ಆಸ್ಪತ್ರೆಗೆ ಹೋಗುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ; ಸಿಬ್ಬಂದಿಗೆ ಧನ್ಯವಾದ ಎಂದ ಕುಟುಂಬಸ್ಥರು

Woman gives birth to twins in Ambulance: ಶಾಕಾಪೂರದಿಂದ‌ ಕುಷ್ಟಗಿ ತಾಲೂಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದ್ದ ವೇಳೆ ಮಾರ್ಗಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ 108 ವಾಹನದಲ್ಲಿದ್ದ ತುರ್ತು ಸಿಬ್ಬಂದಿ ಭೀಮಪ್ಪ ಸುರಕ್ಷಿತವಾಗಿ ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ.

  • TV9 Web Team
  • Published On - 10:07 AM, 30 Mar 2021
ಆಸ್ಪತ್ರೆಗೆ ಹೋಗುವಾಗ ಆ್ಯಂಬುಲೆನ್ಸ್‌ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ; ಸಿಬ್ಬಂದಿಗೆ ಧನ್ಯವಾದ ಎಂದ ಕುಟುಂಬಸ್ಥರು
ಆ್ಯಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳ ಜನನ

ಕೊಪ್ಪಳ: ಆ್ಯಂಬುಲೆನ್ಸ್‌ನಲ್ಲೇ ಮಹಿಳೆಯೊಬ್ಬರು ಅವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಶಾಕಾಪುರ ಗ್ರಾಮದ ಬಳಿ ನಡೆದಿದೆ. ತುಂಬು ಗರ್ಭಿಣಿ 38 ವರ್ಷದ ಪುಷ್ಪಾಗೆ ಬೆಳ್ಳಂಬೆಳಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ಹೀಗಾಗಿ 108 ವಾಹನದ ಮೂಲಕ ಶಾಕಾಪೂರದಿಂದ‌ ಕುಷ್ಟಗಿ ತಾಲೂಕ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದ್ರೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದೆ. ಹೀಗಾಗಿ ಆ್ಯಂಬುಲೆನ್ಸ್‌ನಲ್ಲೇ ಮಹಿಳೆ ಗಂಡು ಹಾಗೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಶಾಕಾಪೂರದಿಂದ‌ ಕುಷ್ಟಗಿ ತಾಲೂಕ ಆಸ್ಪತ್ರೆಗೆ ಕರೆದುಕೊಂಡು ಬರಲಾಗುತ್ತಿದ್ದ ವೇಳೆ ಮಾರ್ಗಮಧ್ಯೆ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೀಗಾಗಿ 108 ವಾಹನದಲ್ಲಿದ್ದ ತುರ್ತು ಸಿಬ್ಬಂದಿ ಭೀಮಪ್ಪ ಸುರಕ್ಷಿತವಾಗಿ ಯಶಸ್ವಿಯಾಗಿ ಹೆರಿಗೆ ಮಾಡಿದ್ದಾರೆ. ತಾಯಿ ಆ್ಯಂಬುಲೆನ್ಸ್‌ನಲ್ಲೇ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯಿ ಮತ್ತು ಅವಳಿ ಮಕ್ಕಳಿಗೆ ಕುಷ್ಟಗಿ ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹೆರಿಗೆ ನೋವು ತಿನ್ನುತ್ತಿದ್ದ ಮಹಿಳೆಗೆ ಯಶಸ್ವಿಯಾಗಿ ಹೆರಿಕೆ ಮಾಡಿಸಿದ ಸಿಬ್ಬಂದಿಗೆ ಕುಟುಂಬಸ್ಥರು ಧನ್ಯವಾದ ತಿಳಿಸಿದ್ದಾರೆ.

Woman gives birth to twins in ambulance

ಆ್ಯಂಬುಲೆನ್ಸ್‌ನಲ್ಲೇ ಅವಳಿ ಮಕ್ಕಳ ಜನನ

ಇದನ್ನೂ ಓದಿ: ಮೈಸೂರಿನ ಪಾರ್ಕ್​ನಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ