ವಿಜಯ್​ ಪ್ರಕಾಶ್ ಕಂಠದಲ್ಲಿ ಮೂಡಿಬಂತು ‘ಆರಾಮ್ಸೆ’ ಮ್ಯೂಸಿಕ್​ ವಿಡಿಯೋ; ಏನಿದರ ವಿಶೇಷ?

TV9kannada Web Team

TV9kannada Web Team | Edited By: Madan Kumar

Updated on: Oct 01, 2021 | 3:47 PM

ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಹಾಗಂತ, ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು ಎನ್ನುವ ಅಂಶ ಹಾಡಿನಲ್ಲಿದೆ. ಹಾಗಾಗಿ ‘ಆರಾಮ್ಸೆ’ ಹಾಡು ಅನೇಕರಿಗೆ ಇಷ್ಟ ಆಗುತ್ತಿದೆ.

ವಿಜಯ್​ ಪ್ರಕಾಶ್ ಕಂಠದಲ್ಲಿ ಮೂಡಿಬಂತು ‘ಆರಾಮ್ಸೆ’ ಮ್ಯೂಸಿಕ್​ ವಿಡಿಯೋ; ಏನಿದರ ವಿಶೇಷ?
ಅಭಿಷೇಕ್ ಮಠದ್, ವಿಜಯ್ ಪ್ರಕಾಶ್

ಬಣ್ಣದ ಲೋಕದಲ್ಲಿ ಕೆಲವರು ಸಡನ್​ ಆಗಿ ಸ್ಟಾರ್ ಆಗಿಬಿಡುತ್ತಾರೆ. ಆದರೆ ಎಲ್ಲರಿಗೂ ಅಂಥ ಅದೃಷ್ಟ ಇರುವುದಿಲ್ಲ. ಪ್ರತಿಭೆ ಇದ್ದರೂ ಕೂಡ ಅವಕಾಶ ಸಿಗದೇ ಕಾಯುತ್ತಾ ಕುಳಿತವರು ಹಲವರು ಇರುತ್ತಾರೆ. ಸೂಕ್ತ ಸಮಯ ಬರುವವರೆಗೂ ಕಾಯುವುದು ಅನಿವಾರ್ಯ. ಅಲ್ಲಿಯವರೆಗೆ ಒಬ್ಬ ಕಲಾವಿದನ ಮನಸ್ಸಿನಲ್ಲಿ ನೂರಾರು ತೊಳಲಾಟ ನಡೆಯುತ್ತಲೇ ಇರುತ್ತದೆ. ಆ ಸಂದರ್ಭವನ್ನು ವಿವರಿಸುತ್ತದೆ ‘ಆರಾಮ್ಸೆ’ ಮ್ಯೂಸಿಕ್ ವಿಡಿಯೋ. ಇದಕ್ಕೆ ಧ್ವನಿ ನೀಡಿರುವುದು ಜನಪ್ರಿಯ ಗಾಯಕ ವಿಜಯ್​ ಪ್ರಕಾಶ್​. ಯೂಟ್ಯೂಬ್‍ನಲ್ಲಿ ಬಿಡುಗಡೆ ಆಗಿರುವ ಈ ಗೀತೆ ಜನಮೆಚ್ಚುಗೆ ಪಡೆದುಕೊಳ್ಳುತ್ತಿದೆ.

ಈ ಗೀತೆಯನ್ನು ನಿರ್ದೇಶಿಸಿ, ನಿರ್ಮಾಣ ಮಾಡಿದ್ದಾರೆ ಅಭಿಷೇಕ್ ಮಠದ್. ಜೀವನದಲ್ಲಿ ಎಷ್ಟೋ ತಿರಸ್ಕಾರಗಳು ಬರುತ್ತವೆ. ಹಾಗಿದ್ದರೂ ಬದುಕನ್ನು ಕೈಬಿಡಬಾರದು. ಇಲ್ಲಿಯೇ ಮುಂದುವರಿಯಬೇಕು ಎನ್ನುವ ಅಂಶ ಹಾಡಿನಲ್ಲಿದೆ. ಹಾಗಾಗಿ ‘ಆರಾಮ್ಸೆ’ ಹಾಡು ಅನೇಕರಿಗೆ ಇಷ್ಟ ಆಗುತ್ತಿದೆ. ಮೇಕಿಂಗ್​ ಗುಣಮಟ್ಟದಿಂದಲೂ ಇದು ಗಮನ ಸೆಳೆಯುತ್ತಿದೆ.

ತಾಜಾ ಸುದ್ದಿ

ಕನ್ನಡ ಮಾತ್ರವಲ್ಲದೆ, ಬಹುಭಾಷೆಯಲ್ಲಿ ಜನಪ್ರಿಯ ಗಾಯಕರಾಗಿ ಗುರುತಿಸಿಕೊಂಡಿರುವ ವಿಜಯ ಪ್ರಕಾಶ್, ಮ್ಯೂಸಿಕ್​ ವಿಡಿಯೋಗಳಿಗೆ ಧ್ವನಿ ನೀಡುವುದು ತುಂಬ ಕಡಿಮೆ. ಆದರೆ, ಈ ಹಾಡಿಗೆ ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ. ಅದಕ್ಕೆ ಕಾರಣವೂ ಇದೆ. ‘ಈ ಹಾಡಿನ ಸಾಹಿತ್ಯ ವಿಜಯ್ ಪ್ರಕಾಶ್ ಅವರಿಗೆ ಇಷ್ಟವಾಗಿ, ಅವರು ಖುಷಿಯಿಂದ ಹಾಡಿದರು. ನಂತರ ಈ ಹಾಡನ್ನು ಚಿತ್ರೀಕರಣ ಮಾಡಿದ ರೀತಿಗೆ ಅವರು ಸಂತಸ ವ್ಯಕ್ತಪಡಿಸಿದರು. ಗಾಯಕ ವಿಜಯ್​ ಪ್ರಕಾಶ್ ನಮಗೆ ಬಹಳ ಬೆಂಬಲ ನೀಡಿದರು’ ಎನ್ನುತ್ತಾರೆ ಅಭಿಷೇಕ ಮಠದ್.

ಈ ಹಿಂದೆ ನಟ ದಿಗಂತ್ ಜೊತೆಗೆ ಅಭಿಷೇಕ್ ಅವರು ಒಂದು ಮ್ಯೂಸಿಕ್ ವಿಡಿಯೋ ಮಾಡಿದ್ದರು. ಅದಕ್ಕೆ ಅವರೇ ನೃತ್ಯ ನಿರ್ದೇಶನ ಮಾಡಿದ್ದರು. ನಂತರ ಚಂದನ್ ಶೆಟ್ಟಿ ಜೊತೆಗೆ ಟಕಿಲಾ, ಬಡಪಾಯಿ ಕುಡುಕ ಸಾಂಗ್‌ಗಳನ್ನು ಮಾಡಿದ್ದಾರೆ. ಈಚೆಗೆ ಅದಿತಿ ಪ್ರಭುದೇವ ಅವರೊಂದಿಗೆ ಪರ್ಫೆಕ್ಟ್ ಗರ್ಲ್ ಎಂಬ ಸಾಂಗ್ ಮಾಡಿದ್ದರು. ಈ ಎಲ್ಲ ಅನುಭವಗಳನ್ನು ಇಟ್ಟುಕೊಂಡಿರುವ ಅವರು ‘ಆರಾಮ್ಸೆ’ ಹಾಡಿನ ಮೂಲಕ ಮತ್ತೆ ಗಮನ ಸೆಳೆಯುತ್ತಿದ್ದಾರೆ. ಸದ್ಯ ಬಳೆಪೇಟೆ ಮತ್ತು ಸಮುದ್ರಂ ಸಿನಿಮಾಗಳಲ್ಲಿ ಅಭಿಷೇಕ್​ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ:

Ananya Bhat: ‘ಪ್ರೀತಿ ಎಂದರೇನು’ ಮ್ಯೂಸಿಕ್​ ವಿಡಿಯೋ ಮೂಲಕ ಗಮನ ಸೆಳೆದ ಅನನ್ಯಾ ಭಟ್​, ಹೃದಯ ಶಿವ

ಗುರುತು ಸಿಗದಂತೆ ಬದಲಾದ ಬಿಗ್​ ಬಾಸ್​ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada