Gold Price Today: ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಸ್ಥಿರ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ!

Gold Price Today: ಇಂದು ಚಿನ್ನದ ದರ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಸ್ಥಿರವಾಗಿದೆ. ಬೆಳ್ಳಿ ದರದಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಹಾಗಾಗಿ ನೀವು ಕೂಡಿಟ್ಟ ಹಣದಲ್ಲಿ ಸರಿ ಹೊಂದುವುದಾದರೆ ಚಿನ್ನಾಭರಣ ಖರೀದಿಸುವ ಕುರಿತಾಗಿ ಯೋಚಿಸಬಹುದು.

Gold Price Today: ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಇಂದು ಚಿನ್ನದ ದರ ಸ್ಥಿರ, ಬೆಳ್ಳಿ ದರದಲ್ಲಿ ಕೊಂಚ ಇಳಿಕೆ!
ಸಾಂದರ್ಭಿಕ ಚಿತ್ರ

Gold Silver Price Today | ಬೆಂಗಳೂರು: ಚಿನ್ನಾಭರಣ ಖರೀದಿಸಬೇಕು ಎಂಬ ಆಸೆ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತೆ. ಅದೇ ರೀತಿ ಭಾರತದಲ್ಲಿ ಚಿನ್ನಕ್ಕೆ (Gold Price) ಬೇಡಿಕೆಯೂ ಹೆಚ್ಚಿದೆ. ದುಬಾರಿ ಚಿನ್ನವನ್ನು ಖರೀದಿಸುವಾಗ ದರ ಅಲ್ಪವಾದರೂ ಇಳಿಕೆಯತ್ತ ಸಾಗಿರಬೇಕು ಎಂಬ ನಿರೀಕ್ಷೆ ಜತೆಗಿನ ಆಸೆ ತಪ್ಪಲ್ಲ. ಇಂದು ( ಸೆಪ್ಟೆಂಬರ್​ 26, ಭಾನುವಾರ) ಚಿನ್ನದ ದರ ಪ್ರಮುಖ ಎಲ್ಲಾ ಮಹಾ ನಗರಗಳಲ್ಲಿಯೂ ಸಹ ಸ್ಥಿರವಾಗಿದೆ. ಬೆಳ್ಳಿ ದರದಲ್ಲಿ (Silver Price) ಕೊಂಚ ಇಳಿಕೆ ಕಂಡು ಬಂದಿದೆ. ಹಾಗಾಗಿ ನೀವು ಕೂಡಿಟ್ಟ ಹಣದಲ್ಲಿ ಸರಿ ಹೊಂದುವುದಾದರೆ ಚಿನ್ನಾಭರಣ ಖರೀದಿಸುವ ಕುರಿತಾಗಿ ಯೋಚಿಸಬಹುದು.

ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,200 ರೂಪಾಯಿ ನಿಗದಿಯಾಗಿದೆ. 100 ಗ್ರಾಂ ಚಿನ್ನದ 4,32,000 ರೂಪಾಯಿ ನಿಗದಿಯಾಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,130 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,71,300 ರೂಪಾಯಿ ನಿಗದಿ ಆಗಿದೆ. ದೈನಂದಿನ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದ್ದು, ಕೆಜಿ ಬೆಳ್ಳಿಗೆ 59,900 ರೂಪಾಯಿ ನಿಗದಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 700 ರೂಪಾಯಿ ಇಳಿಕೆಯಾಗಿದೆ.

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 43,570 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,35,700 ರೂಪಾಯಿ ನಿಗದಿ ಆಗಿದೆ. ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 47,530 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,75,300 ರೂಪಾಯಿ ನಿಗದಿಯಾಗಿದೆ. ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದ್ದು, 800 ರೂಪಾಯಿ ಇಳಿಕೆ ಬಳಿಕ ಕೆಜಿ ಬೆಳ್ಳಿ ಬೆಲೆ 64,100 ರೂಪಾಯಿ ನಿಗದಿ ಆಗಿದೆ.

ದೆಹಲಿಯಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 45,350 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,53,500 ರೂಪಾಯಿ ನಿಗದಿ ಆಗಿದೆ. 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 49,480 ರೂಪಾಯಿ ಹಾಗೂ 100 ಗ್ರಾಂ ಚಿನ್ನಕ್ಕೆ 4,94,800 ರೂಪಾಯಿ ನಿಗದಿ ಆಗಿದೆ.

ಕಳೆದ ಒಂದು ವಾರದಿಂದ ಗಮನಿಸಿದಾಗ ಚಿನ್ನ, ಬೆಳ್ಳಿ ದರ ಇಳಿಕೆಯ ಹಾದಿ ಹಿಡಿದಿದೆ. ಆದರೆ ಇಂದು ಚಿನ್ನದ ದರ ಸ್ಥಿರತೆಯನ್ನು ಕಾಯ್ದುಕೊಂಡಿದೆ, ಬೆಂಗಳೂರು, ದೆಹಲಿ, ಮುಂಬೈ, ಚೆನ್ನೈ, ಜೈಪುರ ಹೀಗೆ ಪ್ರಮುಖ ನಗರಗಳಲ್ಲಿ ಆಭರಣದ ದರ ಸ್ಥಿರವಾಗಿಯೇ ಇದೆ. ಅದೆಷ್ಟೋ ವರ್ಷಗಳಿಂದ ಚಿನ್ನಾಭರಣ ಖರೀದಿಸಬೇಕು ಅಂದುಕೊಂಡಿದ್ದರೆ ಈ ಕುರಿತಾಗಿ ಇಂದು ಯೋಚಿಸಬಹುದು.

ಇದನ್ನೂ ಓದಿ:

Gold Rate Today: ಚಿನ್ನ ದರ ಕೊಂಚ ಏರಿಕೆ, ಬೆಳ್ಳಿ ದರ ಇಳಿಕೆ; ಎಷ್ಟಿದೆ ಗೊತ್ತಾ ಇಂದಿನ ಚಿನ್ನದ ದರ?

Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ

(Gold price today unchanged 0n 2021 September 26 check silver price in bangalore delhi mumbai and minor city)

Read Full Article

Click on your DTH Provider to Add TV9 Kannada