ಗುರುತು ಸಿಗದಂತೆ ಬದಲಾದ ಬಿಗ್​ ಬಾಸ್​ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?

ಏಕ್ತಾ ಕಪೂರ್​ ನಿರ್ಮಾಣ ಮಾಡಿರುವ ‘ಕಾರ್ಟೆಲ್’​ ವೆಬ್​ ಸರಣಿಯಲ್ಲಿ ದಿವ್ಯಾ ಅಗರ್​ವಾಲ್​ ನಟಿಸಿದ್ದಾರೆ. ಇತ್ತೀಚೆಗೆ ಅದು ಬಿಡುಗಡೆ ಆಗಿದ್ದು, ಅದರ ಒಂದು ಲುಕ್​ ಅನ್ನು ಅವರು​ ಶೇರ್​ ಮಾಡಿಕೊಂಡಿದ್ದಾರೆ.

ಗುರುತು ಸಿಗದಂತೆ ಬದಲಾದ ಬಿಗ್​ ಬಾಸ್​ ಮಹಿಳಾ ಸ್ಪರ್ಧಿ; ಈ ಪರಿವರ್ತನೆ ನಂಬಲು ಸಾಧ್ಯವೇ?
ಮುದುಕನ ರೀತಿ ಕಾಣಲು ದಿವ್ಯಾ ಅಗರ್​ವಾಲ್​ ಅವರು ಗಂಟೆಗಟ್ಟಲೆ ಮೇಕಪ್ ಮಾಡಿಕೊಳ್ಳಬೇಕಿತ್ತು
Follow us
TV9 Web
| Updated By: ಮದನ್​ ಕುಮಾರ್​

Updated on: Oct 01, 2021 | 9:34 AM

ನಟಿ ದಿವ್ಯಾ ಅಗರ್​ವಾಲ್​ ಅವರು ಈ ಬಾರಿಯ ಬಿಗ್​ ಬಾಸ್​ ಓಟಿಟಿ ಶೋನಲ್ಲಿ ವಿನ್ನರ್​ ಪಟ್ಟ ಗಿಟ್ಟಿಸಿಕೊಂಡರು. ಗೆದ್ದ ಬಳಿಕ ಎಲ್ಲೆಲ್ಲೂ ಅವರದ್ದೇ ಸುದ್ದಿ. ಬಿಗ್​ ಬಾಸ್​ ಟ್ರೋಫಿ ಎತ್ತಿ ಹಿಡಿದ ನಂತರ ಅವರಿಗೆ ಸಿಗುತ್ತಿರುವ ಅವಕಾಶಗಳ ಕೂಡ ಹೇರಳವಾಗಿವೆ. ವೆಬ್​ ಸಿರೀಸ್​ ಲೋಕದಲ್ಲಂತೂ ಅವರಿಗೆ ಭಾರಿ ಡಿಮ್ಯಾಂಡ್​ ಇದೆ. ಇಷ್ಟೆಲ್ಲ ಸಮಾಚಾರದ ನಡುವೆ ದಿವ್ಯಾ ಅಗರ್​ವಾಲ್​ ಅಚ್ಚರಿಯ ರೀತಿಯಲ್ಲಿ ಬದಲಾಗಿರುವುದು ವಿಶೇಷ. ಏಕಾಏಕಿ ಅವರು ಮುದುಕನ ಅವತಾರ ತಾಳಿದ್ದಾರೆ. ಅದಕ್ಕೆ ಕಾರಣ ಏನೆಂದು ಅಭಿಮಾನಿಗಳು ತಲೆ ಕೆರೆದುಕೊಳ್ಳುವುದಕ್ಕೂ ಮುನ್ನವೇ ಸ್ವತಃ ದಿವ್ಯಾ ಅಗರ್​ವಾಲ್​ ಎಲ್ಲವನ್ನೂ ವಿವರಿಸಿದ್ದಾರೆ.

ರಿಯಾಲಿಟಿ ಶೋ, ಧಾರಾವಾಹಿ, ವೆಬ್​​ ಸರಣಿ, ಮ್ಯೂಸಿಕ್​ ವಿಡಿಯೋಗಳ ಮೂಲಕ ದಿವ್ಯಾ ಅಗರ್​ವಾಲ್​ ಅವರು ಜನಪ್ರಿಯತೆ ಸಂಪಾದಿಸಿದ್ದಾರೆ. ಏಕ್ತಾ ಕಪೂರ್​ ನಿರ್ಮಾಣ ಮಾಡಿರುವ ‘ಕಾರ್ಟೆಲ್’​ ವೆಬ್​ ಸರಣಿಯಲ್ಲೂ ಅವರು ನಟಿಸಿದ್ದಾರೆ. ಇತ್ತೀಚೆಗೆ ಅದು ಬಿಡುಗಡೆ ಆಗಿದ್ದು, ಅದರ ಒಂದು ಲುಕ್​ ಅನ್ನು ದಿವ್ಯಾ ಅಗರ್​ವಾಲ್​ ಶೇರ್​ ಮಾಡಿಕೊಂಡಿದ್ದಾರೆ. ‘ಆಲ್ಟ್​ ಬಾಲಾಜಿ’ ಓಟಿಟಿ ಮೂಲಕ ಈ ವೆಬ್​​ ಸಿರೀಸ್​ ಬಿಡುಗಡೆ ಆಗಿದೆ.

‘ಕಾರ್ಟೆಲ್​ ಯಶಸ್ವಿ ಆಗಿರುವುಕ್ಕೆ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದಿರುವ ದಿವ್ಯಾ ಅವರ್​ವಾಲ್​ ಅವರು ತಮಗೆ ಅವಕಾಶ ನೀಡಿದ ಏಕ್ತಾ ಕಪೂರ್​ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಏಕ್ತಾ ಕಪೂರ್​ ಅವರೇ, ನನ್ನ ಮೇಲೆ ನಂಬಿಕೆ ಇಟ್ಟು ಈ ಪಾತ್ರ ನೀಡಿದ್ದಕ್ಕೆ ನಿಮಗೆ ಧನ್ಯವಾದಗಳು. ಸಿನಿಮಾ ಬಗ್ಗೆ ನಾನು ಹೊಂದಿರುವ ಆಸಕ್ತಿ ಎಂಥದ್ದು ಎಂಬುದನ್ನು ಈ ಪಾತ್ರ ವಿವರಿಸುತ್ತದೆ. ನನ್ನಲ್ಲಿ ಈ ಗುಣಗಳನ್ನು ಮೊದಲು ಗುರುತಿಸಿದವರೇ ನೀವು’ ಎಂದು ಅವರು ಬರೆದುಕೊಂಡಿದ್ದಾರೆ.

ಮುದುಕನ ರೀತಿ ಕಾಣಲು ದಿವ್ಯಾ ಅವರ್​ವಾಲ್​ ಅವರು ಗಂಟೆಗಟ್ಟಲೆ ಮೇಕಪ್​ ಮಾಡಿಕೊಳ್ಳಬೇಕಿತ್ತು. ಪ್ರಾಸ್ಥೆಟಿಕ್​ ಮೇಕಪ್​ ಮೂಲಕ ಅವರು ಈ ವೇಷ ತಾಳಿದ್ದಾರೆ.

ಬಿಗ್​ ಬಾಸ್​ ಓಟಿಟಿ ಶೋನಲ್ಲಿ ಇದ್ದಾಗ ದಿವ್ಯಾ ಅವರು ತಮ್ಮದೇ ಛಾಪು ಮೂಡಿಸಿದ್ದರು. ತಮಗೆ ಅನಿಸಿದ್ದನ್ನು ನೇರವಾಗಿ ಹೇಳುವ ಗುಣ ಅವರದ್ದು. ಅದೇ ಕಾರಣಕ್ಕಾಗಿ ಅವರು ನಿರೂಪಕ ಕರಣ್​ ಜೋಹರ್​ ಜೊತೆಗೂ ಜಗಳ ಮಾಡಿದ್ದರು. ಅಂತಿಮವಾಗಿ ಅವರೇ ವಿನ್​ ಆಗುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.

ಇದನ್ನೂ ಓದಿ:

ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​

ಸೆನ್ಸಾರ್​ ಇಲ್ಲದೆ ನಾಚಿಕೆ ಆಗುವಂತಹ ಟಾಸ್ಕ್​ ನೀಡಿದ ಸನ್ನಿ ಲಿಯೋನ್​; ಬಿಗ್​ ಬಾಸ್​ ಸ್ಪರ್ಧಿಗಳಿಗೆ ಶಾಕ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ