ವಿಧಾನಸೌಧದಲ್ಲಿ ಆಪರೇಷನ್ ಕ್ಯಾಟ್! ವಿಡಿಯೋ ನೋಡಿ
ಸೆಪ್ಟೆಂಬರ್ 30ರಂದು ಗುರುವಾರ ವಿಧಾನಸೌಧಕ್ಕೆ ಏಕಾಏಕಿ ಅಗ್ನಿಶಾಮಕ ವಾಹನ ದೌಡಾಯಿಸಿತು. ಅಗ್ನಿಶಾಮಕ ವಾಹನವನ್ನು ಕಂಡು ವಿಧಾನಸೌಧದ ಸಿಬ್ಬಂದಿ ಒಮ್ಮೆಗೆ ಗಾಬರಿಯಾದರು.
ಸೆಪ್ಟೆಂಬರ್ 30ರಂದು ಗುರುವಾರ ವಿಧಾನಸೌಧಕ್ಕೆ ಏಕಾಏಕಿ ಅಗ್ನಿಶಾಮಕ ವಾಹನ ದೌಡಾಯಿಸಿತು. ಅಗ್ನಿಶಾಮಕ ವಾಹನವನ್ನು ಕಂಡು ವಿಧಾನಸೌಧದ ಸಿಬ್ಬಂದಿ ಒಮ್ಮೆಗೆ ಗಾಬರಿಯಾದರು. ಅರೆ! ಇಲ್ಲಿ ಏನಾಗಿದೆ ಎಂದು ಅಗ್ನಿಶಾಮಕ ವಾಹನ ಹಾಜರಾಗಿದೆ ಎಂದು ಅಲ್ಲಿ ನೆರೆದವರಿಗೆ ತಿಳಿಯಲಿಲ್ಲ. ಆದರೆ ವಿಧಾನಸೌಧದ ಆವರಣ ಪ್ರವೇಶಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಯನ್ನೂ ಆರಂಭಿಸಿದರು. ಅಷ್ಟಕ್ಕೂ ಅಲ್ಲಿ ಆಗಿದ್ದೇನೆಂದರೆ ವಿಧಾನಸೌಧದ 2ನೇ ಮಹಡಿಯಲ್ಲಿ ಬೆಕ್ಕೊಂದು ಸಿಲುಕಿತ್ತು. ಕೆಳಗೆ ಇಳಿಯಲು ಪ್ರಯತ್ನಿಸಿ ಕೆಳಗಿಳಯಲು ಆಗದೇ ಅದು ಸಹಾಯಕ್ಕಾಗಿ ಕಾಯುತ್ತಿತ್ತು.
ಬೆಕ್ಕನ್ನು ಕೆಳಗಿಳಿಸಲು ಅಗ್ನಿಶಾಮಕ ಸಿಬ್ಬಂದಿ ಮಹಡಿಯ ಮೇಲೆ ಹತ್ತಿ ರಕ್ಷಿಸುವುದಕ್ಕೆ ಯತ್ನಿಸಿದರು. ಆದರೂ ಸಾಧ್ಯವಾಗಲಿಲ್ಲ. ಆಗ ವಿಧಾನಸೌಧದ ಸಿಬ್ಬಂದಿಯೇ ಬೆಕ್ಕಿನ ರಕ್ಷಣೆಗೆ 2ನೇ ಮಹಡಿಯ ಮೇಲೆ ಹತ್ತಿದರು. ಅವರು ಬೆಕ್ಕನ್ನು ಹಿಡಿದು ಕೆಳಗಿಳಿಸುವ ವೇಳೆ ಬೆಕ್ಕು ಅವರ ಕೈಗೆ ಕಚ್ಚಿ ಕೆಳಗೆ ಬಿದ್ದುಬಿಟ್ಟಿತು. ಅದೃಷ್ಟವಷಾತ್ ಬೆಕ್ಕಿಗೆ ಯಾವುದೇ ಅಪಾಯವೂ ಆಗಲಿಲ್ಲ. ಆನಂತರ ವಿಧಾನಸೌಧದ ಸಿಬ್ಬಂದಿ ಬೆಕ್ಕಿಗೆ ಹಾಲು ಕುಡಿಸಿದರು. ಬೆಕ್ಕು ತನ್ನ ಪಾಡಿಗೆ ತಾನು ತೆರಳಿತು.
ಇದನ್ನೂ ಓದಿ:
ವಿಧಾನಸೌಧ ಬಳಿಯ ಡಾಂಬರು ರಸ್ತೆಯಲ್ಲಿ ಭಾರಿ ರಂಧ್ರ ಪತ್ತೆ
ಬೈಕ್ ಓಡಿಸುತ್ತ ಹೊಲವನ್ನು ಉಳುಮೆ ಮಾಡಿದ ರೈತ; ಅದ್ಭುತ ಎಂದ ನೆಟ್ಟಿಗರು! ವಿಡಿಯೋ ನೋಡಿ