Shocking News: ಆಪರೇಷನ್ ವೇಳೆ ಅತ್ತಿದ್ದಕ್ಕೆ ಹೆಚ್ಚುವರಿ ಬಿಲ್; ಅಳೋದೂ ತಪ್ಪಾ? ಎಂದ ಮಹಿಳೆ

ಮಹಿಳೆಯೊಬ್ಬರು ನನಗೆ ಆಪರೇಷನ್ ಮಾಡುವಾಗ ಅತ್ತಿದ್ದೇನೆ ಎಂಬ ಕಾರಣಕ್ಕೆ ಬಿಲ್​ನಲ್ಲಿ ಆಸ್ಪತ್ರೆಯವರು ಹೆಚ್ಚುವರಿ ಶುಲ್ಕ ನಮೂದಿಸಿದ್ದಾರೆ. ಆ ಹೆಚ್ಚುವರಿ ಶುಲ್ಕಕ್ಕೆ ಬ್ರೀಫ್ ಎಮೋಷನ್ ಎಂದು ಹೆಸರಿಟ್ಟಿದ್ದಾರೆ ಎಂದು ಬಿಲ್ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ.

Shocking News: ಆಪರೇಷನ್ ವೇಳೆ ಅತ್ತಿದ್ದಕ್ಕೆ ಹೆಚ್ಚುವರಿ ಬಿಲ್; ಅಳೋದೂ ತಪ್ಪಾ? ಎಂದ ಮಹಿಳೆ
ಬಿಲ್ ಪ್ರತಿ
Follow us
| Updated By: ಸುಷ್ಮಾ ಚಕ್ರೆ

Updated on:Sep 30, 2021 | 3:15 PM

ಆಪರೇಷನ್ ಮಾಡುವಾಗ ರೋಗಿಗಳಿಗೆ ಭಯವಾಗುವುದು ಸಹಜ. ಆಪರೇಷನ್ ಥಿಯೇಟರಿಗೆ ಕರೆದುಕೊಮಡು ಹೋಗುತ್ತಿದ್ದಂತೆ ಅತ್ತು ಕರೆದು ಗೋಳಾಡುವವರು ಎಷ್ಟು ಜನರಿಲ್ಲ? ಸರ್ಜರಿ ಮಾಡುವಾಗ ಏನಾದರೂ ಹೆಚ್ಚು ಕಡಿಮೆಯಾದರೆ, ನೋವನ್ನು ತಡೆದುಕೊಳ್ಳದಿದ್ದರೆ, ಮತ್ತೆ ಮನೆಯವರನ್ನು ನೋಡಲು ಸಾಧ್ಯವಾಗದಿದ್ದರೆ ಹೀಗೆ ರೋಗಿಗಳ ಮನಸಿನಲ್ಲಿ ನೂರಾರು ಪ್ರಶ್ನೆಗಳೆದ್ದು ಅವರ ತಾಳ್ಮೆಯ ಕಟ್ಟೆ ಒಡೆದಿರುತ್ತದೆ. ಆದರೆ, ಆಪರೇಷನ್ ಮಾಡುವಾಗ ರೋಗಿ ಅತ್ತಿದ್ದಾರೆ ಎಂಬ ಕಾರಣಕ್ಕೆ ಆಸ್ಪತ್ರೆಯ ಸಿಬ್ಬಂದಿ ಶುಲ್ಕ ವಿಧಿಸಿದ ಫೋಟೋ ವೈರಲ್ ಆಗಿದೆ.

ಕೆಲವೊಮ್ಮೆ ನಾವು ಎಷ್ಟೇ ಪ್ರಯತ್ನಿಸಿದರೂ ನಮ್ಮ ಭಾವನೆಗಳನ್ನು ಮತ್ತು ಭಯವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ. ಮಹಿಳೆಯೊಬ್ಬರು ನನಗೆ ಆಪರೇಷನ್ ಮಾಡುವಾಗ ಅತ್ತಿದ್ದೇನೆ ಎಂಬ ಕಾರಣಕ್ಕೆ ಬಿಲ್​ನಲ್ಲಿ ಆಸ್ಪತ್ರೆಯವರು ಹೆಚ್ಚುವರಿ ಶುಲ್ಕ ನಮೂದಿಸಿದ್ದಾರೆ. ಆ ಹೆಚ್ಚುವರಿ ಶುಲ್ಕಕ್ಕೆ ಬ್ರೀಫ್ ಎಮೋಷನ್ ಎಂದು ಹೆಸರಿಟ್ಟಿದ್ದಾರೆ ಎಂದು ಬಿಲ್ ಪ್ರತಿಯನ್ನು ಟ್ವೀಟ್ ಮಾಡಿದ್ದಾರೆ. ಅಮೆರಿಕದ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಅನೇಕರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಮೆರಿಕದ ಆರೋಗ್ಯ ವ್ಯವಸ್ಥೆಯಲ್ಲಿ ಇಂಥವೆಲ್ಲ ಮಮೂಲು ಎಂದು ಕೆಲವರು ಟ್ವೀಟ್ ಮಾಡಿದ್ದರೆ ಇನ್ನು ಕೆಲವರು ಭಾವನೆಯನ್ನು ವ್ಯಕ್ತಪಡಿಸಿದ್ದಕ್ಕೆ ಹೆಚ್ಚುವರಿ ಶುಲ್ಕ ಪಾವತಿಸಬೇಕೆಂದರೆ ಅದ್ಯಾವ ನ್ಯಾಯ? ನೋವಾದಾಗ ಅಳುವುದು ತಪ್ಪೇ? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Viral News: ಅಕ್ಕನ ಸಮಾಧಿ ಬಿಟ್ಟು ಕದಲದ ಬೆಕ್ಕು; ಮನ ಕಲಕುವ ವಿಡಿಯೋ ವೈರಲ್

Shocking News: ಲೈಂಗಿಕ ಕ್ರಿಯೆ ವೇಳೆ ಕಾಂಡೋಮ್ ಬದಲು ಗುಪ್ತಾಂಗಕ್ಕೆ ಗಮ್ ಅಂಟಿಸಿಕೊಂಡ ಯುವಕ ಸಾವು!

Published On - 3:13 pm, Thu, 30 September 21