‘ನಾನು ಇಂದು ಏನಾಗಿದ್ದೇನೋ ಅದಕ್ಕೆ ತಾಯಿಯೇ ಕಾರಣ’ ಎಂದು ಅಮ್ಮನ ಕುರಿತು ಪ್ರೀತಿಯಿಂದ ನುಡಿದಿದ್ದ ಸತೀಶ್:
ಇತ್ತೀಚೆಗೆ ಟಿವಿ9ನೊಂದಿಗೆ ಮಾತನಾಡುತ್ತಾ ಸತೀಶ್ ತಮ್ಮ ತಾಯಿಯ ಕುರಿತು ಮಾತನಾಡಿದ್ದರು. ಆಗ ‘‘ಅಮ್ಮ ಅಂದರೆ ನನಗೆ ಶಕ್ತಿ ಇದ್ದಂತೆ. ನನಗೆ ಆತ್ಮ ವಿಶ್ವಾಸ ನೀಡಿದ್ದೇ ಅವರು. ನನಗೆ ಮೂರು ವರ್ಷವಿದ್ದಾಗ ತಂದೆ ತೀರಿಕೊಂಡಿದ್ದರು. ಆಗಿನಿಂದ ಅಮ್ಮನೇ ನನಗೆ ಎಲ್ಲಾ. ಬಡತನದಲ್ಲಿಯೂ ಅವರು ನನ್ನನ್ನು ಬೆಳೆಸಿದ್ದರು. ನಾವು ಎಂಟು ಜನ ಮಕ್ಕಳು. ಎಲ್ಲರನ್ನೂ ಸಾಕಿ, ಬದುಕಿನ ಬಗ್ಗೆ ಪ್ರೀತಿ, ಶಿಸ್ತನ್ನು ಕಲಿಸಿದವರು ನಮ್ಮ ತಾಯಿ. ನಾನು ಇಂದು ಏನಾಗಿದ್ದೇನೋ ಅದಕ್ಕೆ ನನ್ನ ತಾಯಿಯೇ ಕಾರಣ. ಅಮ್ಮ ಎಂದರೆ ನನಗೆ ತಂದೆ- ತಾಯಿ ಎಲ್ಲಾ’’ ಎಂದು ನುಡಿದಿದ್ದರು.
ನೀನಾಸಂ ಸತೀಶ್ ಬದುಕಿಗೆ ಸ್ಫೂರ್ತಿ ತುಂಬಿ, ಇಂದು ಚಿತ್ರರಂಗದಲ್ಲಿ ತಮ್ಮ ವಿಶೇಷ ಪ್ರತಿಭೆಯಿಂದ ಎತ್ತರಕ್ಕೆ ಬೆಳೆಯಲು ಕಾರಣರಾಗಿದ್ದ ಅವರ ತಾಯಿ ಇಂದು ಇಹಲೋಕ ತ್ಯಜಿಸಿದ್ದಾರೆ. ಅವರ ಅಂತ್ಯಕ್ರಿಯೆ ಮದ್ದೂರಿನ ಯಲದಹಳ್ಳಿಯಲ್ಲಿ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇದನ್ನೂ ಓದಿ:
ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್ ಸಿಬ್ಬಂದಿ!