Viral Video: ಬಾಲಕಿಯ ತೊಡೆಯ ಮೇಲೆ ನಿದ್ರಿಸುತ್ತಿರುವ 20 ಅಡಿ ಉದ್ದದ ಹೆಬ್ಬಾವು; ವಿಡಿಯೋ ನೋಡಿ ದಂಗಾದ ನೆಟ್ಟಿಗರು

ಇನ್ಸ್ಟಾಗ್ರಾಂನಲ್ಲಿ 20 ಅಡಿ ಉದ್ದದ ಹೆಬ್ಬಾವೊಂದು ಬಾಲಕಿಯೊಬ್ಬಳ ತೊಡೆಯ ಮೇಲೆ ಮಲಗಿರುವ ವಿಡಿಯೊ ತುಣುಕು ವೈರಲ್ ಆಗಿದೆ. ಭಯಾನಕ ದೃಶ್ಯವನ್ನು ನೋಡಿ ನೆಟ್ಟಿಗರು ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.

Viral Video: ಬಾಲಕಿಯ ತೊಡೆಯ ಮೇಲೆ ನಿದ್ರಿಸುತ್ತಿರುವ 20 ಅಡಿ ಉದ್ದದ ಹೆಬ್ಬಾವು; ವಿಡಿಯೋ ನೋಡಿ ದಂಗಾದ ನೆಟ್ಟಿಗರು
ವಿಡಿಯೊದಿಂದ ಸೆರೆಹಿಡಿಯಲಾದ ಚಿತ್ರ
Follow us
TV9 Web
| Updated By: guruganesh bhat

Updated on:Oct 01, 2021 | 7:28 PM

ಅಂತರ್ಜಾಲದಲ್ಲಿ ಪ್ರಾಣಿ ಪ್ರಪಂಚಕ್ಕೆ ಸಂಬಂಧಪಟ್ಟ ಹಲವು ವಿಡಿಯೊಗಳು ವೈರಲ್ ಆಗುತ್ತಿರುತ್ತವೆ. ಕೆಲವು ನೋಡುಗರ ಮುಖದಲ್ಲಿ ನಗು ಮೂಡಿಸಿದರೆ, ಮತ್ತೆ ಕೆಲವು ಅಚ್ಚರಿ ಮೂಡಿಸುತ್ತವೆ. ಮತ್ತಷ್ಟು ವಿಡಿಯೊಗಳು ವೀಕ್ಷಕರನ್ನು ದಿಗ್ಭ್ರಾಂತಿಗೆ ತಳ್ಳುತ್ತವೆ. ಅಂತಹ ವಿಡಿಯೊಗಳನ್ನು ನೋಡಿದಾಗ ಮೈ ಜುಮ್ಮೆನ್ನುತ್ತದೆ, ಹೇಗೆ ಪ್ರತಿಕ್ರಿಯೆ ನೀಡಬೇಕು ಎಂಬುದೇ ತೋಚುವುದಿಲ್ಲ. ಇವುಗಳಲ್ಲಿ ಹೆಚ್ಚಾಗಿ ಹಾವುಗಳಿಗೆ ಸಂಬಂಧಪಟ್ಟ ವಿಡಿಯೋಗಳು ನೋಡುಗರಿಗೆ ಭಯ ಹುಟ್ಟಿಸುವುದು ಹೌದು. ಅಂಥದ್ದೇ ಒಂದು ವಿಡಿಯೊ ಇತ್ತೀಚೆಗೆ ಅಂತರ್ಜಾಲದಲ್ಲಿ ಟ್ರೆಂಡಿಂಗ್ ಆಗಿದೆ.

ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿರುವ ಈ ವಿಡಿಯೊದಲ್ಲಿ 20 ಅಡಿ ಉದ್ದದ ದೊಡ್ಡ ಹೆಬ್ಬಾವೊಂದು, ಪುಟ್ಟ ಬಾಲಕಿಯೊಬ್ಬಳ ತೊಡೆಯ ಮೇಲೆ ತಲೆ ಇಟ್ಟು ನಿದ್ರಿಸುತ್ತಿದೆ. ಆ ಬಾಲಕಿ ಕೈಯಲ್ಲಿ ಮೊಬೈಲ್ ಇಟ್ಟುಕೊಂಡು ಆರಾಮವಾಗಿ ಕುಳಿತಿದ್ದಾಳೆ. ಮನೆಯ ಮುಂಭಾಗದಲ್ಲಿ ಕುಳಿತಿರುವಂತೆ ಕಾಣುವ ಈ ವಿಡಿಯೊದಲ್ಲಿ, ಹಾವು ಕೂಡ ನಿರ್ಭಿಡೆಯಿಂದ ಕುಳಿತಂತಿದೆ. ಈ ವಿಡಿಯೊ ನೋಡಿರುವ ನೆಟ್ಟಿಗರು ದಂಗಾಗಿದ್ದಾರೆ.

ಇನ್ಸ್ಟಾಗ್ರಾಂನಲ್ಲಿ ‘ಯುವರ್ ನೇಚರ್ ಗ್ರಾಂ’ ಎಂಬ ಪೇಜ್​ನಿಂದ ಈ ವಿಡಿಯೊ ಹಂಚಿಕೊಳ್ಳಲಾಗಿದೆ. ಸೆಪ್ಟೆಂಬರ್ 18ರಂದು ಈ ವಿಡಿಯೊವನ್ನು ಹಂಚಿಕೊಳ್ಳಲಾಗಿದ್ದು, ಇದುವರೆಗೆ ಸುಮಾರು ಒಂದೂವರೆ ಕೋಟಿ ಜನ ಈ ಭಯಾನಕ ವಿಡಿಯೊವನ್ನು ವೀಕ್ಷಿಸಿದ್ದಾರೆ.

ವಿಡಿಯೋ ಇಲ್ಲಿದೆ:

ವಿಡಿಯೊ ನೋಡಿದ ನೆಟ್ಟಿಗರು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ. ಅಲ್ಲಿ ಬಂದಿರುವ ಕೆಲವು ಕಾಮೆಂಟ್​ಗಳ ಪ್ರಕಾರ ಈ ವಿಡಿಯೊ ಇಂಡೋನೇಷ್ಯಾದ್ದು ಎನ್ನಲಾಗಿದೆ. ಆದರೆ ಈ ಕುರಿತು ಇನ್ನೂ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.

ಇದನ್ನೂ ಓದಿ:

ವಿವಾಹಿತ ಕಿರುತೆರೆ ನಟಿಗೆ ‘ಆರ್​​ ಯು ಎ ವರ್ಜಿನ್?’ ಎಂದು ಕೇಳಿದ ಫ್ಯಾನ್​; ಎಲ್ಲರ ಎದುರು ಮಾನ ಕಳೆದ ಹೀರೋಯಿನ್

ವಿಧಾನಸೌಧದಲ್ಲಿ ಆಪರೇಷನ್ ಕ್ಯಾಟ್! ವಿಡಿಯೋ ನೋಡಿ

ಜಾಗಿಂಗ್ ನೆಪದಲ್ಲಿ ಗರ್ಲ್​ ಫ್ರೆಂಡ್​ ಮೀಟ್ ಮಾಡೋಕೆ ಬಂದ ಗಂಡನನ್ನ ರೆಡ್ ಹ್ಯಾಂಡ್ಆಗಿ ಹಿಡಿದ ಪತ್ನಿ! ವಿಡಿಯೋ ನೋಡಿ

Published On - 7:23 pm, Thu, 30 September 21

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ