Gold Price Today: ಇಂದು ಚಿನ್ನ, ಬೆಳ್ಳಿ ಖರೀದಿಸುವ ಪ್ಲ್ಯಾನ್ ಇದೆಯಾ? ಆಭರಣಗಳ ಬೆಲೆ ಇಳಿಕೆಯಾಗಿದೆ!
Gold Price Today: ಚಿನ್ನ, ಬೆಳ್ಳಿ ದರ ಇಂದು ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಳಿಕೆ ಕಂಡಿದೆ. ಆಭರಣ ಖರೀದಿಸಬೇಕು ಎಂದು ಯೋಚಿಸಿದ್ದರೆ ಪ್ರಮುಖ ನಗರಗಳಲ್ಲಿ ಎಷ್ಟಿದೆ ಬೆಲೆ ಎಂಬ ಮಾಹಿತಿ ಈ ಕೆಳಗಿನಂತಿದೆ. ಪರಿಶೀಲಿಸಿ.
Gold Silver Price Today | ಬೆಂಗಳೂರು: ನಿನ್ನೆ ಕೆಲವೆಡೆ ಚಿನ್ನದ ದರ ಏರಿಕೆಯ ಹಾದಿ ಹಿಡಿದಿದ್ದರೆ ಇನ್ನು ಕೆಲವೆಡೆ ಇಳಿಕೆ ಕಂಡಿತ್ತು. ಆದರೆ ಇಂದು ( ಸೆಪ್ಟೆಂಬರ್ 29, ಬುಧವಾರ) ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಚಿನ್ನ, ಬೆಳ್ಳಿ ದರ (Silver Price) ಇಳಿಕೆ ಕಂಡಿದೆ. ಇದು ಗ್ರಾಹಕರಿಗೆ ಸಂತೋಷ ಕೊಡುವ ವಿಚಾರ. ಇಂದು ಚಿನ್ನದ (Gold Price) ಆಭರಣ ಖರೀದಿಸಬೇಕು ಎಂಬ ಪ್ಲ್ಯಾನ್ ಇದ್ದರೆ ಆ ಕುರಿತಾಗಿ ಯೋಚಿಸಬಹುದು. ಯಾವ ಯಾವ ನಗರಗಳಲ್ಲಿ ಆಭರಣಗಳ ಬೆಲೆ ಎಷ್ಟಿದೆ ಎಂಬ ಮಾಹಿತಿ ಈ ಕೆಳಗಿನಂತಿದೆ.
ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,200 ರೂಪಾಯಿ ನಿಗದಿಯಾಗಿದೆ. ಸುಮಾರು 150 ರೂಪಾಯಿ ಇಳಿದಿದೆ. 100 ಗ್ರಾಂ ಚಿನ್ನಕ್ಕೆ 4,32,000 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,500 ರೂಪಾಯಿ ಇಳಿಕೆ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,130 ರೂಪಾಯಿ ಹಾಗೂ 100 ಗ್ರಾ ಚಿನ್ನಕ್ಕೆ 4,71,300 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,600 ರೂಪಾಯಿ ಇಳಿಕೆ ಕಂಡು ಬಂದಿದೆ. ಬೆಳ್ಳಿ ದರದಲ್ಲಿಯೂ ಸಹ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 60,100 ರೂಪಾಯಿ ನಿಗದಿಯಾಗಿದೆ. ಸುಮಾರು 150 ರೂಪಾಯಿ ಇಳಿದಿದೆ.
ಚಿನ್ನಾಭರಣ ಖರೀದಿಸಬೇಕೆಂದು ಅದೆಷ್ಟೋ ವರ್ಷಗಳಿಂದ ಸ್ವಲ್ಪ ಸ್ವಲ್ಪವೇ ಹಣ ಕೂಡಿಡುತ್ತಾ ಬಂದಿರುತ್ತೀರಿ. ಯಾವಾಗ ಚಿನ್ನದ ದರ ಇಳಿಕೆ ಕಾಣುತ್ತದೆ ಎಂಬ ನಿರೀಕ್ಷೆಯಲ್ಲಿಯೂ ಇದ್ದಿರಬಹುದು, ಹಾಗಿರುವಾಗ ಇಂದು ಚಿನ್ನದ ದರ ಎಷ್ಟಿದೆ? ಪ್ರಮುಖ ನಗರಗಳಲ್ಲಿ ಯಾವ ರೇಟ್ ಇದೆ? ಎಂಬೆಲ್ಲಾ ಮಾಹಿತಿಗಳಿವೆ. ನೀವು ಕೂಡಿಟ್ಟ ಹಣದಲ್ಲಿ ನೀವು ಆಸೆ ಪಟ್ಟ ಆಭರಣಗಳನ್ನು ಖರೀದಿಸಬಹುದು ಎಂದೆನಿಸಿದರೆ ಇಂದು ಚಿನ್ನಾಭರಣ ಖರೀದಿಸುವ ಕುರಿತಾಗಿ ಯೋಚಿಸಿ. ಇಂದು ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನ, ಬೆಳ್ಳಿ ದರ ಇಳಿಕೆ ಕಂಡಿದೆ.
ಕೋಲ್ಕತ್ತಾದಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,600 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,56,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,500 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,300 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,83,000 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 1,500 ರೂಪಾಯಿಯಷ್ಟು ಇಳಿಕೆಯಾಗಿದೆ. ಅದೇ ರೀತಿ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 60,100 ರೂಪಾಯಿ ನಿದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 150 ರೂಪಾಯಿ ಇಳಿಕೆಯಾಗಿದೆ.
ಮುಂಬೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,040 ರೂಪಾಯಿಗೆ ಇಳಿಕೆಯಾಗಿದೆ. ಸುಮಾರು 240 ರೂಪಅಯಿ ಇಳಿಕೆ ಕಂಡು ಬಂದಿದೆ. 100 ಗ್ರಾಂ ಚಿನ್ನಕ್ಕೆ 4,50,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,400 ರೂಪಾಯಿ ಇಳಿಕೆ ಕಂಡು ಬಂದಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 46,040 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,60,400 ರೂಪಾಯಿ ನಿಗದಿಯಾಗಿದೆ. ದೈನಂದಿನ ದರ ಬದಲಾವಣೆಯಲ್ಲಿ ಸುಮಾರು 2,400 ರೂಪಾಯಿ ಇಳಿಕೆ ಕಂಡಿದೆ.
ಇದನ್ನೂ ಓದಿ:
Gold Price Today: 6 ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ ಚಿನ್ನದ ದರ; ಆಭರಣ ಖರೀದಿಸಲು ಸೂಕ್ತ ಸಮಯವೇ?
Gold Price Today: ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಸ್ಥಿರ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ!
(Gold price today decreased on 2021 September 29 check silver price in bangalore delhi mumbai and minor city)
Published On - 7:18 am, Wed, 29 September 21