ಹುಬ್ಬಳ್ಳಿ: ತಂದೆ –ತಾಯಿಯನ್ನು ತಬ್ಬಲಿ ಮಾಡಿದ ಮಗ; ಬಡತನಕ್ಕೆ ಹೆದರಿ ಮನೆ ಬಿಟ್ಟು ಪರಾರಿ
ತಂದೆ ಪಾರ್ಶ್ವವಾಯು ಪೀಡಿತರಾಗಿದ್ದು, ಹೆಜ್ಜೆ ಮುಂದೆ ಇಡಲು ಕಷ್ಟ. ತಾಯಿ ರುಕ್ಮಿಣಿ ಜೀವನ ನಡೆಸಲು ಮನೆಗೆಲಸಕ್ಕೆ ಹೋಗುವಂತ ಸ್ಥಿತಿ ನಿರ್ಮಾಣವಾಯಿತು. ಇದರಿಂದಲೂ ಮನೆಯ ನಿರ್ವಹಣೆ ಕಷ್ಟ ಸಾಧ್ಯವಾದಾಗ ಹನಮಂತ್ ನಗರದ ನಿವಾಸಿಗಳು ವಯೋವೃದ್ದರಿಗೆ ಸಾಕಿ ಸಲಹುತ್ತಿದ್ದಾರೆ.
ಹುಬ್ಬಳ್ಳಿ: ಎಷ್ಟೇ ಬಡತನ ಬಂದರೂ ಹೆತ್ತ ಕರಳು ಯಾವತ್ತೂ ಮಕ್ಕಳಿಗೆ ಉಪವಾಸ ಇತ್ತ ಉದಾಹಾರಣೆ ಈ ಜಗತ್ತಿನಲ್ಲಿಯೇ ಇಲ್ಲ ಎನಿಸುತ್ತದೆ. ಹೆತ್ತವರು ಹೊಟ್ಟೆಗೆ ತಣ್ಣೀರ ಬಟ್ಟೆ ಹಾಕಿಯಾದರೂ ಮಕ್ಕಳಿಗೆ ಗಂಜಿ ಉಣಬಡಿಸುವ ವಾತ್ಸಲ್ಯ ನಮ್ಮಲ್ಲಿ ಇದೆ. ಆದರೇ ಹುಬ್ಬಳ್ಳಿಯಲ್ಲಿ ನಡೆದಿರುವ ಘಟನೆಯೊಂದು ಹೆತ್ತವರ ಪ್ರೀತಿಗೆ ಎಳ್ಳು ನೀರು ಬಿಟ್ಟಂತಿದೆ. ಬಡತನ, ದಾರಿದ್ರ್ಯ ಹೆಚ್ಚಾಯಿತು ಎಂದು ಮಗನೇ ಮನೆಬಿಟ್ಟು ಹೋಗಿದ್ದಾನೆ. ಹೀಗೇ ಮಗ ಹೆತ್ತವರನ್ನು ಬಿಟ್ಟು ಹೋಗಿ ಬರೋಬ್ಬರಿ ಒಂದು ವರ್ಷ ಕಳೆದಿದೆ.
ಕೃಷ್ಣ ಪರಶುರಾಮ್ ಭಟ್ಟರ್ (27) ಕಳೆದ ವರ್ಷ ಜನವರಿಯಲ್ಲಿ ರಾತ್ರೋರಾತ್ರಿ ಮನೆಯಿಂದ ಪರಾರಿಯಾಗಿದ್ದಾನೆ. ಇನ್ನೂ ಕೂಡ ಕೃಷ್ಣ ಮರಳಿ ಮನೆಗೆ ಬರಲೇ ಇಲ್ಲಾ. ಕೃಷ್ಣನಿಗೆ ಕೂಡ ಆಗಿದೆ. ಏನೋ ಕೆಲಸದ ನಿಮಿತ್ಯ, ಉದ್ಯೋಗ ಅರಸಿ ಪರ ಊರಿಗೆ ಹೋಗಿರಬಹುದು ಎಂದು ಹೆಂಡತಿ ಮತ್ತು ಹೆತ್ತವರು ಮೊದಮೊದಲು ಭಾವಿಸಿದ್ದರು. ಆದರೆ ವಾರ ಕಳೆದರೂ ಕೃಷ್ಣ ಹುಬ್ಬಳ್ಳಿ ಹನಮಂತ್ ನಗರಕ್ಕೆ ವಾಪಾಸಾಗಲೇ ಇಲ್ಲ. ಇದರಿಂದ ನೊಂದ ಪತ್ನಿ ತವರೂರು ಸೇರಿದ್ದಾಳೆ.
ಇನ್ನು ಹೆತ್ತವರು ಬೇರೆ ವಿಧಿಯಿಲ್ಲದೆ ಮಗನಿಗಾಗಿ ಚಾತಕ ಪಕ್ಷಿಯಂತೆ ಕಳೆದ ಒಂದು ವರ್ಷದಿಂದ ಕಾಯುತ್ತಿದ್ದಾರೆ. ಈ ನಡುವೆ ಕೃಷ್ಣನ ತಂದೆ ಪರಶುರಾಮ, ತಾಯಿ ರುಕ್ಮಿಣಿ ಪರಿಸ್ಥಿತಿ ಚಿಂತಾಜನಕ ವಾಗಿದೆ. ಒಂದು ಕಡೆ ಮಗನ ಯೋಚನೆ, ಮತ್ತೊಂದು ಕಡೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದಂತ ದುಸ್ಥಿತಿ ನಿರ್ಮಾಣವಾಗಿದೆ.
ತಂದೆ ಪಾರ್ಶ್ವವಾಯು ಪೀಡಿತರಾಗಿದ್ದು, ಹೆಜ್ಜೆ ಮುಂದೆ ಇಡಲು ಕಷ್ಟ. ತಾಯಿ ರುಕ್ಮಿಣಿ ಜೀವನ ನಡೆಸಲು ಮನೆಗೆಲಸಕ್ಕೆ ಹೋಗುವಂತ ಸ್ಥಿತಿ ನಿರ್ಮಾಣವಾಯಿತು. ಇದರಿಂದಲೂ ಮನೆಯ ನಿರ್ವಹಣೆ ಕಷ್ಟ ಸಾಧ್ಯವಾದಾಗ ಹನಮಂತ್ ನಗರದ ನಿವಾಸಿಗಳು ವಯೋವೃದ್ದರಿಗೆ ಸಾಕಿ ಸಲಹುತ್ತಿದ್ದಾರೆ.
ಬಡತನ ಎದುಷಿಸಲಾಗದೆ ಮನೆಬಿಟ್ಟು ಹೋದ ಪಾಪಿ ಪುತ್ರ ಎಲ್ಲಿದ್ದಾನೋ ಅಂತ ಗೊತ್ತಾಗಿಲ್ಲಾ. ಬಿಜಾಪುರ, ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣನನ್ನು ಮದುವೆ ಮಾಡಿಸಿದ್ದ ತಪ್ಪಿಗೆ ಸಮಾಜದ ಹಿರಿಯರು ಹುಡುಕಾಟ ಆರಂಭಿಸಿದ್ದಾರೆ. ಇನ್ನು ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ದಾಖಲಿಸಿದ್ದಾರೆ. ಆದರೆ ಏನು ಪ್ರಯೋಜನವಿಲ್ಲ. ನಿತ್ಯ ಮಗನನ್ನು ನೆನೆದು ಹೆತ್ತವರು ಮಾತ್ರ ಕಣ್ಣಲ್ಲಿ ನೀರು ಹಾಕುತ್ತಿದ್ದಾರೆ.
ಹೆಚ್ಚು ಕಡಿಮೆ ಒಂದೂವರೆ ವರ್ಷವಾಯ್ತು. ಮಗ ಎಲ್ಲಿದ್ದಾನೆ ಅಂತ ಸುಳಿವು ಸಿಕ್ಕಿಲ್ಲಾ. ಸೊಸೆ ತವರುಮನೆ ಸೇರಿದ್ದಾರೆ. ನಮಗೆ ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲಾ. ನೆರೆಹೊರೆಯವರೆ ಸಾಕಿ ಸಲಹುತ್ತಿದ್ದಾರೆ. ಮಗನಿಲ್ಲದೆ ನಮ್ಮ ಬದುಕು ಅಕ್ಷರಶಃ ಬೀದಿಗೆ ಬಂದಿದೆ ಎಂದು ಕೃಷ್ಣನ ತಂದೆ ಪರಶುರಾಮ ತಿಳಿಸಿದ್ದಾರೆ.
ವರದಿ: ರಹಮತ್ ಕಂಚಗಾರ್
ಇದನ್ನೂ ಓದಿ:
ಹಾಲಕ್ಕಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿ ನೀಡುವೆ: ಸುಕ್ರಿ ಬೊಮ್ಮಗೌಡ
ಚಾಮರಾಜಪೇಟೆ ಆಸ್ಪತ್ರೆ ಮಗು ಕಳ್ಳತನ ಪ್ರಕರಣ: ಕೋರ್ಟ್ನಲ್ಲಿ ಹೆತ್ತ ತಾಯಿ-ಸಾಕು ತಾಯಿ ಕಾದಾಟ, ಕೊನೆಗೆ ಮಗು ಯಾರ ಕೈಗೆ?
Published On - 12:34 pm, Fri, 1 October 21