ED raid case: ಇ.ಡಿ. ದೂರವಾಣಿ ಕರೆಗೆ ಓಗೊಟ್ಟು ದೆಹಲಿ ಕಚೇರಿಗೆ ಶಾಸಕ ಜಮೀರ್ ಅಹ್ಮದ್ ದೌಡು

ಜಾರಿ ನಿರ್ದೇಶನಾಲಯದ ಸೂಚನೆಯ ಮೆರೆಗೆ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿರುವ ಇ.ಡಿ. (ED) ಕಚೇರಿಗೆ ಭೇಟಿ ನೀಡಿದ್ದಾರೆ.

ED raid case: ಇ.ಡಿ. ದೂರವಾಣಿ ಕರೆಗೆ ಓಗೊಟ್ಟು ದೆಹಲಿ ಕಚೇರಿಗೆ ಶಾಸಕ ಜಮೀರ್ ಅಹ್ಮದ್ ದೌಡು
ಜಮೀರ್ ಅಹ್ಮದ್


ದೆಹಲಿ: ಜಾರಿ ನಿರ್ದೇಶನಾಲಯದ ಸೂಚನೆಯ ಮೆರೆಗೆ ಚಾಮರಾಜಪೇಟೆ ಕಾಂಗ್ರೆಸ್​ ಶಾಸಕ ಜಮೀರ್ ಅಹ್ಮದ್ ಅವರು ಇಂದು ದೆಹಲಿಯಲ್ಲಿರುವ ಇ.ಡಿ. (ED) ಕಚೇರಿಗೆ ಭೇಟಿ ನೀಡಿದ್ದಾರೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ತಮ್ಮ ಮನೆಗಳು ಮತ್ತು ಕಚೇರಿಗಳ ಮೇಲೆ ನಡೆದಿದ್ದ ED ದಾಳಿಯ ಸಂಬಂಧ ದಾಖಲೆ ಸಲ್ಲಿಸಲು ED ಕಚೇರಿಗೆ ಶಾಸಕ ಜಮೀರ್ ಅಹ್ಮದ್ ಖಾನ್ ಭೇಟಿ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಜಮೀರ್ ಆಹ್ಮದ್ ಖಾನ್ ನಿನ್ನೆ ಸಂಜೆ ಬೆಂಗಳೂರಿನಿಂದ ದೆಹಲಿಗೆ ಹೊರಟಿದ್ದಾರೆ. ದಾಳಿಯಾದ ನಂತರ ಇ.ಡಿ ಕಚೇರಿಗೆ ಕೆಲವು ದಾಖಲೆಗಳನ್ನ ಜಮೀರ್ ಆಹ್ಮದ್ ಖಾನ್ ನೀಡಿದ್ದರು. ಈ ವೇಳೆ ಮತ್ತಷ್ಟು ದಾಖಲೆಗಳನ್ನ ನೀಡುವಂತೆ ಇ.ಡಿ ಅಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆ ದಾಖಲೆಗಳನ್ನ ನೀಡಲು ತೆರಳಿರುವ ಶಾಸಕ ಜಮೀರ್ ಇಂದು ದೆಹಲಿಯ ಖಾನ್ ಮಾರ್ಕೆಟ್ ಬಳಿಯಿವ ಇ.ಡಿ. ಕಚೇರಿಗೆ ತೆರಳಿ ದಾಖಲೆಗಳನ್ನ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇ.ಡಿ. ದೂರವಾಣಿ ಕರೆ:
ಇ.ಡಿ. ಅಧಿಕಾರಿಗಳು ದೂರವಾಣಿ ಕರೆ ಮಾಡಿ ಬರುವುದಕ್ಕೆ ಹೇಳಿದ್ದರು, ಬಂದಿದ್ದೇನೆ. ಈ ಹಿಂದೆ ಹೇಳಿಕೆ ದಾಖಲಿಸಿದ್ದೆ, ಅಗತ್ಯ ದಾಖಲೆ ನೀಡಿದ್ದೆ. ಕೆಲ ವಿಚಾರಗಳ ಬಗ್ಗೆ ಸ್ಪಷ್ಟನೆ ನೀಡಲು ವಿಚಾರಣೆಗೆ ಬಂದಿದ್ದೇನೆ ಎಂದು ದೆಹಲಿಯಲ್ಲಿ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ED ವಿಚಾರಣೆ ನಂತರ ಜಮೀರ್ ಫಸ್ಟ್​ ರಿಯಾಕ್ಷನ್|ED|Tv9kannada

Also Read:
ಶಾಸಕ ಜಮೀರ್ ಅಹ್ಮದ್ ಮನೆ, ನ್ಯಾಷನಲ್ ಟ್ರಾವೆಲ್ಸ್ ಕಚೇರಿ ಮೇಲೆ ಆದಾಯ ತೆರಿಗೆ ಅಧಿಕಾರಿಗಳಿಂದ ಐಟಿ ದಾಳಿ

Also Read:
ಹೆಚ್.ಡಿ.ಕುಮಾರಸ್ವಾಮಿ ಪಲ್ಟಿ ಗಿರಾಕಿ; ಶಾಸಕ ಜಮೀರ್ ಅಹ್ಮದ್ ಹೇಳಿಕೆ

Read Full Article

Click on your DTH Provider to Add TV9 Kannada