ಪ್ರಚಂಡ ಪ್ರತಿಭೆಯ ವಿಜಯ್ ಸೇತುಪತಿ ಸಿನಿಮಾರಂಗಕ್ಕೆ ಕಾಲಿಡುವ ಮೊದಲು ಚಿಕ್ಕಪುಟ್ಟ ಕೆಲಸ ಮಾಡಿಕೊಂಡು ಬದುಕು ನಡೆಸುತ್ತಿದ್ದರು
ಅವರಿಗೆ ಸಿನಿಮಾನಲ್ಲಿ ಮೊದಲ ಬಾರಿಗೆ ಅವಕಾಶ ಸಿಕ್ಕಿದ್ದು 2006 ರಲ್ಲಿ. ಅಲ್ಲಿಂದ ಶುರುವಾದ ಅವರ ಸಿನಿಮಾಯಾನ ತಡೆರಹಿತವಾಗಿ ಬುಲೆಟ್ ಎಕ್ಸ್ಪ್ರೆಸ್ ನಂತೆ ಸಾಗಿದೆ. ವರ್ಷಕ್ಕೆ ಅವರು ಕನಿಷ್ಟ 7-8 ಚಿತ್ರಗಳಲ್ಲಿ ನಟಿಸುತ್ತಾರೆ.
ದಕ್ಷಿಣ ಭಾರತ ಸಿನಿಮಾ ಕ್ಷೇತ್ರದಲ್ಲಿ ವಿಜಯ ಸೇತುಪತಿ ಈಗ ಬಹಳ ದೊಡ್ಡ ಹೆಸರು. ಅವರ ಅಭಿನಯ ಕೌಶಲ್ಯಕ್ಕೆ ಮಾರುಹೋಗದವರೇ ಇಲ್ಲ. ಮೂಲತಃ ತಮಿಳುನಾಡಿನವರಾಗಿರುವ ಅವರು ಶ್ರೀಮಂತ ಪ್ರತಿಭೆಯ ನಟ, ಪಾತ್ರ ಯಾವುದೇ ಅಗಿರಲಿ ಅದಕ್ಕೆ ಜೀವ ತುಂಬುವ ಕಲಾವಿದ. 2006 ರಿಂದ ಸಿನಿಮಾರಂಗಕ್ಕೆ ಧುಮುಕುವ ಮೊದಲು ಅವರು ಉಪಜೀವನಕ್ಕಾಗಿ ಪಟ್ಟ ಪಡಿಪಾಟಲು ಅಷ್ಟಿಷ್ಟಲ್ಲ. ಇಬ್ಬರು ಸಹೋದರರು ಮತ್ತೊಬ್ಬ ತಂಗಿಯನ್ನು ಸಲಹುವ ಜವಾಬ್ದಾರಿ ಹೊತ್ತಿದ್ದ ವಿಜಯ್ ಯಾವುದೇ ಕೆಲಸ ಸಿಕ್ಕರೂ ಮಾಡುತ್ತಿದ್ದರು. ಭಾರತದಲ್ಲಿ ತನಗೆ ಸಿಗುತ್ತಿದ್ದ ಆದಾಯದಿಂದ ಬದುಕು ನಿರ್ವಹಣೆ ಕಷ್ಟವೆನಿಸತೊಡಗಿದಾಗ ಕೊಲ್ಲಿ ರಾಷ್ಟ್ರವೊಂದಕ್ಕೆ ತೆರಳಿ ಅಲ್ಲಿ ದುಡಿಯಲಾರಂಭಿಸಿದರು.
ಅಗಲೇ ಜೆಸ್ಸಿ ಹೆಸರಿನ ಯುವತಿಯ ಜೊತೆ ಪ್ರೇಮಪಾಶದಲ್ಲಿ ಸಿಲುಕಿ ಅವರನ್ನು 2003 ರಲ್ಲಿ ಮದುವೆಯಾದರು. 43 ವರ್ಷ ವಯಸ್ಸಿನ ವಿಜಯ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ.
ಹಾಗೆ ನೋಡಿದರೆ, ವಿಜಯ್ ಸಿನಿಮಾಗೆ ಲಾಯಕ್ಕು ಅಂತ ಗುರುತಿಸಿದ್ದು ಹೆಸರಾಂತ ನಿರ್ದೇಶಕ ಬಾಲು ಮಹೇಂದ್ರ. ನಿಮ್ಮ ಮುಖ ಫೊಟೋಜೆನಿಕ್ ಆಗಿದೆ, ಯಾಕೆ ಸಿನಿಮಾಗಳಲ್ಲಿ ನಟಿಸುವ ಯೋಚನೆ ಮಾಡಬಾರದು ಅಂತ ಅವರು ಹೇಳಿದ ನಂತರ, ಬಿ. ಕಾಮ್ ಪದವೀಧರರಾಗಿರುವ ವಿಜಯ್ ಅಕೌಂಟಂಟ್ ಮತ್ತು ನಟನಾಗಿ ಒಂದು ನಾಟಕ ಕಂಪನಿ ಸೇರಿ ಸೇರಿಕೊಂಡರು.
ಅವರಿಗೆ ಸಿನಿಮಾನಲ್ಲಿ ಮೊದಲ ಬಾರಿಗೆ ಅವಕಾಶ ಸಿಕ್ಕಿದ್ದು 2006 ರಲ್ಲಿ. ಅಲ್ಲಿಂದ ಶುರುವಾದ ಅವರ ಸಿನಿಮಾಯಾನ ತಡೆರಹಿತವಾಗಿ ಬುಲೆಟ್ ಎಕ್ಸ್ಪ್ರೆಸ್ ನಂತೆ ಸಾಗಿದೆ. ವರ್ಷಕ್ಕೆ ಅವರು ಕನಿಷ್ಟ 7-8 ಚಿತ್ರಗಳಲ್ಲಿ ನಟಿಸುತ್ತಾರೆ. ಒಂದೆರಡು ಮಲೆಯಾಳಂ, ತೆಲುಗು ಚಿತ್ರಗಳನ್ನು ಬಿಟ್ಟರೆ ಉಳಿದವೆಲ್ಲ ತಮಿಳು ಸಿನಿಮಾಗಳಾಗಿವೆ.
ಅವರು ನಟಿಸುತ್ತಿರುವ ‘ಮುಂಬೈಕರ್’ ಹಿಂದಿ ಚಿತ್ರದ ಶೂಟಿಂಗ್ ಈಗ ನಡೆಯುತ್ತಿದೆ.
ಇದನ್ನೂ ಓದಿ: ವಿಜಯ್ ಪ್ರಕಾಶ್ ಕಂಠದಲ್ಲಿ ಮೂಡಿಬಂತು ‘ಆರಾಮ್ಸೆ’ ಮ್ಯೂಸಿಕ್ ವಿಡಿಯೋ; ಏನಿದರ ವಿಶೇಷ?