ತಂದೆಯಿಂದ ಹಣ ಪಡೆಯಲು ಸ್ವತಃ ತನಗೆ ತಾನೇ ಕಿಡ್ನಾಪ್ ಮಾಡಿಕೊಂಡ ಮಗ; ಇಂಟರೆಸ್ಟಿಂಗ್ ಸ್ಟೋರಿಯಿದು

TV9 Digital Desk

| Edited By: shruti hegde

Updated on:Oct 01, 2021 | 11:04 AM

Viral News: ವಿಚಾರಣೆಯ ಸಮಯದಲ್ಲಿ, ತಾನು ಮಾಡಿದ ಸಾಲವನ್ನು ಹೊಂತಿರುಗಿಸಲು ಹಣದ ಅವಶ್ಯಕತೆ ಇದ್ದರಿಂದ ದಾರಿ ತೋಚದೇ ಈ ರೀತಿ ಮಾಡಿದ್ದೇನೆ ಎಂದು ಸುಶಾಂತ್ ಒಪ್ಪಿಕೊಂಡಿದ್ದಾರೆ.

ತಂದೆಯಿಂದ ಹಣ ಪಡೆಯಲು ಸ್ವತಃ ತನಗೆ ತಾನೇ ಕಿಡ್ನಾಪ್ ಮಾಡಿಕೊಂಡ ಮಗ; ಇಂಟರೆಸ್ಟಿಂಗ್ ಸ್ಟೋರಿಯಿದು
ಸಾಂದರ್ಭಿಕ ಚಿತ್ರ
Follow us

ಹೆತ್ತವರಿಂದ ಹಣ ಪಡೆಯಲು ಯುವಕನೊಬ್ಬ ಸ್ವತಃ ತನಗೇ ತಾನೇ ಕಿಡ್ನಾಪ್​ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಸಿಆರ್​ಪಿ ಸೆಕ್ಷನ್ 164ರ ಅಡಿಯಲ್ಲಿ ಆತನ ಹೇಳಿಕೆಯನ್ನು ದಾಖಲಿಸಲು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ದೆಹಲಿ ಪೊಲೀಸರು ಗುರುವಾರ ಹೇಳಿದ್ದಾರೆ. ಯುವಕ ಉತ್ತರ ಪ್ರದೇಶದ ಬಿಜ್ನೋರ್ ನಿವಾಸಿ ತೇಜ್ ಪಾಲ್ ಸಿಂಗ್ ಅವರ ಮಗ ಸುಶಾಂತ್ ಚೌಧರಿ ಎಂದು ತಿಳಿದು ಬಂದಿದೆ.

ತೇಜ್ ಪಾಲ್ ಅವರು ಮಗ ಸುಶಾಂತ್ ಕಾಣೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರಿಂದ ಪ್ರಕರಣ ಬಯಲಾಗಿದೆ. ಸೆಪ್ಟೆಂಬರ್ 24ರಂದು ತೇಜ್ ಪಾಲ್ ಅವರು ಮಗ ಸುಶಾಂತ್​ನನ್ನು ಹುಡುಕಿಕೊಂಡು ಆತ ಕೆಲಸ ಮಾಡುತ್ತಿದ್ದ ಕಛೇರಿಗೆ ಹೋಗಿದ್ದಾರೆ. ಆದರೆ, 8ನೇ ತಾರೀಕಿನಿಂದಲೇ ಆತ ಕೆಲಸಕ್ಕೆ ಬರುತ್ತಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ. ಅಷ್ಟರಲ್ಲಿ ಸುಶಾಂತ್ ಫೋನ್​ನಿಂದ ತಂದೆ ತೇಜ್ ಪಾಲ್ ಅವರಿಗೆ ಒಂದು ಸಂದೇಶ ರವಾನೆಯಾಗಿದೆ. ಅದರ ಪ್ರಕಾರ, ನಿಮ್ಮ ಮಗ 1,50,000 ರೂಪಾಯಿ ಸಾಲವನ್ನು ಪಡೆದುಕೊಂಡಿದ್ದ ಅದರಲ್ಲಿ 75,000 ರೂಪಾಯಿ ಮಾತ್ರ ಹಿಂದಿರುಗಿಸಿದ್ದಾನೆ. ಉಳಿದ ಮೊತ್ತವನ್ನು ಹಿಂತಿರುಗಿಸದಿದ್ದರೆ ಸುಶಾಂತ್ ತೊಂದರೆಯಲ್ಲಿ ಸಿಲುಕುತ್ತಾನೆ ಎಂದು ಸಂದೇಶದಲ್ಲಿ ಹೇಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆ ಆರಂಭಗೊಂಡ ಬಳಿಕ ಗಾಂಧಿ ಮೈದಾನ, ಚಾಂದಿನಿ ಚೌಕ್ ಹೀಗೆ ಹತ್ತು ಹಲವು ಕಡೆ ಪೊಲೀಸರು ವಿಚಾರಿಸಿದ್ದಾರೆ. ಬಳಿಕ ಸುಶಾಂತ್​ನನ್ನು ಪತ್ತೆ ಹಚ್ಚಲಾಗಿದೆ. ವಿಚಾರಣೆಯ ಸಮಯದಲ್ಲಿ, ತಾನು ಮಾಡಿದ ಸಾಲವನ್ನು ಹೊಂತಿರುಗಿಸಲು ಹಣದ ಅವಶ್ಯಕತೆ ಇದ್ದರಿಂದ ದಾರಿ ತೋಚದೇ ಈ ರೀತಿ ಮಾಡಿದ್ದೇನೆ ಎಂದು ಸುಶಾಂತ್ ಒಪ್ಪಿಕೊಂಡಿದ್ದಾರೆ.

ಆನ್​ಲೈನ್​ ಟ್ರೇಡಿಂಗ್ ಸೈಟ್​ನಲ್ಲಿ ಹಣ ಹೂಡಿಕೆ ಮಾಡುತ್ತಿದ್ದೆ. ಈ ಸೈಟ್​ನಲ್ಲಿ ಹಣ ಹೂಡಿಕೆ ಮಾಡಲು ಹಲವರಲ್ಲಿ ಸಾಲ ಪಡೆದಿದ್ದೆ. ಆದರೆ ದೊಡ್ಡ ನಷ್ಟ ಎದುರಿಸಬೇಕಾಯಿತು. ಹಾಗಾಗಿ ಪೋಷಕರಲ್ಲಿ ಹಣ ಪಡೆಯುವ ನಿಟ್ಟಿನಲ್ಲಿ ಸ್ವತಃ ತನಗೇ ತಾನೇ ಕಿಡ್ನಾಪ್ ಮಾಡಿಕೊಂಡು ಹಣದ ಬೇಡಿಕೆ ಇಟ್ಟಿರುವುದಾಗಿ ಹೇಳಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ:

Viral News: ಹೆಂಡತಿ ಸ್ನಾನ ಮಾಡಲ್ಲ ಅಂತ ವಿಚ್ಛೇದನ ನೀಡಿದ ಗಂಡ!

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು

ತಾಜಾ ಸುದ್ದಿ

Related Stories

Click on your DTH Provider to Add TV9 Kannada