ಈ ವೈರಲ್ ವಿಡಿಯೋದಲ್ಲಿ ಕಾಳಿಂಗ ಸರ್ಪ ಮತ್ತೊಂದು ಹಾವನ್ನು ಹಿಡಿದಿರುವ ದೃಶ್ಯ ಸೆರೆಯಾಗಿದೆ. ಸಣ್ಣ ಜಾತಿಗೆ ಸೇರಿದ ಹಾವೊಂದನ್ನು ಬಾಯಿಯಲ್ಲಿ ಕಚ್ಚಿ ಹಿಡಿದುಕೊಂಡ ಕಾಳಿಂಗ ಸರ್ಪ ಕ್ಯಾಮೆರಾವನ್ನು ದಿಟ್ಟಿಸಿರುವ ರೀತಿ ಎಂತಹ ಗಟ್ಟಿ ಹೃದಯವನ್ನೂ ಒಮ್ಮೆ ಅಲುಗಾಡಿಸುವಂತಿದೆ. ಅದರಲ್ಲೂ ವಿಡಿಯೋವನ್ನು ಸರಿಯಾಗಿ ಗಮನವಿಟ್ಟು ನೋಡುತ್ತಾ ಅದರ ಸದ್ದನ್ನೂ ಆಲಿಸಿದರೆ ಬೇಟೆಯನ್ನು ಬಾಯಲ್ಲಿ ಇಟ್ಟುಕೊಂಡ ಉರಗ ಲೋಕದ ರಾಜ ಉಸಿರು ಬಿಡುವ ಸದ್ದೂ ಕೇಳಿಸುತ್ತದೆ.
ಪೂರ್ಣ ಜೀವ ಕಳೆದುಕೊಳ್ಳದೇ ಒದ್ದಾಡುತ್ತಿರುವ ಹಾವನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಜೋರಾಗಿ ಬುಸುಗುಡುತ್ತಾ ಕ್ಯಾಮೆರಾವನ್ನೇ ದಿಟ್ಟಿಸಿರುವ ಕಾಳಿಂಗ ಸರ್ಪದ ಗಾಂಭೀರ್ಯತೆ ಅಕ್ಷರಶಃ ದಿಗಿಲು ಮೂಡಿಸುವಂತಿದೆ. ಸಿಟ್ಟಿನ ಉಸಿರು ಆಲಿಸಿದರೆ ವಿಡಿಯೋ ನೋಡುವಾಗಲೂ ಸಣ್ಣಗೆ ಎದೆ ನಡುಗದೇ ಇರದು. ಜತೆಗೆ, ವಿಡಿಯೋದ ಕೊನೆ ಭಾಗದಲ್ಲಿ ಹೆಡೆಯೆತ್ತಿ ನಿಂತ ಕಾಳಿಂಗ ಸಿಟ್ಟಿನಲ್ಲಿ ಬಾಯಲ್ಲಿದ್ದ ಬೇಟೆ ಹಾವನ್ನು ಪಕ್ಕಕ್ಕೆ ಕುಕ್ಕುವ ದೃಶ್ಯವಂತೂ ಬೆಚ್ಚಿ ಬೀಳಿಸುತ್ತದೆ. ಒಂದೊಮ್ಮೆ ಈ ಹಾವಿನ ಕೆಂಗಣ್ಣಿಗೆ ನಾವು ಗುರಿಯಾದರೆ ಎಂತಹ ಪರಿಸ್ಥಿತಿ ಎದುರಾಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಡುವಂತೆ ಭಾಸವಾಗುತ್ತದೆ.
ಕೆಲ ದಿನಗಳ ಹಿಂದಷ್ಟೇ ಕಾಳಿಂಗ ಸರ್ಪವನ್ನು ಹಿಡಿಯಲೆಂದು ಹೋದ ವ್ಯಕ್ತಿಯ ವಿರುದ್ಧ ಆ ಹಾವು ಹೆಡೆ ಬಿಚ್ಚಿ ಎದ್ದು ನಿಂತ ದೃಶ್ಯ ವೈರಲ್ ಆಗಿತ್ತು. ಅದನ್ನು ನೋಡಿ ಬೆಚ್ಚಿದ್ದ ಜನರು ಯಬ್ಬಾ ಇದೆಷ್ಟು ಅಪಾಯಕಾರಿ ಎಂದು ಉದ್ಗರಿಸಿದ್ದರು. ಇದೀಗ ಆ ವಿಡಿಯೋದ ದೃಶ್ಯ ಕಣ್ಣಿಂದ ಮಾಸುವ ಮೊದಲೇ ಮತ್ತೊಂದು ವಿಡಿಯೋ ವೈರಲ್ ಆಗಿ ಎಲ್ಲರೂ ಹುಬ್ಬೇರಿಸುವಂತೆ ಮಾಡಿದೆ.
ಇದನ್ನೂ ಓದಿ:
Viral Video: ಮನೆ ಬಳಿ ಕಾಣಿಸಿಕೊಂಡ ನಾಗರಹಾವಿಗೆ ಮಾತಿನಲ್ಲೇ ಸಮಾಧಾನ ಹೇಳಿ ವಾಪಾಸು ಕಳುಹಿಸಿದ ಮಹಿಳೆ
(King cobra ate a snake alive people were shocked after watching this viral video)