ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಸೆರೆ ಹಿಡಿದಿದ್ದು ಹೇಗೆ ಗೊತ್ತಾ? ವಿಡಿಯೋ ಇದೆ

ಮನೆಯೊಳಗೆ ಅವಿತು ಕುಳಿತಿದ್ದ ಚಿರತೆಯನ್ನು ಸೆರೆ ಹಿಡಿದಿದ್ದು ಹೇಗೆ ಗೊತ್ತಾ? ವಿಡಿಯೋ ಇದೆ

TV9 Web
| Updated By: sandhya thejappa

Updated on: Sep 30, 2021 | 10:37 AM

ಸ್ಥಳಕ್ಕೆ ಬಂದ ಅಧಿಕಾರಿಗಳು ಬೋನು ಇರಿಸಿ ಚಿರತೆಯನ್ನು ಹಿಡಿದಿದ್ದಾರೆ. ಸೆರೆ ಸಿಕ್ಕ ಹೆಣ್ಣು ಚಿರತೆಗೆ ಒಂದು ವರ್ಷವಾಗಿದೆ. ಚಿರತೆಯ ಆರೋಗ್ಯ ತಪಾಸಣೆ ಮಾಡಿ, ಪಶು ವೈದ್ಯಾಧಿಕಾರಿ ಆರೋಗ್ಯ ದೃಢಿಕರಿಸಿದ್ದಾರೆ.

ಚಿರತೆಯೊಂದು ಮನೆಯೊಳಗೆ ಅವಿತು ಕುಳಿತು ಭಯ ಸೃಷ್ಟಿಸಿತ್ತು. ಉಡುಪಿ ಜಿಲ್ಲೆಯ ಬ್ರಹ್ಮಾವರ ಚಾಂತಾರು ಅಗ್ರಹಾರದ ಕೃಷ್ಣಮೂರ್ತಿ ಕೆದಿಲಾಯ ಎಂಬುವವರ ಮನೆಯಲ್ಲಿ ಚಿರತೆ ಅವಿತು ಕುಳಿತಿತ್ತು. ಮನೆಯವರು ಬಲೆ ಹಾಕಿ ಚಿರತೆಯನ್ನು ಬಂಧಿಸಿದ್ದರು. ನಂತರ ಬ್ರಹ್ಮಾವರ ಪೊಲೀಸ್ ಮತ್ತು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಬೋನು ಇರಿಸಿ ಚಿರತೆಯನ್ನು ಹಿಡಿದಿದ್ದಾರೆ. ಸೆರೆ ಸಿಕ್ಕ ಹೆಣ್ಣು ಚಿರತೆಗೆ ಒಂದು ವರ್ಷವಾಗಿದೆ. ಚಿರತೆಯ ಆರೋಗ್ಯ ತಪಾಸಣೆ ಮಾಡಿ, ಪಶು ವೈದ್ಯಾಧಿಕಾರಿ ಆರೋಗ್ಯ ದೃಢಿಕರಿಸಿದ್ದಾರೆ. ನಂತರ ಸಿದ್ಧಾಪುರ ಬಳಿಯ ಹೊಸಂಗಡಿ ಕಾಡಿನಲ್ಲಿ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸ್ವತಂತ್ರಗೊಳಿಸಿದರು.