AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್​​ ಸಿಬ್ಬಂದಿ!

2013 ನವೆಂಬರ್ 06 ರಂದು ಸಾರಿಗೆ ಇಲಾಖೆ ಬಸ್ಸು ಡಿಕ್ಕಿ ಹೊಡೆದು ಸಾಫ್ಟ್​​ವೇರ್ ಎಂಜಿನಿಯರ್ ಸಂಜೀವ್ ಪಾಟೀಲ್ ಸಾವಿಗೀಡಾಗಿದ್ದರು. ಮೃತರ ಪತ್ನಿಗೆ 2.82 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಅದೇಶ ಮಾಡಿತ್ತು.

ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್​​ ಸಿಬ್ಬಂದಿ!
ಟೆಕ್ಕಿ ಸಾವಿಗೆ 2.82 ಕೋಟಿ ಪರಿಹಾರ ನೀಡದೆ ಸತಾಯಿಸಿದ ಸಾರಿಗೆ ಇಲಾಖೆ: ಬಸ್ ಜಪ್ತಿ ಮಾಡಿದ ಕೋರ್ಟ್​​ ಸಿಬ್ಬಂದಿ!
TV9 Web
| Updated By: ಸಾಧು ಶ್ರೀನಾಥ್​|

Updated on:Oct 01, 2021 | 12:03 PM

Share

ದಾವಣಗೆರೆ: ಟೆಕ್ಕಿ ಸಾವಿಗೆ ಸುಮಾರು 3 ಕೋಟಿ ರೂಪಾಯಿ ಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ ಧೋರಣೆ ಹಿನ್ನೆಲೆಯಲ್ಲಿ ಬಸ್ ಜಪ್ತಿಗೆ ಕೋರ್ಟ್​ ಆದೇಶಿಸಿದ್ದು, ಅದರಂತೆ ಕೋರ್ಟ್​​ ಸಿಬ್ಬಂದಿ ಮತ್ತೆ ಸಾರಿಗೆ ಇಲಾಖೆಯ ಅಪಘಾತಕ್ಕೀಡಾಗಿದ್ದ ಬಸ್ ಅನ್ನು ಜಫ್ತಿ ಮಾಡಿದ್ದಾರೆ. ಹಾವೇರಿ ಡಿಪೋಗೆ ಸೇರಿ ಬಸ್ ಅನ್ನು ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿ ಜಫ್ತಿ ಮಾಡಲಾಗಿದೆ.

2013 ನವೆಂಬರ್ 06 ರಂದು ಸಾರಿಗೆ ಇಲಾಖೆ ಬಸ್ಸು ಡಿಕ್ಕಿ ಹೊಡೆದು ಸಾಫ್ಟ್​​ವೇರ್ ಎಂಜಿನಿಯರ್ ಸಂಜೀವ್ ಪಾಟೀಲ್ ಸಾವಿಗೀಡಾಗಿದ್ದರು. ಮೃತರ ಪತ್ನಿಗೆ 2.82 ಕೋಟಿ ರೂಪಾಯಿ ಪರಿಹಾರ ನೀಡುವಂತೆ ದಾವಣಗೆರೆ 2ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಅದೇಶ ಮಾಡಿತ್ತು.

ಸಕಾಲಕ್ಕೆ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯ ಬಸ್ ಜಪ್ತಿಗೆ ಆದೇಶಿಸಿರುವ ಹಿನ್ನೆಲೆಯಲ್ಲಿ ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿನ ಹಾವೇರಿ ಡಿಪೋಗೆ ಸೇರಿದ ಬಸ್ ಇದೀಗ ಜಪ್ತಿಯಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದ ಕಳೆದ ಆರು ತಿಂಗಳ ಹಿಂದೆ ಆರು ಬಸ್​​ಗಳ ಜಪ್ತಿಗೆ ನ್ಯಾಯಾಲಯ ಆದೇಶಿಸಿತ್ತು. ಮೃತನ ಪತ್ನಿ ಗೌರಿ ಪಾಟೀಲ್ ಗೆ ಸ್ವಲ್ಪ ಪ್ರಮಾಣ ಪರಿಹಾರ ನೀಡಿತ್ತು. ಉಳಿದ ಪರಿಹಾರ ನೀಡಲು ವಿಳಂಬವಾದ ಹಿನ್ನೆಲೆ ನ್ಯಾಯಾಲಯ ಮತ್ತೆ ಒಂದು ಬಸ್ ಜಪ್ತಿಗೆ ಆದೇಶ‌ ನೀಡಿದೆ.

ಪ್ರಕರಣದ ಹಿನ್ನೆಲೆ: 2013, ನವೆಂಬರ್ 06 ರಂದು ಬೆಂಗಳೂರಿನಿಂದ ಬರುತ್ತಿದ್ದ ಹಾವೇರಿ ಡಿಪೊಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್‌ ಕಾರಿಗೆ ಡಿಕ್ಕಿಯಾಗಿ ದಾವಣಗೆರೆಯ ನಗರದ ಹೊರವಲಯಲ್ಲಿ ಸಾಫ್ಟ್​​ವೇರ್ ಎಂಜಿನಿಯರ್ ಸಂಜೀವ್ ಪಾಟೀಲ್ ಮೃತಪಟ್ಟಿದ್ದರು. ಅವರ ಕುಟುಂಬಕ್ಕೆ ಪರಿಹಾರವಾಗಿ 2.82 ಕೋಟಿ ಪರಿಹಾರ ನೀಡುವಂತೆ ದಾವಣಗೆರೆ ಎರಡನೇ ಹೆಚ್ಚುವರಿ ಹಿರಿಯ ಸಿವಿಲ್‌ ನ್ಯಾಯಾಲಯ ಆದೇಶ ಮಾಡಿತ್ತು. ಆದರೆ ಕೆಎಸ್‌ಆರ್‌ಟಿಸಿ ಹಾವೇರಿ ವಿಭಾಗವು ಈ ಪರಿಹಾರವನ್ನು ನೀಡಿರಲಿಲ್ಲ. ಆಗ ಬಸ್‌ ಜಪ್ತಿ ಮಾಡುವಂತೆ ನ್ಯಾಯಾಲಯವು ಆದೇಶಿಸಿತ್ತು.

ಇದೇ ಪ್ರಕರಣಕ್ಕೆ ಸಂಬಂಧಿಸಿ ಆರು ತಿಂಗಳ ಹಿಂದೆ ಆರು ಬಸ್ಸುಗಳ ಜಪ್ತಿಗೆ ಆದೇಶಿಸಿದ್ದ ನ್ಯಾಯಾಲಯ. ನ್ಯಾಯಾಲಯ ನೀಡಿದ ಪರಿಹಾರ ಮೊತ್ತಕ್ಕೆ ಬಡ್ಡಿ ಸಹಿತ ನೀಡಬೇಕಾಗಿದ್ದು‌, ಸುಮಾರು 67 ಲಕ್ಷ ರೂಪಾಯಿ ಬಡ್ಡಿಯೇ ಆಗಿದೆ. ಬಡ್ಡಿ‌ ಮತ್ತು ಅಸಲು ನೀಡುವಂತೆ ಮೃತರ ಕುಟುಂಬ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆ ಬಸ್ ಜಪ್ತಿಗೆ ಆದೇಶಿಸಿತ್ತು. ಅದರಂತೆ ಕೋರ್ಟ್‌ನ ಅಮೀನರಾದ ಶ್ರೀಧರ್‌, ಮಹೇಶ್‌, ರಾಜ್‌ಕುಮಾರ್‌, ಗುರು, ಪೊಲೀಸರು, ಪಂಚಾಯಿತಿದಾರರು ಬಂದು ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

Also Read:  ತರಕಾರಿ ಮಾರುತ್ತಿದ್ದ ಟೆಕ್ಕಿ ಯುವತಿಗೆ ಕರೆದು ಕೆಲಸ ಕೊಟ್ಟ ಸೋನು ಸೂದ್ The Real Hero Also Read: ಪತಿ ತೊರೆದಿದ್ದ ಅಸಹಾಯಕ ಮಹಿಳೆಗೆ ನಂಬಿಸಿ ಕೈಕೊಟ್ಟ ಟೆಕ್ಕಿ: 6 ವರ್ಷದ ಮಗನ ಕರೆದುಕೊಂಡು ಪರಾರಿ

Published On - 11:46 am, Fri, 1 October 21

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ