ಕರ್ನಾಟಕದಲ್ಲಿ ನಾನು ಭಿಕ್ಷುಕಿ, ನಿತ್ಯ ಎಲ್ಲದಕ್ಕೂ ಭಿಕ್ಷೆ ಎತ್ತುತ್ತಲೇ ಇರಬೇಕು; ನಟಿ ವಿಜಯಲಕ್ಷ್ಮಿ

ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ಅವರು ಸೆಪ್ಟೆಂಬರ್​ 27ರಂದು ಮೃತಪಟ್ಟಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತುಈ ಬೆನ್ನಲ್ಲೇ ವಿಜಯಲಕ್ಷ್ಮಿ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ.

ವಿಜಯಲಕ್ಷ್ಮಿ ಅವರು ಚಿತ್ರರಂಗದಲ್ಲಿ ಆ್ಯಕ್ಟಿವ್​ ಆಗಿಲ್ಲ. ಆದರೆ, ಇತ್ತೀಚೆಗೆ ಅವರು ಸುದ್ದಿಯಲ್ಲಿದ್ದಾರೆ. ಅವರ ಸಹೋದರಿ ಉಷಾ ಅವರಿಗೆ ಅನಾರೋಗ್ಯ ಕಾಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇತ್ತೀಚೆಗೆ ವಿಜಯಲಕ್ಷ್ಮಿಗೆ ಕೊವಿಡ್​ ಅಂಟಿತ್ತು. ಇದರಿಂದ ಅವರ ಆರೋಗ್ಯ ಗಂಭೀರವಾಗಿತ್ತು. ಇದರಿಂದ ಚೇತರಿಸಿಕೊಳ್ಳುತ್ತಿದ್ದಂತೆ ಅವರು ತಾಯಿಯನ್ನು ಕಳೆದುಕೊಂಡಿದ್ದರು.

ವಿಜಯಲಕ್ಷ್ಮಿ ತಾಯಿ ವಿಜಯಾ ಸುಂದರಂ ಅವರು ಸೆಪ್ಟೆಂಬರ್​ 27ರಂದು ಮೃತಪಟ್ಟಿದ್ದರು. ಅವರಿಗೆ 75 ವರ್ಷ ವಯಸ್ಸಾಗಿತ್ತುಈ ಬೆನ್ನಲ್ಲೇ ವಿಜಯಲಕ್ಷ್ಮಿ ಸುದ್ದಿಗೋಷ್ಠಿ ಕರೆದು ಮಾತನಾಡಿದ್ದಾರೆ. ‘ನಂಗೆ ಯಾರೂ ಇಲ್ಲ. ನಾನೀಗ ಅನಾಥೆ. ನನಗೆ ಚಿತ್ರರಂಗವೇ ಕುಟುಂಬ. ನನಗೆ ಯಾರೋ ಭಿಕ್ಷುಕಿ ಎಂದು ಬೈದರು. ಹೌದು ಕರ್ನಾಟಕದಲ್ಲಿ ನಾನು ಭಿಕ್ಷುಕಿಯೇ. ನಿತ್ಯ ಒಂದಲ್ಲ ಒಂದು ವಿಚಾರಕ್ಕೆ ಭಿಕ್ಷೆ ಎತ್ತಲೇ ಬೇಕು’ ಎಂದರು ಅವರು.

ಇದನ್ನೂ ಓದಿ: ‘ನಾನೀಗ ಅನಾಥೆ, ನನಗೆ ಯಾರೂ ಇಲ್ಲ’; ತಾಯಿ ಕಳೆದುಕೊಂಡ ನಟಿ ವಿಜಯಲಕ್ಷ್ಮಿ ಭಾವುಕ ಮಾತು

Click on your DTH Provider to Add TV9 Kannada