Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ

Gold Silver Price Today: ಕಳೆದ ಎರಡು ದಿನಗಳಿಂದ ಚಿನ್ನ ದರ ಇಳಿಕೆಯತ್ತ ಸಾಗುತ್ತಿದ್ದರೂ ಕೂಡಾ ಇಂದು ದರವನ್ನು ಗಮನಿಸಿದಾಗ ಚಿನ್ನ ದರ ಇಳಿಕೆ ಕಂಡಿದೆ. ಬೆಳ್ಳಿ ದರದಲ್ಲಿ ಏರಿಕೆ ಕಂಡಿದೆ. ಹಾಗಿದ್ದಾಗ ಚಿನ್ನ, ಬೆಳ್ಳಿ ದರ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Gold Rate Today: ವಿವಿಧ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಭಾರೀ ಇಳಿಕೆ; ಹೀಗಿದೆ ಬೆಲೆ
ಸಾಂದರ್ಭಿಕ ಚಿತ್ರ
Follow us
shruti hegde
|

Updated on:Mar 30, 2021 | 4:18 PM

ಬೆಂಗಳೂರು: ಕಳೆದೆರಡು ದಿನಗಳಿಂದ ಏರಿಕೆ ಕಂಡಿದ್ದ ಚಿನ್ನ ಇಂದು ಮಾರ್ಚ್​ 30ರಂದು ಇಳಿಕೆ ಕಂಡಿದೆ. ದೈನಂದಿನ ದರ ಪರಿಶೀಲನೆಯಲ್ಲಿ ಚಿನ್ನ ದರ ಏರಿಳಿತ ಕಾಣುತ್ತಿರುವುದು ಸಹಜ. ಇನ್ನಿತರ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಇಳಿಕೆ ಕಂಡಿದೆ. ಹಾಗಿದ್ದಾಗ ಬೆಂಗಳೂರಿನಲ್ಲಿ ಚಿನ್ನ ದರ ಹೇಗಿದೆ ಎಂಬುದರ ಮಾಹಿತಿ ನೋಡೋಣ.

ಚೆನ್ನೈ, ದೆಹಲಿ, ಕೊಲ್ಕತ್ತಾ, ಮಧುರೈ, ಜೈಪುರ, ಅಹಮದಾಬಾದ್, ಕೊಯಮತ್ತೂರು ನಗರಗಳಲ್ಲಿ ಚಿನ್ನ ದರ ಏರಿಕೆಯಾಗಿದೆ. ಚಿನ್ನ ದರ ಸರಿ ಸುಮಾರು 48,000 ಗಡಿ ದಾಟಿದೆ. ಹಾಗಿದ್ದಾಗ ಅಂತಹ ನಗರಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಚಿನ್ನ ದರ ಇಳಿಕೆಯಲ್ಲಿದೆ ಎಂದು ವಿಶ್ಲೇಷಿಸಬಹುದು. ಹಣದ ಅವಶ್ಯಕತೆ ಎದುರಾದಾಗ ಚಿನ್ನ ಸಹಾಯವಾಗುವುದಂತೂ ನಿಜ. ಕಷ್ಟ ಕಾಲದಲ್ಲಿ ಸಹಾಯವಾಗುವಂತೆ ಚಿನ್ನದ ಮೇಲೆ ಹೂಡಿಕೆ ಮಾಡುವುದು ಮೊದಲಿನಿಂದಲೂ ಬಂದ ಪದ್ಧತಿ.

22 ಕ್ಯಾರೆಟ್ ಚಿನ್ನ ದರ 1 ಗ್ರಾಂ ಚಿನ್ನ ನಿನ್ನೆ 4,191 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 4,170 ರೂಪಾಯಿ ನಿಗದಿಯಾಗಿದೆ. 8 ಗ್ರಾಂ ಚಿನ್ನ ನಿನ್ನೆ 33,528 ರೂಪಾಯಿ ನಿಗದಿಯಾಗಿತ್ತು. ದೈನಂದಿನ ದರ ಪರಿಶೀಲಿಸಿದಾಗ 168 ರೂಪಾಯಿ ಇಳಿಕೆ ಕಂಡು ಬಂದಿದ್ದು, ಇಂದು ದರ 33,360 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ನಿನ್ನೆ 41,910 ರೂಪಾಯಿ ಆಗಿದ್ದು, ಇಂದು ದರ 41,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 210 ರೂಪಾಯಿ ಇಳಿಕೆ ಕಂಡಿದೆ. 100 ಗ್ರಾಂ ಚಿನ್ನದರ ನಿನ್ನೆ 4,19,100 ರೂಪಾಯಿ ಆಗಿದ್ದು, ಇಂದಿನ ದರ 4,17,000 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,100 ರೂಪಾಯಿ ಇಳಿಕೆ ಕಂಡುಬಂದಿದೆ.

ಚಿನ್ನವನ್ನು ಖರೀದಿಸಿದರೆ ಯಾವಕಾಲಕ್ಕೂ ಹಾಳಾಗುವ ವಸ್ತುವಲ್ಲ. ಆಪತ್ಕಾಲದಲ್ಲಿ ನೆರವಾಗುವ ವಸ್ತುವಾದ್ದರಿಂದಲೇ ಆಪತ್ಕಾಲದ ಬಂಧು ಎಂದು ಚಿನ್ನವನ್ನು ಕರೆಯುತ್ತೇವೆ. ಹಣ ಕೂಡಿಟ್ಟಾಗ ಚಿನ್ನ ಖರೀದಿಸುವುದು ಭಾರತೀಯರ ಲೆಕ್ಕಾಚಾರ. ಚಿನ್ನಕ್ಕೇಂದೇ ಹಣ ಕೂಡಿಡುವ ಪದ್ಧತಿಯೂ ಉಂಟು. ಕೊರೊನಾ ಸೋಂಕು ಎಲ್ಲೆಡೆ ಆರ್ಭಟ ತೋರುತ್ತಿದ್ದಂತೆ, ಜನರು ಹೊರಗಡೆ ಸುತ್ತಾಡುವುದು ಕಡಿಮೆಯಾಯಿತು. ಸಾಮಾಜಿಕ ಅಂತರ ಕಾಪಾಡುವ ದೃಷ್ಟಿಯಿಂದ ಅಂಗಡಿಗಳಲ್ಲಿ ಮಾರಾಟ ಕಡಿಮೆ ಆಗಿದ್ದೆಂತೂ ನಿಜ. ಹಾಗಾಗಿ ಚಿನ್ನ ಬೇಡಿಕೆ ಕುಸಿದಿತ್ತು. ಜೊತೆ ಜೊತೆಗೆ ಚಿನ್ನದ ಪೂರೈಕೆಯಲ್ಲಿಯೂ ಕಡಿಮೆಯಾಗಿತ್ತು. ಹಾಗಾಗಿ ಚಿನ್ನ ದರ ಏರಿಕೆ ಕಂಡಿತ್ತು. ನಂತರದಲ್ಲಿ ಕೊರೊನಾ ಅಲೆಯಿಂದ ಮುಕ್ತರಾಗುತ್ತಾ ಸಾಗಿದಂತೆ ಆರ್ಥಿಕ ಚಟುವಟಿಕೆಗಳು ದೇಶದಲ್ಲಿ ಸುಧಾರಿಸುತ್ತಾ ಬಂದಂತೆ ದರ ಇಳಿಕೆ ಕಂಡಿದೆ.

24 ಕ್ಯಾರೆಟ್ ಚಿನ್ನ ದರ 1 ಗ್ರಾಂ ಚಿನ್ನ ನಿನ್ನೆ 4,572 ರೂಪಾಯಿಗೆ ಮಾರಾಟವಾಗಿತ್ತು. ಇಂದು ದರ 4,549 ರೂಪಾಯಿ ಆಗಿದೆ. 8 ಗ್ರಾಂ ಚಿನ್ನ ನಿನ್ನೆ 36,576 ರೂಪಾಯಿಗೆ ಮಾರಾಟವಾಗಿದ್ದು ಇಂದು ದರ 36,392 ರೂಪಾಯಿ ಆಗಿದೆ. 10 ಗ್ರಾಂ ಚಿನ್ನ ದರ ನಿನ್ನೆ 45,720 ರೂಪಾಯಿ ಇದ್ದು, ಇಂದು ದರ 45,490 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 230 ರೂಪಾಯಿ ಇಳಿಕೆ ಕಂಡಿದೆ. 100 ಗ್ರಾಂ ಚಿನ್ನ ದರ ನಿನ್ನೆ 4,57,200 ರೂಪಾಯಿಗೆ ನಿಗದಿಯಾಗಿದ್ದು, ಇಂದು ದರ 4,54,900 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 2,300 ರೂಪಾಯಿ ಇಳಿಕೆ ಕಂಡಿದೆ.

ಬೆಳ್ಳಿ ದರ ಮಾಹಿತಿ ದೈನಂದಿನ ದರ ಬದಲಾವಣೆಯಲ್ಲಿ ಚಿನ್ನ ದರ ಇಂದು ಕೊಂಚ ಏರಿಕೆ ಕಂಡಿದೆ. 1 ಗ್ರಾಂ ಬೆಳ್ಳಿ ದರ ನಿನ್ನೆ 65.40 ರೂಪಾಯಿ ಇತ್ತು. ಇಂದು ದರ ಏರಿಕೆಯಿಂದ 65.70 ರೂಪಾಯಿ ಆಗಿದೆ. 8 ಗ್ರಾಂ ಬೆಳ್ಳಿ ನಿನ್ನೆ 523.20 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 525.60 ರೂಪಾಯಿ ಆಗಿದೆ. 10 ಗ್ರಾಂ ಬೆಳ್ಳಿ ದರ ನಿನ್ನೆ 6,570 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 30 ರೂಪಾಯಿ ಏರಿಕೆ ಕಂಡಿದೆ. 1ಕೆಜಿ ಬೆಳ್ಳಿ ದರ ನಿನ್ನೆ 65,400 ರೂಪಾಯಿಗೆ ಮಾರಾಟವಾಗಿದ್ದು, ಇಂದು ದರ 65,700 ರೂಪಾಯಿ ಆಗಿದೆ. ದೈನಂದಿನ ದರ ಬದಲಾವಣೆಯಲ್ಲಿ 300 ರೂಪಾಯಿ ಏರಿಕೆ ಕಂಡಿದೆ.

ಇದನ್ನೂ ಓದಿ: Gold Price Today: ಚಿನ್ನ, ಬೆಳ್ಳಿ ಕೊಳ್ಳುವ ಆಸೆ ಇದ್ದರೆ.. ದರ ಹೀಗಿದೆ ಗಮನಿಸಿ!

Gold Price Today: ಕೂಡಿಟ್ಟ ಹಣಕ್ಕೆ ಚಿನ್ನ ಕೊಳ್ಳಬಹುದೇ ಎಂದು ಯೋಚಿಸಿ.. ಚಿನ್ನಾಭರಣದ ದರ ಹೀಗಿದೆ!

Published On - 9:02 am, Tue, 30 March 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್