ಆಲಿಬಾಗ್ ಬಂಗಲೆಗೆ ತೆರಳಲು ದೀಪಿಕಾ- ರಣವೀರ್ ಕಾತರ?; ₹ 22 ಕೋಟಿ ನೀಡಿ ಖರೀದಿಸಿದ ಬಂಗಲೆಯ ಮರುವಿನ್ಯಾಸ ಶುರು
ದೀಪಿಕಾ ಹಾಗೂ ರಣವೀರ್ ಬರೋಬ್ಬರಿ ₹ 22 ಕೋಟಿ ನೀಡಿ ಖರೀದಿಸಿದ ಹೊಸ ಮನೆಯ ಮರು ವಿನ್ಯಾಸ ಕಾರ್ಯಗಳು ಪ್ರಾರಂಭವಾಗಿವೆಯೇ? ಹೌದು ಎನ್ನುತ್ತಿವೆ ಈ ಚಿತ್ರ.
ಬಾಲಿವುಡ್ನ ಖ್ಯಾತ ತಾರಾ ಜೋಡಿಯಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಇತ್ತೀಚೆಗೆ ಹೊಸ ಬಂಗಲೆಯೊಂದನ್ನು ಖರೀದಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು. ಮುಂಬೈನ ಸಮೀಪದ ಆಲಿಬಾಗ್ನಲ್ಲಿ ₹ 22 ಕೋಟಿ ನೀಡಿ ಹೊಸ ಬಂಗಲೆಯನ್ನು ಈ ಜೋಡಿ ಖರೀದಿಸಿತ್ತು. ಇದೀಗ ಆ ಮನೆಯ ಮರು ವಿನ್ಯಾಸ ಕಾರ್ಯಗಳು ಪ್ರಾರಂಭವಾಗಿದೆಯೇ ಎಂಬ ಪ್ರಶ್ನೆಯೊಂದನ್ನು ಹುಟ್ಟುಹಾಕಿದೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಫೋಟೋ. ಹಾಗಂತ ಈ ಫೋಟೋ ನಕಲಿಯಲ್ಲ. ಖ್ಯಾತ ವಿನ್ಯಾಸಕಾರ್ತಿ ವಿನಿತಾ ಚೈತನ್ಯ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಿಂದ ಫೋಟೋವನ್ನು ಹಂಚಿಕೊಂಡಿದ್ದಾರೆ.
ವಿನಿತಾ ಚೈತನ್ಯ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ದೀಪಿಕಾ ರಣವೀರ್ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅದಕ್ಕೆ ಅವರು, ‘ನನ್ನ ಕಾರಿನಲ್ಲಿರುವವರು ಯಾರು? ಆಲಿಬಾಗ್ಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಅವರು ಬಂಗಲೆಯ ವಿನ್ಯಾಸ ಕಾರ್ಯ ಮಾಡುತ್ತಿರುವುದನ್ನು ಪರೋಕ್ಷವಾಗಿ ತಿಳಿಸಿದ್ದಾರೆ. ಈ ಕಪ್ಪು ಬಿಳುಪಿನ ಚಿತ್ರವು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿನಿತಾ ಚೈತನ್ಯ ಹಂಚಿಕೊಂಡ ಚಿತ್ರ:
View this post on Instagram
ಮನಿಕಂಟ್ರೋಲ್ ವರದಿ ಮಾಡಿರುವ ಪ್ರಕಾರ, ಬಂಗಲೆಯು ಸುಮಾರು 2.25 ಎಕರೆ ವಿಸ್ತೀರ್ಣದಲ್ಲಿದೆ. ಇದು ಎರಡು ಅಂತಸ್ತಿನ 5 BHK ಮನೆಯಾಗಿದೆ. ಖ್ಯಾತ ಕಿಹಿಮ್ ಬೀಚ್ಗೆ ಕೇವಲ ಹತ್ತು ನಿಮಿಷ ದೂರದಲ್ಲಿ ಈ ಮನೆಯಿದೆ. ಈ ಏರಿಯಾವು ಕೋಟ್ಯಾಧಿಪತಿಗಳ ಮನೆಗಾಗಿ ಪ್ರಸಿದ್ಧಿ ಪಡೆದಿದ್ದು, ಖ್ಯಾತ ಬಾಲಿವುಡ್ ತಾರೆಯರು, ಉದ್ಯಮಿಗಳು ಇಲ್ಲಿ ಮನೆಯನ್ನು ಹೊಂದಿದ್ದಾರೆ. ಮುಂಬೈಗೆ ಈ ಸ್ಥಳ ಸುಮಾರು 45 ನಿಮಿಷಗಳ ದೂರದಲ್ಲಿದೆ. ಈ ಮನೆಯ ರಿಜಿಸ್ಟ್ರೇಷನ್ಗಾಗಿ ಈ ತಾರಾ ಜೋಡಿ ಸುಮಾರು ₹ 1.32 ಕೋಟಿ ಪಾವತಿಸಿದೆ ಎನ್ನಲಾಗಿದೆ.
ರಣವೀರ್ ಹಾಗೂ ದೀಪಿಕಾ ಈಗಾಗಲೇ ಮುಂಬೈಯಲ್ಲಿ 4 ಬಿಎಚ್ಕೆ ಫ್ಲಾಟನ್ನು ಹೊಂದಿದ್ದಾರೆ. ಅದು ಪ್ರಭಾದೇವಿ ಏರಿಯಾದಲ್ಲಿದೆ. ಕಳೆದ ತಿಂಗಳು ದೀಪಿಕಾ ಬೆಂಗಳೂರಿನಲ್ಲಿ ಸರ್ವೀಸ್ ಅಪಾರ್ಟ್ಮೆಂಟ್ ಖರೀದಿಸಿದ್ದರು. ಈಗ ಖರೀದಿಸಲಾಗಿರುವ ಹೊಸ ಮನೆಯ ಸುತ್ತಮುತ್ತ ತೆಂಗಿನ ತೋಟಗಳೂ ಇವೆ ಎನ್ನುತ್ತವೆ ವರದಿಗಳು.
ಚಿತ್ರಗಳ ವಿಷಯಕ್ಕೆ ಬಂದರೆ ದೀಪಿಕಾ- ರಣವೀರ್ ಜೊತೆಯಾಗಿ ನಟಿಸಿರುವ ‘83’ ಚಿತ್ರದಲ್ಲಿ ಈರ್ವರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 1983ರಲ್ಲಿ ಭಾರತ ಪುರುಷರ ಕ್ರಿಕೆಟ್ ತಂಡ ವಿಶ್ವಕಪ್ ಗೆದ್ದ ಕತೆಯನ್ನು ಚಿತ್ರವು ತೆರೆಯ ಮೇಲೆ ತರಲಿದ್ದು, ರಣವೀರ್ ಕಪಿಲ್ ದೇವ್ ಪಾತ್ರದಲ್ಲಿ, ದೀಪಿಕಾ ಅವರ ಪತ್ನಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರ ಬಿಡುಗಡೆಯಾಗಲಿದೆ.
ಇದನ್ನೂ ಓದಿ:
ಕೆಬಿಸಿಯಲ್ಲಿ 1 ಕೋಟಿ ಮೊತ್ತದ ಈ ಪ್ರಶ್ನೆಗೆ ಉತ್ತರ ತಿಳಿಯದೇ ಕ್ವಿಟ್ ಮಾಡಿದ ಸ್ಪರ್ಧಿ; ನೀವು ಉತ್ತರಿಸಬಲ್ಲಿರಾ?
ಅಪ್ಪನನ್ನೇ ಮನೆ ಬಾಗಿಲ ಮುಂದೆ ಗಂಟೆಗಟ್ಟಲೆ ಕಾಯಿಸಿದ್ರಾ ನಟ ವಿಜಯ್? ತಂದೆಯಿಂದಲೇ ಸಿಕ್ತು ಸ್ಪಷ್ಟನೆ
ಸ್ಯಾಂಡಲ್ವುಡ್ ನಟಿ ಸವಿ ಮಾದಪ್ಪ ಆತ್ಮಹತ್ಯೆ; ಡೆತ್ನೋಟ್ ಬರೆದಿಟ್ಟು ನೇಣಿಗೆ ಶರಣು
Published On - 2:25 pm, Thu, 30 September 21