AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸೌಧ ಬಳಿಯ ಡಾಂಬರು ರಸ್ತೆಯಲ್ಲಿ ಭಾರಿ ರಂಧ್ರ ಪತ್ತೆ

ದಾಂಬರು ರಸ್ತೆಯಲ್ಲಿ ಕುಸಿತ ಉಂಟಾಗಿರುವುದು ವಿಧಾನಸೌಧದ ಬಳಿ ನೆರೆದವರಲ್ಲಿ ಆತಂಕ ಮೂಡಿಸಿದೆ.

ವಿಧಾನಸೌಧ ಬಳಿಯ ಡಾಂಬರು ರಸ್ತೆಯಲ್ಲಿ ಭಾರಿ ರಂಧ್ರ ಪತ್ತೆ
ದಾಂಬರು ರಸ್ತೆಯಲ್ಲಿ ಭಾರೀ ಗಾತ್ರದ ರಂದ್ರ
TV9 Web
| Edited By: |

Updated on:Sep 16, 2021 | 6:46 PM

Share

ಬೆಂಗಳೂರು: ವಿಧಾನಸೌಧದ ಗೇಟ್ ನಂಬರ್ 2ರಲ್ಲಿ ಡಾಂಬರು ಹಾಕಿದ ರಸ್ತೆಯಲ್ಲಿ ಕುಸಿತ ಉಂಟಾಗಿದೆ. ಬಸ್, ಕಾರು ಸೇರಿದಂತೆ ವಾಹನಗಳು ನಿರಂತರವಾಗಿ ಸಂಚರಿಸುವ ರಸ್ತೆಯಲ್ಲಿ ಸುಮಾರು 10 ಅಡಿ ಅಗಲ, 10 ಅಡಿ ಆಳದ ರಂಧ್ರ ಸೃಷ್ಟಿಯಾಗಿದೆ. ಭೂಮಿ ಕುಸಿಯುವಾಗಲೇ ಕಾರೊಂದು ಸ್ವಲ್ಪ ಅಂತರದಲ್ಲಿ ಭೂ ಕುಸಿತದ ಪ್ರಮಾದಿಂದ ಪಾರಾಗಿದೆ. ಡಾಂಬರು ರಸ್ತೆಯಲ್ಲಿ ಕುಸಿತ ಉಂಟಾಗಿರುವುದು ವಿಧಾನಸೌಧದ ಬಳಿ ನೆರೆದವರಲ್ಲಿ ಆತಂಕ ಮೂಡಿಸಿದೆ.

Road Hole at Vidhana Soudha

ರಸ್ತೆಯಲ್ಲಿ ರಂಧ್ರ

ಹೊಸದಾಗಿ ಡಾಂಬರೀಕರಣ ಮಾಡಿದ್ದಾರೆ. ಕಳಪೆ ಕಾಮಗಾರಿಯಿಂದ ಈ ರೀತಿ ಆಗಿದೆ ಎಂಬುದು ಮೇಲ್ನೋಟಕ್ಕೆ ಅಂದದಾಜಾಗುತ್ತದೆ. ಡಾಂಬರೀಕರಣ ಮಾಡುವಾಗ ನೆಲ ಗಟ್ಟಿ ಇದೆಯಾ ಟೊಳ್ಳು ಇದೆಯಾ ಎಂಬುದನ್ನು ಪರಿಶೀಲಿಸಬೇಕಿತ್ತು. ಶಕ್ತಿಸೌಧದ ಮುಂದೆಯೇ ಈ ರೀತಿ ಕಳಪೆ ಕಾಮಗಾರಿ ಮಾಡಿದರೆ ಇನ್ನು ರಾಜ್ಯದ ಪರಿಸ್ಥಿತಿ ಯಾವ ಮಟ್ಟಿಕ್ಕಿರಬೇಕು? ಎಂದು ಸ್ವಲ್ಪದರಲ್ಲೇ ಪ್ರಮಾದದಿಂದ ಪಾರಾದ ವ್ಯಕ್ತಿ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ:

ವಿಧಾನಸೌಧ ಎದುರು ಎತ್ತಿನ ಗಾಡಿಯಿಂದ ಕೆಳಗೆ ಬಿದ್ದ ಕಾಂಗ್ರೆಸ್​ ಶಾಸಕರು! ಏನಾಯ್ತು ಅಲ್ಲಿ?

ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ; ಕಲಾಪದಲ್ಲಿ ಕಲಹ ಕೋಲಾಹಲ

(Big Hole found in Vidhana Soudha Gate No 2 road on ongoing session)

Published On - 5:43 pm, Thu, 16 September 21