ಆತ್ಮಹತ್ಯೆ ಮಾಡಿಕೊಂಡ ನಟಿ ಸವಿ ಮಾದಪ್ಪ ಡೆತ್ ನೋಟ್ ಪತ್ತೆ; ಎಲ್ಲರಲ್ಲೂ ಕ್ಷಮೆ ಕೇಳಿದ್ದೇಕೆ?
ಸವಿ ಮಾದಪ್ಪ ಬಾಯ್‌ಫ್ರೆಂಡ್ ವಿವೇಕ್ ಜತೆ ವಾಸವಿದ್ದರು ಎನ್ನಲಾಗಿದೆ. ಊಟ ತರುವಂತೆ ವಿವೇಕ್ಗೆ ಹೇಳಿದ್ದರು. ವಿವೇಕ್ ಊಟ ತರೋಕೆ ಹೊರಗೆ ಹೋಗಿದ್ದರು. ಈ ವೇಳೆ ಸವಿ ಮಾದಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸ್ಯಾಂಡಲ್ವುಡ್ ನಟಿ ಸವಿ ಮಾದಪ್ಪ ಅವರು ನೇಣಿಗೆ ಶರಣಾಗಿದ್ದಾರೆ. ಕೊಡಗು ಜಿಲ್ಲೆ ಕುಶಾಲ ನಗರದವರಾದ ಅವರು ‘ಚೌಕಟ್ಟು’, ‘ಫನ್’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದರು. ಬೆಂಗಳೂರಿನ ಅಪಾರ್ಟ್ಮೆಂಟ್ವೊಂದಲ್ಲಿ ಬಾಯ್ ಫ್ರೆಂಡ್ ವಿವೇಕ್ ಎಂಬುವವರ ಜೊತೆ ವಾಸಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಗುರುವಾರ (ಸೆ.30) ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಕೂಡ ಪತ್ತೆ ಆಗಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತಂದೆ, ತಾಯಿ ಮತ್ತು ಸ್ನೇಹಿತರ ಬಳಿ ಸವಿ ಮಾದಪ್ಪ ಕ್ಷಮೆ ಕೇಳಿದ್ದಾರೆ. ‘ಅಪ್ಪ ನಾನು ಈಗಾಗಲೇ ಹೇಳಿರುವಂತೆ ಇದನ್ನು ನನಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಅಮ್ಮ ನಾನು ಇಂದು ಮನೆಗೆ ಬರುತ್ತೇನೆ ಅಂತ ಹೇಳಿದ್ದೆ. ಆದರೆ ಈ ರೀತಿ ಬರುತ್ತಿರುವುದಕ್ಕೆ ಕ್ಷಮೆ ಇರಲಿ. ನನ್ನ ಮನಸಿಕ ಸ್ಥಿತಿ ಚೆನ್ನಾಗಿಲ್ಲ’ ಎಂದು ಅವರು ಡೆತ್ನೋಟ್ನಲ್ಲಿ ಬರೆದು ಪ್ರಾಣ ಬಿಟ್ಟಿದ್ದಾರೆ.
ಇದನ್ನೂ ಓದಿ:
ಆತ್ಮಹತ್ಯೆಗೂ ಮುನ್ನ ಅಪ್ಪನಿಂದ 1 ಲಕ್ಷ ರೂ. ಪಡೆದಿದ್ದ ನಟಿ ಸವಿ ಮಾದಪ್ಪ; ಸಾವಿನ ಸುತ್ತ ಹೆಚ್ಚಿತು ಅನುಮಾನ
ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಭಾವುಕ ಪೋಸ್ಟ್ ಹಾಕಿದ್ದ ಸ್ಯಾಂಡಲ್ವುಡ್ ನಟಿ
ಅದೊಂದು ತೀರ್ಮಾನದಿಂದ ಪಕ್ಷದ ಪರವಾಗಿ ಶ್ರಿಗಳಿಗೆ ಕ್ಷಮೆ ಕೋರಿದ್ದೆ: ಡಿಕೆಶಿ
ಪ್ರಿಯಾಂಕಾ ಉಪೇಂದ್ರ 50ನೇ ಸಿನಿಮಾ ‘ಡಿಟೆಕ್ಟಿವ್ ತೀಕ್ಷ್ಣ’ ನಟಿ ಹೇಳಿದ್ದೇನು
‘ರಾಮಾಯಣ’ದಲ್ಲಿ ಯಶ್ ಲುಕ್, ಚಿತ್ರ ಸಾಹಿತಿ ಪ್ರಹ್ಲಾದ್ ವಿಶ್ಲೇಷಣೆ
ಗುಡ್ಡ ಕುಸಿತ: ದುರಂತದ ಭಯಾನಕ ಕ್ಷಣವನ್ನು ಬಿಚ್ಚಿಟ್ಟಿ ಪ್ರತ್ಯಕ್ಷದರ್ಶಿ

