ವಿವಾಹಿತ ಕಿರುತೆರೆ ನಟಿಗೆ ‘ಆರ್​​ ಯೂ ಎ ವರ್ಜಿನ್?’ ಎಂದು ಕೇಳಿದ ಫ್ಯಾನ್​; ಎಲ್ಲರ ಎದುರು ಮಾನ ಕಳೆದ ಹೀರೋಯಿನ್

ಮಲಯಾಳಂ ಕಿರುತೆರೆ ನಟಿ ಅಥಿರಾ ಮಾಧವ್​ ಅವರು ಇತ್ತೀಚೆಗೆ ರಾಜೀವ್​ ಎಂಬುವವರನ್ನು ಮದುವೆ ಆಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ.

ವಿವಾಹಿತ ಕಿರುತೆರೆ ನಟಿಗೆ ‘ಆರ್​​ ಯೂ ಎ ವರ್ಜಿನ್?’ ಎಂದು ಕೇಳಿದ ಫ್ಯಾನ್​; ಎಲ್ಲರ ಎದುರು ಮಾನ ಕಳೆದ ಹೀರೋಯಿನ್
ಪತಿ ರಾಜೀವ್​ ಜತೆ ಅಥಿರಾ ಮಾಧವ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Sep 30, 2021 | 8:15 PM

ನಟನಾ ಲೋಕಕ್ಕೆ ಕಾಲಿಟ್ಟ ನಂತರದಲ್ಲಿ ಸೆಲೆಬ್ರಿಟಿಗಳಿಗೆ ಖಾಸಗಿತನ ಸಿಗುವುದಿಲ್ಲ. ಪಬ್ಲಿಕ್​ನಲ್ಲಿ ಕಾಣಿಸಿಕೊಂಡರೆ ಜನ ಅವರನ್ನು ಮುತ್ತಿಕೊಳ್ಳುತ್ತಾರೆ. ಸೋಶಿಯಲ್​ ಮೀಡಿಯಾದಲ್ಲಿ ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತದೆ. ಇದರ ಜತೆಗೆ ಅವರಿಗೆ ಎದುರಾಗುವ ಪ್ರಶ್ನೆಗಳು ಕೂಡ ಚಿತ್ರ ವಿಚಿತ್ರವಾಗಿರುತ್ತದೆ. ಕೆಲವೊಮ್ಮೆ ಮುಜುಗರಕ್ಕೆ ಒಳಗಾಗುವಂತ ಪ್ರಶ್ನೆಗಳು ಕೂಡ ಅಭಿಮಾನಿಗಳಿಂದ ತೂರಿ ಬರುತ್ತದೆ. ಬಹುತೇಕ ಸಂದರ್ಭದಲ್ಲಿ ಇದನ್ನು ಸೆಲೆಬ್ರಿಟಿಗಳು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಮಲಯಾಳಂನ ಕಿರುತೆರೆ ನಟಿ ಈ ರೀತಿ ಮಾಡಿಲ್ಲ. ಆರ್​ ಯೂ ಎ ವರ್ಜಿನ್​ ಎಂದು ಕೇಳಿದ ಅಭಿಮಾನಿಗೆ ನೀರಿಳಿಸಿದ್ದಾರೆ.

ಮಲಯಾಳಂ ಕಿರುತೆರೆ ನಟಿ ಅಥಿರಾ ಮಾಧವ್​ ಅವರು ಇತ್ತೀಚೆಗೆ ರಾಜೀವ್​ ಎಂಬುವವರನ್ನು ಮದುವೆ ಆಗಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿಯೂ ಹಂಚಿಕೊಂಡಿದ್ದಾರೆ. ಇದಾದ ನಂತರ ಅವರು ಇನ್​ಸ್ಟ್ರಾಗ್ರಾಮ್​ನಲ್ಲಿ ಅಭಿಮಾನಿಗಳ ಪ್ರಶ್ನೆಗೆ ಉತ್ತರ ನೀಡೋಕೆ ಮುಂದಾಗಿದ್ದರು. ಈ ಕಾರಣಕ್ಕೆ ಆಸ್ಕ್​ ಮಿ ಎನಿಥಿಂಗ್​ ಸೆಶನ್​ ಪ್ರಾರಂಭಿಸಿದ್ದರು. ಅವರ ಮದುವೆ ಜೀವನ ಹೇಗಿದೆ? ಅವರ ಪತಿ ಹೇಗಿದ್ದಾರೆ? ಸದ್ಯ ಏನು ಮಾಡುತ್ತಿದ್ದೀರಿ? ಮುಂದಿನ ಪ್ರಾಜೆಕ್ಟ್​ಗಳು ಏನು ಎಂಬಿತ್ಯಾದಿ ಪ್ರಶ್ನೆಗಳು ಅವರಿಗೆ ಕೇಳಲಾಗಿತ್ತು. ಇದಕ್ಕೆ ಅವರು ಉತ್ತರಿಸಿದ್ದರು.

ಇದೇ ವೇಳೆ ‘ಆರ್​ ಯೂ ಎ ವರ್ಜಿನ್​’ ಎನ್ನುವ ಪ್ರಶ್ನೆಯನ್ನು ಅಥಿರಾಗೆ ಅಭಿಮಾನಿ ಕೇಳಿದ್ದ. ಇದಕ್ಕೆ ಅವರ ಕಡೆಯಿಂದ ಖಡಕ್​ ಉತ್ತರ ಬಂದಿದೆ. ‘ಈ ರೀತಿಯ ಪ್ರಶ್ನೆ ಕೇಳುವುದರಿಂದ ನಿಮಗೆ ಯಾವ ರೀತಿಯ ಸಂತಸ ಸಿಗುತ್ತದೆ? ಈ ಬಗ್ಗೆ ನಿಮ್ಮ ಕುಟುಂಬವನ್ನು ಕೇಳಿ. ಈ ರೀತಿಯ ಪ್ರಶ್ನೆಗಳನ್ನು ತಡೆಯೋಕೆ ನಾನೇನು ಮಾಡಬೇಕು’ ಎಂದು ಅವರು ಪ್ರಶ್ನೆ ಮಾಡಿದ್ದಾರೆ. ಇಷ್ಟಕ್ಕೇ ನಿಂತಿಲ್ಲ. ಪ್ರಶ್ನೆ ಮಾಡಿದ ವ್ಯಕ್ತಿಯನ್ನು ಕೂಡ ಅವರು ಟ್ಯಾಗ್​ ಮಾಡಿದ್ದಾರೆ. ಈ ಮೂಲಕ ಸಾರ್ವಜನಿಕವಾಗಿ ಮಾನ ಹರಾಜು ಹಾಕಿದ್ದಾರೆ.

ಇದನ್ನೂ ಓದಿ: ಸಮಂತಾರ ಖಾಸಗಿ ಅಂಗದ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದ ನಟಿ ಶ್ರೀರೆಡ್ಡಿಗೆ ಈಗ ಅವರ ದಾಂಪತ್ಯದ್ದೇ ಚಿಂತೆ 

ಆತ್ಮಹತ್ಯೆ ಮಾಡಿಕೊಂಡ ನಟಿ ಸವಿ ಮಾದಪ್ಪ ಡೆತ್​ ನೋಟ್​ ಪತ್ತೆ; ಎಲ್ಲರಲ್ಲೂ ಕ್ಷಮೆ ಕೇಳಿದ್ದೇಕೆ?

Published On - 6:00 pm, Thu, 30 September 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ