Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು

ಪಾರ್ಟಿಯನ್ನು ಕಲರ್ಫುಲ್ ಎಂಬ ಥೀಮ್​ನೊಂದಿಗೆ ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಉಡುಪಿನೊಂದಿಗೆ ಬರುವಂತೆ ತನ್ನ ಸ್ನೇಹಿತರಲ್ಲಿ ಸೋನಿಯಾ ಕೇಳಿಕೊಂಡಿದ್ದರು. ಅಂದಹಾಗೆ ಕಾಮನಬಿಲ್ಲಿನಂತೆಯೇ ಪಾರ್ಟಿ ನಡೆಯುವ ಸ್ಥಳವನ್ನು ಅಲಂಕಾರಗೊಳಿಸಿದ್ದರು.

Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು
(Image Courtesy: Mercury Press & Media)
Follow us
TV9 Web
| Updated By: shruti hegde

Updated on:Sep 23, 2021 | 1:06 PM

45 ವರ್ಷದ ಮಹಿಳೆ ವಿಚ್ಛೇದನ ಕೂಟವನ್ನು ಆಯೋಜಿಸಿದ್ದು, ತನ್ನ 17 ವರ್ಷದ ದಾಂಪತ್ಯವನ್ನು ಕೊನೆಗೊಳಿಸಲು ಭರ್ಜರಿ ಪಾರ್ಟಿಯನ್ನು ಏರ್ಪಡಿಸಿದ್ದರು. ಮಿರರ್ ವರದಿಯ ಪ್ರಕಾರ, ಸೋನಿಯಾ ಗುಪ್ತಾ ಬ್ರಿಟನ್ ನಿವಾಸಿ ಕಲರ್​ಫುಲ್​ ಪಾರ್ಟಿಯನ್ನು ಆಯೋಜಿಸಿದ್ದರು. ತಾನು ವಿಚ್ಛೇದನ ಪಡೆದ ಸಂತೋಷವನ್ನು ಸಂಭ್ರಮಿಸಲು ಪಾರ್ಟಿಯನ್ನು ಆಯೋಜಿಸಿ, ತನ್ನ ಆಪ್ತ ಸ್ನೇಹಿತರು ಮತ್ತು ಕುಟುಂಬದವರಿಗೆ ಆಹ್ವಾನ ನೀಡಿದ್ದರು.

ಪಾರ್ಟಿಯನ್ನು ಕಲರ್ಫುಲ್ ಎಂಬ ಥೀಮ್​ನೊಂದಿಗೆ ಆಯೋಜಿಸಲಾಗಿತ್ತು. ಬಣ್ಣ ಬಣ್ಣದ ಉಡುಪಿನೊಂದಿಗೆ ಬರುವಂತೆ ತನ್ನ ಸ್ನೇಹಿತರಲ್ಲಿ ಸೋನಿಯಾ ಕೇಳಿಕೊಂಡಿದ್ದರು. ಅಂದಹಾಗೆ ಕಾಮನಬಿಲ್ಲಿನಂತೆಯೇ ಪಾರ್ಟಿ ನಡೆಯುವ ಸ್ಥಳವನ್ನು ಅಲಂಕಾರಗೊಳಿಸಿದ್ದರು.

ನಾನು ಒಳ್ಳೆಯ ಥೀಮ್​ನೊಂದಿಗೆ ಪಾರ್ಟಿ ನಡೆಸಬೇಕೆಂದು ಬಯಸಿದೆ. ಹಾಗಾಗಿಯೇ ಬಣ್ಣದಿಂದ ಸ್ಥಳವನ್ನು ಅಲಂಕಾರಗೊಳಿಸಲಾಗಿತ್ತು. ಜತೆಗೆ ನೇರಳೆ, ಬಿಳಿ, ಕೆಂಪು, ಹಳದಿ ಹೀಗೆ ವಿವಿಧ ಬಣ್ಣಗಳ ಉಡುಪು ತೊಟ್ಟು ಬರುವಂತೆ ನನ್ನ ಸ್ನೇಹಿತರ ಬಳಿ ಕೇಳಿಕೊಂಡಿದ್ದೆ ಎಂದು ಸೋನಿಯಾ ಗುಪ್ತಾ ಹೇಳಿದ್ದಾರೆ. ಕೇಕ್ ಕತ್ತರಿಸುವ ಮೂಲಕ ತನ್ನ ವಿಚ್ಚೇದನ ಕೂಟವನ್ನು ಮಹಿಳೆ ಸಂಭ್ರಮಿಸಿದ್ದಾರೆ.

ಸೋನಿಯಾ 2003ರಲ್ಲಿ ವಿವಾಹವಾದರು ಬಳಿಕ ಬ್ರಿಟನ್​ಗೆ ತೆರಳಿದರು. ಆದರೆ ಅವರ ದಾಂಪತ್ಯದ ಜೀವನದಲ್ಲಿ ಅವರು ಸಂತೋಷವಾಗಿರಲಿಲ್ಲ. ದಂಪತಿ ಮಧ್ಯೆ ಹೊಂದಾಣಿಕೆಯೇ ಆಗುತ್ತಿರಲಿಲ್ಲ. ನಾನು ಮತ್ತೊಮ್ಮೆ ನಾನಾಗಬೇಕು ಎಂದು ಬಯಸಿದ್ದೆ. ನನ್ನ ಮದುವೆಗೂ ಮುಂಚೆ ನಾನು ತುಂಬಾ ಸಂತೋಷವಾಗಿದ್ದೆ. ಮದುವೆಯಾದ ಬಳಿಕ ನರಕದಲ್ಲಿ ವಾಸಿಸುತ್ತಿದ್ದೇನೆ ಎಂಬ ಭಾವನೆ ಹುಟ್ಟಿಕೊಂಡಿತು ಎಂದು ಸೋನಿಯಾ ಹೇಳಿದ್ದಾರೆ. ಮಾನಸಿಕವಾಗಿ ಕುಗ್ಗಿದ್ದೆ. ಇದರಿಂದ ಹೊರಬರಲು ಒದ್ದಾಡುತ್ತಿದೆ. ನನ್ನ ಮಾನಸಿಕ ಸ್ಥಿತಿಯನ್ನೂ ಯಾರೂ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ನನ್ನ ಸ್ನೇಹಿತರು ನನಗೆ ಬೆಂಬಲವಾಗಿ ನಿಂತರು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ:

Viral News: 1 ರೂ. ನಾಣ್ಯವಿದ್ದರೆ ನೀವು ಲಕ್ಷಾಧಿಪತಿಯಾಗಬಹುದು!; ಹೇಗೆ ಅಂತೀರಾ?

Viral News: ‘ಉಡುಗೊರೆ ಮೌಲ್ಯಕ್ಕೆ ತಕ್ಕಂತೆ ಮದುವೆ ಊಟ’ ಮೆನು ಕಾರ್ಡ್​ ಫೋಟೋ ವೈರಲ್

(Viral news 45 years woman celebrating colorful day after divorce ending 17 years marriage)

Published On - 1:03 pm, Thu, 23 September 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ