ಕ್ರೀಡಾಂಗಣದ ಮೊದಲನೇ ಮಹಡಿಯಿಂದ ಕೆಳಕ್ಕೆ ಬೀಳುತ್ತಿದ್ದ ಬೆಕ್ಕನ್ನು ಅಮೆರಿಕಾ ಧ್ವಜ ಬಳಸಿ ರಕ್ಷಿಸಿದ ಫುಟ್ಬಾಲ್ ಪ್ರೇಕ್ಷಕರು; ವಿಡಿಯೋ ವೈರಲ್
Viral Video: ಇದೀಗ ವೈರಲ್ ಆದ ವಿಡಿಯೋ ಕೂಡಾ ಬೆರಗಾಗುವಂಥದ್ದು! ಮೇಲಿನಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದ ಬೆಕ್ಕಿನ ಪ್ರಾಣವನ್ನು ಫೂಟ್ಬಾಲ್ ಕ್ರೀಡೆ ವೀಕ್ಷಿಸುತ್ತಿದ್ದ ಪ್ರೇಕ್ಷಕರು ರಕ್ಷಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಅದೆಷ್ಟೋ ವಿಡಿಯೋಗಳು ಹರಿದಾಡುತ್ತವೆ. ಕೆಲವು ತಮಾಷೆಯಾಗಿದ್ದರೆ ಇನ್ನು ಕೆಲವು ಆಶ್ಚರ್ಯವನ್ನುಂಟು ಮಾಡುತ್ತವೆ. ಕೆಲವು ವಿಡಿಯೋಗಳು ಮೈ ಜುಂ ಅನ್ನಿಸುವಷ್ಟು ಭಯಾನಕವಾಗಿರುತ್ತದೆ. ಇದೀಗ ವೈರಲ್ ಆದ ವಿಡಿಯೋ ಕೂಡಾ ಬೆರಗಾಗುವಂಥದ್ದು! ಕ್ರೀಡಾಂಗಣದ ಮೊದಲನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳುತ್ತಿದ್ದ ಬೆಕ್ಕಿನ ಪ್ರಾಣವನ್ನು ಫುಟ್ಬಾಲ್ ಕ್ರೀಡೆ ವೀಕ್ಷಿಸುತ್ತಿದ್ದ ಪ್ರೇಕ್ಷಕರು ರಕ್ಷಿಸಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ಘಟನೆ ಅಮೆರಿಕಾದ ಹಾರ್ಡ್ ರಾಕ್ ಸ್ಟೇಡಿಯಂನಲ್ಲಿ ನಡೆದಿದೆ. ಕ್ರೀಡಾಂಗಣದಲ್ಲಿ ಕಾಲೇಜು ವಿದ್ಯಾರ್ಥಿಗಳ ಫುಟ್ಬಾಲ್ ಸ್ಪರ್ಧೆ ನಡೆಯುತ್ತಿತ್ತು. ಫುಟ್ಬಾಲ್ ಕ್ರೀಡೆಯನ್ನು ಅಭಿಮಾನಿಗಳೆಲ್ಲಾ ಉತ್ಸುಕರಾಗಿ ವೀಕ್ಷಿಸುತ್ತಿದ್ದರು. ಕಪ್ಪು – ಬಿಳಿ ಬಣ್ಣ ಮಿಶ್ರಿತ ಬೆಕ್ಕೊಂದು ಅಲ್ಲಿಗೆ ಬಂದಿದೆ. ಅದೇನೋ.. ಹೇಗೋ ಕ್ರೀಡಾಂಗಣದ ಮೊದಲನೇ ಮಹಡಿಯಲ್ಲಿ ನೇತಾಡುತ್ತಿದೆ. ಬೆಕ್ಕಿನ ಪರಿಸ್ಥಿತಿ ನೋಡಿದ ಜನರು ಒಮ್ಮೆಲೆ ಭಯಗೊಂಡಿದ್ದಾರೆ. ಹೇಗಾದರೂ ಮಾಡಿ ಬೆಕ್ಕಿನ ಜೀವ ಉಳಿಸಲು ಪ್ರಯತ್ನ ಪಡುತ್ತಿದ್ದಾರೆ.
ವಿಡಿಯೋ ಒಮ್ಮೆಲೆ ನೋಡಿದಾಕ್ಷಣ ಮೈ ಜುಂ ಅನ್ನಿಸುವುದಂತೂ ಸತ್ಯ. ಅಲ್ಲಿದ್ದ ಜನರು ಬೆಕ್ಕನ್ನು ರಕ್ಷಿಸಲು ಸಾಹಸ ಪಡುತ್ತಿದ್ದಾರೆ. ಆದರೆ ಬೆಕ್ಕು ಅವರ ಕೈಗೆ ಎಟಕುತ್ತಿಲ್ಲ. ಇನ್ನೇನು ಬೆಕ್ಕು ಕೆಳಗೆ ಬಿದ್ದೇ ಬಿಟ್ಟಿದೆ. ಕೆಳಗಿದ್ದ ಜನರ ಗುಂಪೊಂದು ಅಮೆರಿಕ ಧ್ವಜವನ್ನು ಬಳಸಿ ಬೆಕ್ಕನ್ನು ಪ್ರಾಣಾಪಾಯದಿಂದ ರಕ್ಷಿಸಿದೆ.
CAT SURVIVES FALL AT HARD ROCK STADIUM!!!! #SaveTheCat pic.twitter.com/oPNGgfUltZ
— Yianni Laros (@Yiannithemvp) September 11, 2021
ಅದೃಷ್ಟವಾಶಾತ್ ಬೆಕ್ಕಿನ ಪ್ರಾಣವನ್ನು ರಕ್ಷಿಸಲು ಅಮೆರಿಕಾ ಧ್ವಜವನ್ನು ಸುರಕ್ಷತಾ ಜಾಲವಾಗಿ ಬಳಸಿದ್ದಾರೆ. ಬೆಕ್ಕು ಪ್ರಾಣಾಪಾಯದಿಂದ ಪಾರಾಗಿದೆ. ಸ್ಥಳದಲ್ಲಿ ನೆರೆದಿದ್ದ ಜನರೆಲ್ಲಾ ಸಂತೋಷದಿಂದ ಕಿರುಚಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.
ವರದಿಯ ಪ್ರಕಾರ, ಕ್ರೀಡಾಂಗಣದ ಭದ್ರತಾ ಸಿಬ್ಬಂದಿ ಬೆಕ್ಕನ್ನು ಸುರಕ್ಷಿತವಾಗಿ ವಾಸಸ್ಥಾನಕ್ಕೆ ತಲುಪಿಸಿದ್ದಾರೆ. ಬೆಕ್ಕಿಗೆ ಯಾವುದೇ ಗಾಯಗಳಾಗಿಲ್ಲ ಎಂಬುದು ತಿಳಿದು ಬಂದಿದೆ. ಬೆಕ್ಕಿಗೆ ತುಂಬಾ ಭಯವಾಗಿತ್ತು, ತನ್ನ ಪ್ರಾಣ ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಪಡುತ್ತಿತ್ತು ಎಂದು ಓರ್ವರು ಹೇಳಿದ್ದಾರೆ. ಈ ಕುರಿತಂತೆ ವರದಿಗಳಿಂದ ಮಾಹಿತಿ ತಿಳಿದು ಬಂದಿದೆ.
Well this may be the craziest thing I’ve seen at a college football game #HardRockCat pic.twitter.com/qfQgma23Xm
— Hollywood (@DannyWQAM) September 11, 2021
ಇದನ್ನೂ ಓದಿ:
Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ
(Falling cat catch use American flag in football playground)
Published On - 11:20 am, Mon, 13 September 21