ಸಮಂತಾರ ಖಾಸಗಿ ಅಂಗದ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದ ನಟಿ ಶ್ರೀರೆಡ್ಡಿಗೆ ಈಗ ಅವರ ದಾಂಪತ್ಯದ್ದೇ ಚಿಂತೆ

‘ನಿಮ್ಮಿಬ್ಬರ ನಡುವೆ ಏನೇ ಆಗಿರಬಹುದು. ಆದರೆ ನೀವೀಗ ಜೊತೆಯಾಗಿರಬೇಕು. ಅದೇ ನನ್ನ ಕೋರಿಕೆ’ ಎಂದು ಶ್ರೀರೆಡ್ಡಿ ಅವರು ವಿಡಿಯೋ ಮೂಲಕ ಸಮಂತಾ ಮತ್ತು ನಾಗ ಚೈತನ್ಯಗೆ ಮನವಿ ಮಾಡಿಕೊಂಡಿದ್ದಾರೆ.

ಸಮಂತಾರ ಖಾಸಗಿ ಅಂಗದ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದ ನಟಿ ಶ್ರೀರೆಡ್ಡಿಗೆ ಈಗ ಅವರ ದಾಂಪತ್ಯದ್ದೇ ಚಿಂತೆ
ನಾಗ ಚೈತನ್ಯ, ಸಮಂತಾ ಅಕ್ಕಿನೇನಿ, ಶ್ರೀರೆಡ್ಡಿ
Follow us
TV9 Web
| Updated By: ಮದನ್​ ಕುಮಾರ್​

Updated on: Sep 30, 2021 | 3:21 PM

ನಾಗ ಚೈತನ್ಯ ಮತ್ತು ಸಮಂತಾ ಅಕ್ಕಿನೇನಿ ಕುಟುಂಬದಲ್ಲಿ ಏನು ನಡೆಯುತ್ತಿದೆ ಎಂಬ ಬಗ್ಗೆ ದೊಡ್ಡ ಚರ್ಚೆ ಶುರುವಾಗಿದೆ. ಅವರಿಬ್ಬರು ವಿಚ್ಛೇದನ ಪಡೆಯುತ್ತಾರೆ ಎಂಬ ಗುಸುಗುಸು ಕೇಳಿಬರುತ್ತಿದೆ. ಈ ಬಗ್ಗೆ ಫ್ಯಾನ್ಸ್​ ಹಲವು ಬಗೆಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ಆದರೆ ಈ ಕುರಿತು ಸೆಲೆಬ್ರಿಟಿಗಳು ಮಾತನಾಡಿರುವುದು ವಿರಳ. ಈಗ ವಿವಾದಾತ್ಮಕ ನಟಿ ಶ್ರೀರೆಡ್ಡಿ ಅವರು ತಮ್ಮ ಸೋಶಿಯಲ್​ ಮೀಡಿಯಾ ಮೂಲಕ ಈ ಬಗ್ಗೆ ಮಾತನಾಡಿದ್ದಾರೆ. ಸಮಂತಾ ಮತ್ತು ನಾಗ ಚೈತನ್ಯ ದಾಂಪತ್ಯದ ಬಗ್ಗೆ ಅವರು ಎಲ್ಲಿಲ್ಲದ ಕಾಳಜಿ ತೋರಿಸಿದ್ದಾರೆ.

‘ನೀವಿಬ್ಬರೂ ಒಂದಾಗಿ ಇರಬೇಕು ಅಂತ ನಾವೆಲ್ಲರೂ ಬಯಸುತ್ತೇವೆ. ನೀವು ಎಲ್ಲರಿಗೂ ಸ್ಫೂರ್ತಿ ತುಂಬುವಂತಹ ಜೋಡಿ ಆಗಿರಬೇಕು. ನಿಮ್ಮನ್ನು ನೋಡಿದರೆ ಅನೇಕರಿಗೆ ಸ್ಫೂರ್ತಿ ಬರುತ್ತದೆ. ನಿಮ್ಮಿಬ್ಬರ ನಡುವೆ ಏನೇ ಆಗಿರಬಹುದು. ಆದರೆ ನೀವೀಗ ಜೊತೆಯಾಗಿರಬೇಕು. ಅದೇ ನನ್ನ ಕೋರಿಕೆ’ ಎಂದು ಶ್ರೀರೆಡ್ಡಿ ಅವರು ವಿಡಿಯೋ ಮೂಲಕ ಮನವಿ ಮಾಡಿಕೊಂಡಿದ್ದಾರೆ.

ಅಲ್ಲದೇ, ನಾಗ ಚೈತನ್ಯ ಮತ್ತು ಸಮಂತಾರ ಮದುವೆಯ ವಿಡಿಯೋಗಳನ್ನು ಶೇರ್​ ಮಾಡಿಕೊಂಡಿರುವ ಶ್ರೀರೆಡ್ಡಿ, ‘ಎಂದೆಂದಿಗೂ ಸುಂದರ ಜೋಡಿ. ಅತ್ಯುತ್ತಮ ನೆನಪುಗಳು’ ಎಂದು ಅದಕ್ಕೆ ಕ್ಯಾಪ್ಷನ್​ ನೀಡಿದ್ದಾರೆ. ಸದ್ಯ ಅವರು ಮಾಡಿರುವ ಪೋಸ್ಟ್​ ವೈರಲ್​ ಆಗುತ್ತಿದೆ. ಅಚ್ಚರಿ ಎಂದರೆ ಇದೇ ಶ್ರೀರೆಡ್ಡಿ ಈ ಹಿಂದೆ ಸಮಂತಾ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು.

ಸಮಂತಾ ಮತ್ತು ತ್ರಿಶಾ ಕೃಷ್ಣನ್​ ಅವರ ದೇಹದ ಅಂಗಗಳನ್ನು ಬೇರೆ ಬೇರೆ ಹಣ್ಣುಗಳಿಗೆ ಹೋಲಿಸಿ ಶ್ರೀರೆಡ್ಡಿ ಪೋಸ್ಟ್​ ಮಾಡಿದ್ದರು. ಅದು ಸಮಂತಾ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿತ್ತು. ನಂತರ ಶ್ರೀರೆಡ್ಡಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಆದರೆ ಅದಕ್ಕೆಲ್ಲ ಬಗ್ಗುವಂತಹ ವ್ಯಕ್ತಿತ್ವ ಅವರದ್ದಲ್ಲ. ಟಾಲಿವುಡ್​ನ ಅನೇಕರ ಮೇಲೆ ಅವರು ಮೀಟೂ ಆರೋಪ ಕೂಡ ಹೊರಿಸಿದ್ದರು. ತಮಗೆ ಆದ ಅನ್ಯಾಯವನ್ನು ಖಂಡಿಸಿ, ಬೆತ್ತಲಾಗಿ ಪ್ರತಿಭಟನೆ ಮಾಡಲು ಕೂಡ ಶ್ರೀರೆಡ್ಡಿ ಮುಂದಾಗಿದ್ದರು. ಆ ಬಳಿಕವೇ ಅವರಿಗೆ ಹೆಚ್ಚು ಪ್ರಚಾರ ಸಿಗಲು ಪ್ರಾರಂಭವಾಯಿತು.

ಇದನ್ನೂ ಓದಿ:

10 ಕೋಟಿ ರೂ. ಖರ್ಚಿನಲ್ಲಿ ಆದ ಮದುವೆಯ ವ್ಯಾಲಿಡಿಟಿ 4 ವರ್ಷ ಮಾತ್ರವೇ? ಅ.6ಕ್ಕೆ ಸಮಂತಾ-ನಾಗ ಚೈತನ್ಯ ಭವಿಷ್ಯ ನಿರ್ಧಾರ

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ