Viral News: ‘ಉಡುಗೊರೆ ಮೌಲ್ಯಕ್ಕೆ ತಕ್ಕಂತೆ ಮದುವೆ ಊಟ’ ಮೆನು ಕಾರ್ಡ್ ಫೋಟೋ ವೈರಲ್
ಅಥಿತಿಗಳು ಮದುವೆಗೆ ತಂದ ಉಡುಗೊರೆಯ ಮೌಲ್ಯಕ್ಕೆ ಸರಿಯಾಗಿ ಊಟವನ್ನು ನೀಡಲಾಗುವುದು ಎಂದು ಮದುವೆಯ ಮೆನು ಕಾರ್ಡ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಮದುವೆಯ ಮೆನು ಕಾರ್ಡ್ ಫುಲ್ ವೈರಲ್ ಅಗಿದೆ. ನೋಡಲು ತಮಾಷೆಯಾಗಿ ಕಂಡರೂ, ಕೆಲವರಿಗೆ ವಿಚಿತ್ರವಾಗಿದೆ ಅನ್ನಿಸುವ ಮದುವೆಯ ಮೆನು ಕಾರ್ಡ್ ಇದಾಗಿದ್ದು, ಸಾಮಾಜಿಕ ಜಾಲತಾಣಲ್ಲಿ ನೆಟ್ಟಿಗರು ಹಾಸ್ಯ ಮಾಡುವ ಮೂಲಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಹಾಗಾದ್ರೆ ಮದುವೆ ಮೆನು ಕಾರ್ಡ್ನಲ್ಲಿ ವಿಶೇಷ ಏನಿರಬಹುದು? ಅಂತಹ ಕುತೂಹಲ ಕೆರಳಿಸುವ ಸಂಗತಿ ಏನು? ಎಂಬೆಲ್ಲಾ ಪ್ರಶ್ನೆಗಳು ಕಾಡುತ್ತಿರಬಹುದಲ್ಲವೇ?
ಅಥಿತಿಗಳು ಮದುವೆಗೆ ತಂದ ಉಡುಗೊರೆಯ ಮೌಲ್ಯಕ್ಕೆ ಸರಿಯಾಗಿ ಊಟವನ್ನು ನೀಡಲಾಗುವುದು ಎಂದು ಮದುವೆಯ ಮೆನು ಕಾರ್ಡ್ನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ವಿವಾಹದ ನವ ಜೋಡಿಗೆ ಉಡುಗೊರೆಯಾಗಿ ನೀಡುವ ಹಣದ ಮೌಲ್ಯಕ್ಕೆ ಸರಿಯಾಗಿ ವಿವಾಹದ ಊಟ ನಿರ್ಧಾರವಾಗುತ್ತದೆ ಎಂಬ ಹೇಳಿಕೆಯೊಂದಿಗೆ ವಿವಾಹದ ಮೆನು ಕಾರ್ಡ್ಅನ್ನು ಪೋಸ್ಟ್ ಮಾಡಲಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆದ ಚಿತ್ರದ ಮೂಲ ಎಲ್ಲಿಯದು ಎಂಬ ಮಾಹಿತಿ ತಿಳಿದು ಬಂದಿಲ್ಲ.
ಮೆನು ಕಾರ್ಡ್ನಲ್ಲಿ ಉಡುಗೊರೆಯನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. ಮೊದಲ ವರ್ಗವನ್ನು ಪ್ರೀತಿಯ ಉಡುಗೊರೆ ಎಂದು ವರ್ಗೀಕರಿಸಿ 250 ಡಾಲರ್ ( 18,000 ರೂಪಾಯಿ) ಮೌಲ್ಯದ ಉಡುಗೊರೆಯನ್ನು ತರುವ ಜನರಿಗೆ ರೋಸ್ಟೆಡ್ ಚಿಕನ್ ಮತ್ತು ಸ್ವಾರ್ಡ್ ಫಿಶ್ ಸವಿಯಬಹುದು.
ಎರಡನೇ ವರ್ಗದಲ್ಲಿ 251 ರಿಂದ 500 ಡಾಲರ್ (ಸುಮಾರು 36,000 ರೂಪಾಯಿ). ಪೋಚ್ಡ್ ಸಾಲ್ಮೋನ್ ಮತ್ತು ಸ್ಲೈಸ್ ಸ್ಟಿಕ್ ಸಿಗುತ್ತದೆ ಹಾಗೂ ಮೂರನೇ ವರ್ಗ ಗೋಲ್ಡನ್ ಗಿಫ್ಟ್ ಎಂದು ವರ್ಗೀಕರಿಸಲಾಗಿದ್ದು, 1000 ಡಾಲರ್ ( 73,000 ರೂಪಾಯಿ) ಮೌಲ್ಯದ ಉಡುಗೊರೆಗಳಿಗೆ ನಳ್ಳಿ ಬಾಲಗಳನ್ನು ಊಟದಲ್ಲಿ ನೀಡಲಾಗುತ್ತದೆ.
ನಾಲ್ಕನೇಯ ಮತ್ತು ಕೊನೆಯ ವರ್ಗವೆಂದರೆ ಪ್ಲಾಟಿನಂ ಉಡುಗೊರೆಗಳು ಇದರಲ್ಲಿ 1000 ದಿಂದ 2,500 ಡಾಲರ್ ಮೌಲ್ಯದ ಉಡುಗೊರೆಗೆ ನಳ್ಳಿಯ ಇನ್ನೊಂದು ರೂಪಾಂತರದ ಊಟವನ್ನು ನೀಡಲಾಗುತ್ತದೆ. ನೀವು ಒಳ್ಳೆಯ ಮೌಲ್ಯದ ಉಡುಗೊರೆಯನ್ನು ನೀಡಿದರೆ ಉತ್ತಮ ಊಟ ಸವಿಯಬಹುದು ಎಂಬ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಲ್ಲಿದೆ.
ಇದನ್ನೂ ಓದಿ:
Viral News: ಜಮ್ಮು ಕಾಶ್ಮೀರಲ್ಲಿ 1,200 ವರ್ಷ ಹಳೆಯದಾದ ಕಪ್ಪು ಕಲ್ಲಿನಿಂದ ಕೆತ್ತಿದ ದುರ್ಗಾದೇವಿ ವಿಗ್ರಹ ಪತ್ತೆ
(Viral News Wedding menu card statues guests to get value gift wedding card photo goes viral)
Published On - 2:34 pm, Mon, 13 September 21