ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​

ದಿವ್ಯಾ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕೋರಿಯೋಗ್ರಾಫರ್​ ಹಾಗೂ ನಟಿ ಆಗಬೇಕು ಎಂದು ಕನಸು ಕಂಡವರು. ‘ರಾಗಿಣಿ ಎಂಎಂಎಸ್​: ರಿಟರ್ನ್​​ 2’ನಲ್ಲಿ ಅವರು ಕಾಣಿಸಿಕೊಂಡಿದ್ದರು.

ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​
ಬಾಯ್​ಫ್ರೆಂಡ್​ ಜತೆ ಬಿಗ್ ಬಾಸ್​ ಒಟಿಟಿ ವಿನ್ನರ್​ ದಿವ್ಯಾ ಅಗರ್​ವಾಲ್​ ಮೋಜು ಮಸ್ತಿ; ವಿಡಿಯೋ ವೈರಲ್​

‘ಬಿಗ್​ ಬಾಸ್​ ಒಟಿಟಿ’ ವಿನ್ನರ್​ ಆಗಿ ದಿವ್ಯಾ ಅಗರ್​ವಾಲ್​ ಹೊರಹೊಮ್ಮಿದ್ದಾರೆ. ಭಾನುವಾರ (ಸೆಪ್ಟೆಂಬರ್​ 18) ನಡೆದ ಫಿನಾಲೆ ಎಪಿಸೋಡ್​ನಲ್ಲಿ ದಿವ್ಯಾ ಹೆಸರನ್ನು ವಿನ್ನರ್​ ಎಂದು ನಿರೂಪಕ ಕರಣ್​ ಜೋಹರ್​ ಘೋಷಣೆ ಮಾಡುತ್ತಿದ್ದಂತೆ ಅವರು ಕುಣಿದು ಕುಪ್ಪಳಿಸಿದ್ದಾರೆ. ಆಕರ್ಷಕ ಟ್ರೋಫಿ ಹಾಗೂ 25 ಲಕ್ಷ ರೂಪಾಯಿ ಚೆಕ್​ನೊಂದಿಗೆ ದಿವ್ಯಾ ಮನೆಗೆ ಬಂದಿದ್ದಾರೆ. ಮನೆಗೆ ಬಂದ ಬೆನ್ನಲ್ಲೇ ಬಾಯ್​ಫ್ರೆಂಡ್​ ವರುಣ್​ ಸೂದ್​ ಜತೆ ಈ ಖುಷಿಯನ್ನು ದಿವ್ಯಾ ಸೆಲೆಬ್ರೇಟ್​ ಮಾಡಿದ್ದಾರೆ.  

ದಿವ್ಯಾ ಪತ್ರಿಕೋದ್ಯಮ ವಿದ್ಯಾರ್ಥಿನಿ. ಕೋರಿಯೋಗ್ರಾಫರ್​ ಹಾಗೂ ನಟಿ ಆಗಬೇಕು ಎಂದು ಕನಸು ಕಂಡವರು. ‘ರಾಗಿಣಿ ಎಂಎಂಎಸ್​: ರಿಟರ್ನ್​​ 2’ನಲ್ಲಿ ಅವರು ಕಾಣಿಸಿಕೊಂಡಿದ್ದರು. ‘ಏಸ್​ ಆಫ್​ ಸ್ಪೇಸ್​ 1’ ವಿನ್ನರ್​ ಆದರೆ, ‘ಎಂಟಿವಿ ಸ್ಪಿಟ್ಸ್​ವಿಲ್ಲಾ 10’ನ ರನ್ನರ್​ ಅಪ್​ ಆಗಿದ್ದಾರೆ ದಿವ್ಯಾ. ಈಗ ಬಿಗ್​ ಬಾಸ್​ ಒಟಿಟಿ ವಿನ್ನರ್​ ಪಟ್ಟ ಕೂಡ ಸಿಕ್ಕಿದೆ. ಅವರ ಗೆಲುವಿನಿಂದ ವರುಣ್​ ಸೂದ್​ ಸಾಕಷ್ಟು ಖುಷಿಪಟ್ಟಿದ್ದಾರೆ.

ವರುಣ್​ ಜತೆ ದಿವ್ಯಾ ಅವರುಈ ಖುಷಿಯನ್ನು ಸೆಲೆಬ್ರೇಟ್​ ಮಾಡಿದ್ದಾರೆ. ಕೇಕ್​ ಕತ್ತರಿಸಿ ಅವರು ಈ ಖುಷಿಯನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಹಾಗೂ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

 

View this post on Instagram

 

A post shared by Instant Bollywood (@instantbollywood)

ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಬಿಗ್​ ಬಾಸ್ ನಿರೂಪಣೆಯನ್ನು ಸಲ್ಮಾನ್​ ಖಾನ್​ ಮಾಡಿದ್ದರು. ಆದರೆ, ‘ಬಿಗ್​ ಬಾಸ್​ ಒಟಿಟಿ’ಯನ್ನು ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ಕರಣ್​ ಜೋಹರ್​ ನಡೆಸಿಕೊಟ್ಟಿದ್ದಾರೆ. ಶಿಲ್ಪಾ ಶೆಟ್ಟಿ ತಂಗಿ ಶಮಿತಾ ಶೆಟ್ಟಿ, ರಾಕೇಶ್ ಬಾಪಟ್, ದಿವ್ಯಾ ಅಗರ್ವಾಲ್, ನಿಶಾಂತ್ ಭಟ್ ಹಾಗೂ ಪ್ರತೀಕ್ ಸೆಹಜ್ಪಾಲ್ ಫಿನಾಲೆಯಲ್ಲಿ ಇದ್ದರು. ಅಂತಿಮವಾಗಿ ದಿವ್ಯಾ ಗೆದ್ದಿದ್ದಾರೆ. ಶಮಿತಾ ಮತ್ತು ದಿವ್ಯಾ ನಡುವೆ ಸಾಕಷ್ಟು ಬಾರಿ ಜಗಳ ಆಗಿತ್ತು. ಇದರಿಂದಲೂ ಅವರು ಹೈಲೈಟ್​ ಆಗಿದ್ದರು. ಶೀಘ್ರವೇ ‘ಬಿಗ್​ ಬಾಸ್​ ಸೀಸನ್ 15’ ಆರಂಭಗೊಳ್ಳಲಿದೆ.

ಇದನ್ನೂ ಓದಿ: ಬಿಗ್​ಬಾಸ್​ ಒಟಿಟಿ ನಿರೂಪಕ ಕರಣ್ ಜೋಹರ್ ವಿರುದ್ಧ ಜೋರಾಯ್ತು ಅಸಮಾಧಾನ; ಕಾರಣವೇನು?

ದಿವ್ಯಾ ಅಗರ್​ವಾಲ್​ಗೆ ಒಲಿದ ಬಿಗ್​ ಬಾಸ್​ ಒಟಿಟಿ; ಶಮಿತಾ ಶೆಟ್ಟಿಗೆ ನಿರಾಸೆ, ಇವರಿಗೆ ಸಿಗ್ತಿರೋ ಹಣ ಎಷ್ಟು?

Read Full Article

Click on your DTH Provider to Add TV9 Kannada