ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ ಟ್ರಾಫಿಕ್ ಪೊಲೀಸರನ್ನೇ ಎಳೆದೊಯ್ದ ಕಾರಿನ ಚಾಲಕ; ಎಫ್ಐಆರ್ ದಾಖಲು
Viral Video: ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಸಿಬ್ಬಂದಿಯನ್ನು ಚಾಲಕ ಎಳೆದೊಯ್ದಿದ್ದಾನೆ. ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದ್ದಲ್ಲದೇ ದಂಡದಿಂದ ತಪ್ಪಿಸಿಕೊಳ್ಳುವ ಸಲುವಾಗಿ ಕರ್ತವ್ಯದಲ್ಲಿದ್ದ ಟ್ರಾಫಿಕ್ ಸಿಬ್ಬಂದಿಯನ್ನು ಚಾಲಕ ಎಳೆದೊಯ್ದಿದ್ದಾನೆ. ಕಾರಿನ ಬ್ಯಾನೆಟ್ ಮೇಲೆ ಕುಳಿತ ಟ್ರಾಫಿಕ್ ಪೊಲೀಸರನ್ನು ಸುಮಾರು 1 ಕಿ. ಮೀ ನಷ್ಟು ಕರೆದೊಯ್ದಿದ್ದಾನೆ. ಘಟನೆ ನಿನ್ನೆ (ಸೆ.30) ಅಂಧೇರಿಯಲ್ಲಿ ನಡೆದಿದೆ. ಕಾರಿನ ಚಾಲಕನ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿಯೊಬ್ಬರು ಅಂಧೇರಿಯಲ್ಲಿನ ಆಜಾದ್ ನಗರ ಮೆಟ್ರೋ ನಿಲ್ದಾಣದ ಕೆಳಗೆ ಕಾನ್ಸ್ಟೇಬಲ್ ವಿಜಯ್ ಸಿಂಗ್ ಗುರವ್ (48) ಕರ್ತವ್ಯದಲ್ಲಿದ್ದರು. ಟ್ರಾಫಿಕ್ ನಿಯಮ ಉಲ್ಲಂಘಿಸಿ ಒಂದು ಕಾರು ಸಾಗುತ್ತಿರುವುದನ್ನು ನೋಡಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾರು ನಿಲ್ಲಿಸಿದ್ದಾರೆ. ಆ ವೇಳೆ ಚಾಲಕ ಇವರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ ಎಂದು ಹೇಳಿದ್ದಾರೆ.
ಚಾಲಕ ಕಾರಿನ ವೇಗ ಹೆಚ್ಚಿಸಲು ಪ್ರಯತ್ನಿಸುತ್ತಿದ್ದಂತೆ ಗುರವ್ ಅವರು ಕಾರನ್ನು ಚಲಿಸದಂತೆ ಕಾರಿನ ಬ್ಯಾನೆಟ್ ಮೇಲೆ ಹತ್ತಿ ಕುಳಿತಿದ್ದಾರೆ. ಆದರೂ ಸಹ ಚಾಲಕ ಕಾರು ನಿಲ್ಲಿಸದೇ ಬ್ಯಾನೆಟ್ ಮೇಲೆ ಕುಳಿತಿದ್ದ ಟ್ರಾಫಿಕ್ ಪೊಲೀಸರೊಂದಿಗೆ 1 ಕಿ.ಮೀ ಕಾರನ್ನು ಚಲಿಸಿಕೊಂಡು ಹೋಗಿದ್ದಾನೆ.
Mumbai: at andheri west azad nagar metro station yday a Motorist drives off with cop seated on vehicle bonnet, video goes viral Traffic cop tried to stop him as he was driving just wrong way, he sat on his bonnet to stop him as he was trying to flee https://t.co/ZvGSA4BgDd
— @PotholeWarriors ?? #PotholesFreeMumbai???? (@PotholeWarriors) October 1, 2021
ಗುರವ್ ಅವರು ಪೊಲೀಸ್ ಠಾಣೆಯಲ್ಲಿ ಕಾರಿನ ಚಾಲಕನ ವಿರುದ್ಧ ದೂರು ದಾಖಲಿಸಿದ್ದಾರೆ. ಜನರು ಕ್ಯಾಮರಾದಲ್ಲಿ ದೃಶ್ಯವನ್ನು ಸೆರೆ ಹಿಡಿದಿದ್ದು ಕಾನ್ಸ್ಟೇಬಲ್ ಕಾರ್ ಬ್ಯಾನೆಟ್ ಮೇಲೆ ಕುಳಿತಿರುವಾಗ ಕಾರಿನ ಚಾಲಕ ವಾಹನವನ್ನು ಚಲಿಸುತ್ತಿರುವುದು ಕಂಡು ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
here is Full video!#Shocking incident at Andheri DN Nagar #Mumbai a #trafficpolice constable sat on Car bonnet to stop driver for driving in wrong direction (He wanted to stop him to take pic for echallan) ?
— @PotholeWarriors ?? #PotholesFreeMumbai???? (@PotholeWarriors) October 1, 2021
ಇದನ್ನೂ ಓದಿ:
Viral News: ವಿಚ್ಛೇದನದ ಬಳಿಕ ಪಾರ್ಟಿ ಆಯೋಜಿಸಿ ಸಂಭ್ರಮಿಸಿದ 45ರ ಮಹಿಳೆ! 17 ವರ್ಷದ ದಾಂಪತ್ಯ ಜೀವನದ ಕೊನೆಯ ದಿನವದು
Published On - 9:59 am, Fri, 1 October 21