‘ನನ್ನ ಒಳ ಉಡುಪು ತೋರಿಸುವಂತೆ ನಿರ್ದೇಶಕರು ಹೇಳಿದ್ದರು’; ಇದು ಪ್ರಿಯಾಂಕಾ ಚೋಪ್ರಾ ಬದುಕಿನ ಕರಾಳ ಅನುಭವ

ಭಾರತದ ಚಿತ್ರರಂಗದಲ್ಲಿ ಸಾಂಗ್​ಗಳಲ್ಲಿ ನಟಿಯ ಮೈಮಾಟ ತೋರಿಸೋಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಸಣ್ಣ ಬಟ್ಟೆ ಹಾಕಿಸಿ ಡ್ಯಾನ್ಸ್ ಮಾಡಿಸಲಾಗುತ್ತದೆ. ಇದು ಭಾರತದ ಬಹುತೇಕ ಚಿತ್ರರಂಗದಲ್ಲಿ ನಡೆದೇ ಇದೆ.

‘ನನ್ನ ಒಳ ಉಡುಪು ತೋರಿಸುವಂತೆ ನಿರ್ದೇಶಕರು ಹೇಳಿದ್ದರು’; ಇದು ಪ್ರಿಯಾಂಕಾ ಚೋಪ್ರಾ ಬದುಕಿನ ಕರಾಳ ಅನುಭವ
ಪ್ರಿಯಾಂಕಾ
TV9kannada Web Team

| Edited By: Rajesh Duggumane

Sep 30, 2021 | 3:56 PM

ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ ಅವರು ಈಗ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಅಮೆರಿಕದ ಪಾಪ್​ ಗಾಯಕ ನಿಕ್​ ಜೋನಸ್​ ಮದುವೆ ಆದ ನಂತರದಲ್ಲಿ ಅವರು ಅಮೆರಿಕದಲ್ಲಿ ಸೆಟಲ್​ ಆಗಿದ್ದಾರೆ. ಪ್ರಿಯಾಂಕಾ ಬಾಲಿವುಡ್​ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಸಾಕಷ್ಟು ಕಷ್ಟಗಳನ್ನು ಎದುರಿಸಿ ಅವರು ಹಿಂದಿ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದರು. ಈ ಬಗ್ಗೆ ಪ್ರಿಯಾಂಕಾ ಚೋಪ್ರಾ ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ. ಅದರಲ್ಲಿ ಅವರು ಬಾಲಿವುಡ್​ ನಿರ್ದೇಶಕರು ಹೇಳಿದ್ದ ಅಸಹ್ಯದ ನುಡಿಗಳು ಕೂಡ ಒಂದು.

ಭಾರತದ ಚಿತ್ರರಂಗದಲ್ಲಿ ಸಾಂಗ್​ಗಳಲ್ಲಿ ನಟಿಯ ಮೈಮಾಟ ತೋರಿಸೋಕೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಸಣ್ಣ ಬಟ್ಟೆ ಹಾಕಿಸಿ ಡ್ಯಾನ್ಸ್ ಮಾಡಿಸಲಾಗುತ್ತದೆ. ಇದು ಭಾರತದ ಬಹುತೇಕ ಚಿತ್ರರಂಗದಲ್ಲಿ ನಡೆದೇ ಇದೆ. ಅದೇ ರೀತಿ ಪ್ರಿಯಾಂಕಾಗೆ ಡ್ಯಾನ್ಸ್​ ಶೂಟಿಂಗ್​ ವೇಳೆ ಒಳ ಉಡುಪು ತೋರಿಸುವಂತೆ ನಿರ್ದೇಶಕರು ಸೂಚಿಸಿದ್ದರಂತೆ.

‘ಸಾಂಗ್​ ಶೂಟಿಂಗ್​ಗೂ ಮೊದಲು ನಿರ್ದೇಶಕರು ನನ್ನನ್ನು ಕರೆದರು. ನನ್ನ ಬಟ್ಟೆ ವಿನ್ಯಾಸಕಾರರಿ​ಗೆ ಕರೆ ಮಾಡುವಂತೆ ಅವರು ಸೂಚಿಸಿದ್ದರು. ನಾನು ಕಾಲ್​ ಮಾಡುತ್ತಿದ್ದಂತೆ ನಿರ್ದೇಶಕರು ಫೋನ್​ ಕಸಿದುಕೊಂಡು ಮಾತನಾಡಿದರು. ‘ಏನೇ ಆಗಲಿ, ಅವರ ಒಳ ಉಡುಪು ಕಾಣಬೇಕು. ಇಲ್ಲದಿದ್ದರೆ ಸಿನಿಮಾ ನೋಡೋಕೆ ಜನ ಯಾಕೆ ಬರುತ್ತಾರೆ’ ಎಂಬ ಮಾತು ನಿರ್ದೇಶಕರ ಬಾಯಿ ಇಂದ ಬಂದಿತ್ತು. ನನಗೆ ಇದು ನಿಜಕ್ಕೂ ಶಾಕಿಂಗ್​ ಆಗಿತ್ತು’ ಎಂದಿದ್ದಾರೆ ಪ್ರಿಯಾಂಕಾ.

ಇದಾದ ನಂತರ ಮತ್ತೆ ಬಟ್ಟೆ ವಿನ್ಯಾಸಕಾರರಿಗೆ ಕರೆ ಮಾಡಿ ಪ್ರಿಯಾಂಕಾ ಚೋಪ್ರಾ ಮಾತನಾಡಿದ್ದರು. ‘ಜನರು ಸಿನಿಮಾದಲ್ಲಿ ನನ್ನನ್ನು ನೋಡೋಕೆ ಬರೋದು. ನನ್ನ ಒಳ ಉಡುಪು ನೋಡೋದಕ್ಕೆ ಅಲ್ಲ. ಸರಿಯಾಗಿ ಬಟ್ಟೆ ವಿನ್ಯಾಸ ಮಾಡಿ. ಯಾವುದೇ ಕಾರಣಕ್ಕೂ ಒಳಉಡುಪು ಕಾಣಬಾರದು’ ಎಂದು ತಾಕೀತು ಮಾಡಿದ್ದರು ಪ್ರಿಯಾಂಕಾ. ಆದರೆ, ಅವರಿಗೆ ಆ ಕ್ಷಣದಲ್ಲಿ ನಿರ್ದೇಶಕರಿಗೆ ಕ್ಲಾಸ್​ ತೆಗೆದುಕೊಳ್ಳೋಕೆ ಸಾಧ್ಯವಾಗಿಲ್ಲ. ಈ ಬಗ್ಗೆ ಅವರಿಗೆ ಈಗಲೂ ಬೇಸರವಿದೆಯಂತೆ. ಅದು ಯಾವ ನಿರ್ದೇಶಕರು ಎನ್ನುವ ಗುಟ್ಟನ್ನು ಪ್ರಿಯಾಂಕಾ ಬಿಟ್ಟುಕೊಟ್ಟಿಲ್ಲ.

ಇತ್ತೀಚೆಗೆ ನಿಕ್​ ಜೋನಸ್​ ಬರ್ತ್​ಡೇ ಆಚರಣೆ ಮಾಡಿಕೊಂಡಿದ್ದರು. ಪ್ರಿಯಾಂಕಾ ಅವರು ನಿಕ್​ಗೆ ಸರ್​ಪ್ರೈಸ್​ ನೀಡಿದ್ದರು. ಈ ಫೋಟೋಗಳನ್ನು ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಆತ್ಮಹತ್ಯೆಗೂ ಮುನ್ನ ಅಪ್ಪನಿಂದ 1 ಲಕ್ಷ ರೂ. ಪಡೆದಿದ್ದ ನಟಿ ಸವಿ ಮಾದಪ್ಪ; ಸಾವಿನ ಸುತ್ತ ಹೆಚ್ಚಿತು ಅನುಮಾನ

ಪ್ರಿಯಾಂಕಾ ಚೋಪ್ರಾ ಪತಿ ನಿಕ್​ ಜೋನಸ್​ಗೆ 29ನೇ ಜನ್ಮದಿನ; ಸರ್ಪ್ರೈಸ್​ ನೀಡಿದ ಪತ್ನಿಗೆ ನಿಕ್ ಧನ್ಯವಾದ​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada