Viral Photo: ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ! ಬೆಂಗಳೂರಲ್ಲಿ ತಯಾರಾದ ಸ್ಟೆಷಲ್ ಇಡ್ಲಿಯ ಫೋಟೋ ವೈರಲ್

ಎಂದಾದರೂ ಐಸ್​ ಕ್ರೀಂ ಕಡ್ಡಿಯಲ್ಲಿ ತಯಾರಿಸಿದ ಇಡ್ಲಿ ಸವಿದಿದ್ದೀರಾ? ಬೆಂಗಳೂರಿನ ಹೊಟೆಲ್​ವೊಂದರಲ್ಲಿ ತಯಾರಾದ ಈ ಇಡ್ಲಿಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​.

Viral Photo: ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ! ಬೆಂಗಳೂರಲ್ಲಿ ತಯಾರಾದ ಸ್ಟೆಷಲ್ ಇಡ್ಲಿಯ ಫೋಟೋ ವೈರಲ್
ಐಸ್​ ಕ್ರೀಂ ಕಡ್ಡಿಯಲ್ಲಿ ತಯಾರಾದ ಇಡ್ಲಿ ಫೋಟೋ

ಸಾಮಾನ್ಯವಾಗಿ ತಟ್ಟೆ ಇಡ್ಲಿ, ಬಟನ್​ ಇಡ್ಲಿ ಈ ರೀತಿಯಾಗಿ ನಾನಾ ವಿಧದ ಇಡ್ಲಿಯನ್ನು ನೀವು ಸವಿದಿರಬಹುದು. ಆದರೆ ಎಂದಾದರೂ ಐಸ್ ಕ್ರೀಂ ಕಡ್ಡಿಯಲ್ಲಿ ಇಡ್ಲಿ ಸವಿದಿದ್ದೀರಾ? ಹೊಸ ಹೊಸ ವಿಧಧ ಪ್ರಯೋಗವನ್ನು ಜನರು ಹೆಚ್ಚು ಇಷ್ಟ ಪಡುತ್ತಾರೆ ಎಂಬ ಆಲೋಚನೆಯಿಂದ ಹೊಟೆಲ್​ಗಳು ಹೊಸ ವಿಧಾನವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಅಂದಹಾಗೆಯೇ ಇದೀಗ ವೈರಲ್ ಆದ ಸುದ್ದಿಯೆಂದರೆ ಐಸ್ ಕ್ರೀಂ ಕಡ್ಡಿಯಲ್ಲಿ ತಯಾರಾದ ಇಡ್ಲಿ! ಬೆಂಗಳೂರಿನ ಹೊಟೆಲ್​ವೊಂದರಲ್ಲಿ ತಯಾರಾದ ಈ ಹೊಸ ಪ್ರಯೋಗ ಕೆಲವರ ಕೋಪಕ್ಕೂ ಗುರಿಯಾಗಿದೆ.

ಟ್ವಿಟರ್​ನಲ್ಲಿ ಈ ತಿಂಡಿಯ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಐಸ್ ಕ್ರೀಂ ಕಡ್ಡಿಯಿಂದ ತಯಾರಿಸಿದ ಇಡ್ಲಿಯ ಜತೆಗೆ ಚಟ್ನಿ ಮತ್ತು ಸಾಂಬಾರ್ ಕೂಡ ನೀಡಲಾಗಿದೆ. ಮತ್ತೊಂದು ಚಿತ್ರದಲ್ಲಿ ಗಮನಿಸುವಂತೆಯೇ ಐಸ್ ಕ್ರೀಂ ಹಿಡಿದ ಹಾಗೆಯೇ ಕಡ್ಡಿಯ ಮೂಲಕ ಇಡ್ಲಿ ಹಿಡಿದು ಸಾಂಬಾರ್​ನಲ್ಲಿ ಅದ್ದುತ್ತಿರುವುದನ್ನು ನೋಡಬಹುದು.

ಕೆಲವರು ಈ ಪ್ರಯೋಗಕ್ಕೆ ಕೋಪಗೊಂಡಿದ್ದಾರೆ. ಒಂದುಕಡೆ ಮರಗಳನ್ನು ಉಳಿಸುವ ಹೋರಾಟದಲ್ಲಿ ಇದ್ದರೆ ಇನ್ನೊಂದೆಡೆ ಐಸ್ ಕ್ರೀಂ ಕಡ್ಡಿಗಳನ್ನು ಬಳಸಿ ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಇದನ್ನೂ ಓದಿ:

Viral Photo: ನವ ಜೋಡಿಗೆ 5 ಲೀಟರ್ ಪೆಟ್ರೋಲ್ ಗಿಫ್ಟ್ ಕೊಟ್ಟ ತಮಿಳು ಹಾಸ್ಯನಟ ಮಯಿಲ್ ಸಾಮಿ; ಶುಭ ಹಾರೈಸಿ ಹೇಳಿದ್ದೇನು ಗೊತ್ತಾ?

Viral Video: ಆರ್ಡರ್ ಫುಡ್ ಹೊತ್ತೊಯ್ಯುತ್ತಿದ್ದ ಡ್ರೋನ್ ಮತ್ತು ಕಾಗೆ ನಡುವೆ ಜಗಳ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯ್ತು ವಿಡಿಯೋ

Read Full Article

Click on your DTH Provider to Add TV9 Kannada