AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gold Price Today: ಚಿನ್ನ, ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ; ಗ್ರಾಹಕರಿಗೆ ಸಂತೋಷ ನೀಡುವ ವಿಚಾರ

Gold Rate Today: ಚಿನ್ನ ಖರೀದಿಸುವಾಗ ದರ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿಯೇ ಪ್ರತಿನಿತ್ಯ ಚಿನ್ನಾಭರಣ ಬೆಲೆ ಎಷ್ಟಿದೆ? ಇಂದು ದರ ಇಳಿಕೆ ಆಗಿದೆಯೋ ಇಲ್ಲವೋ? ಎಂಬುದರ ಕುರಿತಾಗಿ ಮತ್ತಷ್ಟು ಕುತೂಹಲ ಕೆರಳುವುದು. ಇಂದಿನ ದರ ವಿವರ ಪರಿಶೀಲಿಸಿ.

Gold Price Today: ಚಿನ್ನ, ಬೆಳ್ಳಿ ದರದಲ್ಲಿ ಮತ್ತಷ್ಟು ಇಳಿಕೆ; ಗ್ರಾಹಕರಿಗೆ ಸಂತೋಷ ನೀಡುವ ವಿಚಾರ
ಸಾಂದರ್ಭಿಕ ಚಿತ್ರ
TV9 Web
| Edited By: |

Updated on:Oct 01, 2021 | 8:02 AM

Share

Gold Silver Price Today | ಬೆಂಗಳೂರು: ಚಿನ್ನ, ಬೆಳ್ಳಿ ದರ ದೈನಂದಿನ ದರ ಬದಲಾವಣೆಯಲ್ಲಿ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಆದರೆ ಚಿನ್ನ ಖರೀದಿಸುವಾಗ ದರ ಇಳಿಕೆಯತ್ತ ಸಾಗಿರಬೇಕು ಎಂಬ ಆಸೆ ಎಲ್ಲರಿಗೂ ಇದ್ದೇ ಇರುತ್ತದೆ. ಹಾಗಾಗಿಯೇ ಪ್ರತಿನಿತ್ಯ ಚಿನ್ನಾಭರಣ ಬೆಲೆ ಎಷ್ಟಿದೆ? ಇಂದು ದರ ಇಳಿಕೆ ಆಗಿದೆಯೋ ಇಲ್ಲವೋ? ಎಂಬುದರ ಕುರಿತಾಗಿ ಮತ್ತಷ್ಟು ಕುತೂಹಲ ಕೆರಳುವುದು. ಇಂದು ಮಾರುಕಟ್ಟೆಯಲ್ಲಿ ಚಿನ್ನ (Gold Price), ಬೆಳ್ಳಿ ದರ (Silver Price) ಎಷ್ಟಿದೆ? ಯಾವ ಯಾವ ನಗರಗಳಲ್ಲಿ ಬೆಲೆ ಹೇಗಿದೆ? ಎಂಬ ವಿವರ ಈ ಕೆಳಗಿನಂತಿದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,050 ರೂಪಾಯಿ ಇದೆ. 100 ಗ್ರಾಂ ಚಿನ್ನಕ್ಕೆ 4,30,500 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,500 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,960 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,69,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,700 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿ ಬೆಲೆಯಲ್ಲಿ 2,150 ರೂಪಾಯಿ ಇಳಿಕೆ ಕಂಡು ಬಂದಿದ್ದು, 58,300 ರೂಪಾಯಿ ನಿಗದಿಯಾಗಿದೆ.

ಕಳೆದ ಕೆಲವು ದಿನಗಳಿಂದ ಚಿನ್ನದ ದರ ಇಳಿಕೆಯ ಹಾದಿ ಹಿಡಿದಿದೆ. ನಿನ್ನೆ ಕೆಲವೆಡೆ ಇಳಿಕೆಯತ್ತ ಸಾಗಿದ್ದರೆ, ಇನ್ನು ಕೆಲವೆಡೆ ಸ್ಥಿರತೆ ಕಾಯ್ದುಕೊಂಡಿತ್ತು. ಇಂದು ಪ್ರಮುಖ ಎಲ್ಲಾ ಮಹಾ ನಗರಗಲ್ಲಿಯೂ ಸಹ ಚಿನ್ನದ ದರ ಮತ್ತಷ್ಟು ಇಳಿಕೆ ಆಗಿದೆ. ಇದು ಚಿನ್ನಾಭರಣ ಖರೀದಿದಾರರಿಗೆ ಖುಷಿ ನೀಡುವ ವಿಚಾರ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,360 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,33,600 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,400 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,73,000 ರೂಪಾಯಿ ನಿಗದಿಯಾಗಿದೆ. ಸುಮಾರು 1,600 ರೂಪಾಯಿಯಷ್ಟು ಇಳಿಕೆ ಆಗಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 63,000 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,800 ರೂಪಾಯಿಯಷ್ಟು ಇಳಿಕೆ ಕಂಡು ಬಂದಿದೆ.

ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,490 ರೂಪಾಯಿ ಹಾಗೂ 100 ಗ್ರಾಮ ಚಿನ್ನಕ್ಕೆ 4,44,900 ರೂಪಾಯಿ ನಿಗದಿಯಾಗಿದೆ. ಸುಮಾರು 6,100 ರೂಪಅಯಿ ಇಳಿಕೆ ಕಂಡು ಬಂದಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,490 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,54,900 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 6,100 ರೂಪಾಯಿ ಇಳಿಕೆ ಆಗಿದೆ. ಬೆಳ್ಳಿ ಬೆಲೆಯಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 58,300 ರೂಪಾಯಿ ನಿಗದಿಯಾಗಿದೆ.

ಇದನ್ನೂ ಓದಿ:

Gold Price Today: ಇಂದು ಸಹ ಚಿನ್ನ, ಬೆಳ್ಳಿ ದರದಲ್ಲಿ ಬದಲಾವಣೆಗಳಿಲ್ಲ!

Gold Price Today: ಇಂದು ಚಿನ್ನ, ಬೆಳ್ಳಿ ಖರೀದಿಸುವ ಪ್ಲ್ಯಾನ್ ಇದೆಯಾ? ಆಭರಣಗಳ ಬೆಲೆ ಇಳಿಕೆಯಾಗಿದೆ!

Published On - 7:49 am, Fri, 1 October 21

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ