜ್ಞೆ ತಪ್ಪಿದ್ದರು.

ಪ್ರಜ್ಞೆ ತಪ್ಪುವ ಕಾಯಿಲೆ ಒಬ್ಬ ವಿಶ್ವ ಸುಂದರಿಗೆ ಕಾಡಿದಂತೆ ಇನ್ನೊಬ್ಬ ಸುಂದರಿಯನ್ನೂ ಕಾಡಿದೆ. ಹೌದು, ಪ್ರಿಯಾಂಕಾ ಚೋಪ್ರಾ ಅವರು ಸಹ ‘ಬಾಜಿರಾವ್ ಮಸ್ತಾನಿ’ ಚಿತ್ರದ ಶೂಟಿಂಗ್ನಲ್ಲಿ ಪಾಲ್ಗೊಂಡಿದ್ದಾಗ ಮೂರ್ಛೆ ತಪ್ಪಿ ಬಿದ್ದಿದ್ದರು. ಚಿತ್ರದ ನಿರ್ದೇಶಕ ಸಂಜಯ ಲೀಲಾ ಭನ್ಸಾಲಿ, ಪ್ರಿಯಾಂಕಾರ ಉಪಚಾರಕ್ಕಾಗಿ 6 ಗಂಟೆಗಳ ಕಾಲ ಚಿತ್ರೀಕರಣ ನಿಲ್ಲಿಸಿದ್ದರಂತೆ.

ಕಿರುತೆರೆಯಲ್ಲಿ ಅತ್ಯಂತ ಬ್ಯೂಸಿಯಾಗಿರುವ ನಟ-ನಟಿಯರು, ಹೋಸ್ಟ್​​​ಗಳು ಸಹ ಫೇಂಟ್ ಆಗಿರುವ ಪ್ರಸಂಗಗಳಿವೆ. ‘ದಿ ಕಪಿಲ್ ಶರ್ಮ ಶೋ’ ಹೋಸ್ಟ್ ಕಪಿಲ್ ಶರ್ಮಗೂ ಈ ರೋಗ ಇದೆ. ಇವರೆಲ್ಲ ಗಳಿಸುವ ದುಡ್ಡಿನೆದಿರು ಇಂಥ ಚಿಕ್ಕಪುಟ್ಟ ಕಾಯಿಲೆಗಳು ಗೌಣವಾಗಿ ಬಿಡುತ್ತವೆ.

ಇದನ್ನೂ ಓದಿ:  ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಸೆರೆ ಹಿಡಿದಿದ್ದು ಹೇಗೆ ಗೊತ್ತಾ? ವಿಡಿಯೋ ಇದೆ