Gangubai Kathiawadi: ಬೆಳ್ಳಿತೆರೆಯ ಮೇಲೆ ಮಿಂಚಲು ‘ಗಂಗೂಬಾಯಿ ಕಾಠಿಯಾವಾಡಿ’ ರೆಡಿ; ಯಾವಾಗ ಬಿಡುಗಡೆ?

Alia Bhatt: ಬಾಲಿವುಡ್​ನ ಖ್ಯಾತ ನಟಿ ಆಲಿಯಾ ಭಟ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿರುವ ಬಹುನಿರೀಕ್ಷಿತ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

Gangubai Kathiawadi: ಬೆಳ್ಳಿತೆರೆಯ ಮೇಲೆ ಮಿಂಚಲು ‘ಗಂಗೂಬಾಯಿ ಕಾಠಿಯಾವಾಡಿ’ ರೆಡಿ; ಯಾವಾಗ ಬಿಡುಗಡೆ?
‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್
Follow us
TV9 Web
| Updated By: shivaprasad.hs

Updated on: Sep 30, 2021 | 4:39 PM

ಮಹಾರಾಷ್ಟ್ರದಲ್ಲಿ ಮುಚ್ಚಿದ್ದ ಚಿತ್ರಮಂದಿರಗಳನ್ನು ತೆರೆಯಲು ಸರ್ಕಾರ ಅನುಮತಿಸಿರುವ ಬೆನ್ನಲ್ಲಿಯೇ ಬಿಗ್ ಬಜೆಟ್ ಚಿತ್ರಗಳ ಬಿಡುಗಡೆಯ ದಿನಾಂಕಗಳು ಸಾಲಾಗಿ ಘೋಷಣೆಯಾಗುತ್ತಿವೆ. ಬಾಲಿವುಡ್​ ಚಿತ್ರಗಳಿಗೆ ಮಹಾರಾಷ್ಟ್ರ ಬಹುದೊಡ್ಡ ಮಾರುಕಟ್ಟೆಯಾಗಿದ್ದು, ಅಲ್ಲಿ ಚಿತ್ರಮಂದಿರಗಳ ಲಭ್ಯತೆ ಇಲ್ಲದೇ ಇದ್ದರೂ ಬಿಡುಗಡೆಯಾಗಿದ್ದ ‘ಬೆಲ್​ಬಾಟಂ’, ‘ತಲೈವಿ’ ಮೊದಲಾದ ಚಿತ್ರಗಳು ಸೋಲು ಕಂಡಿದ್ದವು. ಆದ್ದರಿಂದಲೇ ಪ್ರಸ್ತುತ ದೊಡ್ಡ ಚಿತ್ರಗಳು ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ಲಭ್ಯವಾಗುವ ತನಕ ಬಿಡುಗಡೆ ಮುಂದೂಡಿದ್ದವು. ಇದೀಗ ಮಹಾರಾಷ್ಟ್ರದಲ್ಲಿ ಚಿತ್ರಮಂದಿರಗಳು ತೆರೆದಿದ್ದು, ಚಿತ್ರ ಬಿಡುಗಡೆಯನ್ನು ಘೋಷಿಸಿದ ಪಟ್ಟಿಗೆ ಖ್ಯಾತ ನಟಿ ಆಲಿಯಾ ಭಟ್  ಅಭಿನಯದ ‘ಗಂಗೂಬಾಯಿ ಕಾಠಿಯಾವಾಡಿ’ ಸೇರಿದೆ.

‘ಪದ್ಮಾವತ್’, ‘ಬಾಜಿರಾವ್ ಮಸ್ತಾನಿ’ ಮೊದಲಾದ ಹಿಟ್ ಚಿತ್ರಗಳ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಆಕ್ಷನ್ ಕಟ್ ಹೇಳಿರುವ ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿ ಆಲಿಯಾ ಭಟ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಚಿತ್ರದ ಬಿಡುಗಡೆಯ ನೂತನ ದಿನಾಂಕ ಘೋಷಣೆಯಾಗಿದ್ದು, ಹೊಸ ವರ್ಷದ ಸಮಯದಲ್ಲಿ ತೆರೆಕಾಣಲಿದೆ. ಜನವರಿ 6ರಂದು ಈ ಚಿತ್ರವು ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ. ಈ ಕುರಿತು ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿರುವ ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

ಕಮಾಟಿಪುರದ ಡಾನ್​ ಆಗಿ ಮೆರೆದಿದ್ದ ಗಂಗೂಬಾಯಿ ಅವರ ಜೀವನದ ಕಥೆ ಇಟ್ಟುಕೊಂಡು ಚಿತ್ರವನ್ನು ತಯಾರಿಸಲಾಗಿದೆ. ಈಗಾಗಲೇ ಚಿತ್ರವು ತನ್ನ ಟೀಸರ್ ಮುಖಾಂತರ ವೀಕ್ಷಕರ ಮನ ಗೆದ್ದಿದ್ದು, ಬೆಳ್ಳಿ ತೆರೆಯಲ್ಲಿ ಚಿತ್ರವನ್ನು ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿಯವರ ಈ ಹಿಂದಿನ ಚಿತ್ರಗಳಂತೆಯೇ ಈ ಚಿತ್ರ ಕೂಡ ಅದ್ದೂರಿಯಾಗಿ ಮೂಡಿಬಂದಿದೆ.

ಚಿತ್ರದ ಟ್ರೈಲರ್ ಇಲ್ಲಿದೆ:

ಅಜಯ್ ದೇವಗನ್ ನಟನೆಯ ಮತ್ತೊಂದು ಬಹು ನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆಯ ದಿನಾಂಕವನ್ನೂ ಇಂದು ಘೋಷಿಸಲಾಗಿದೆ. ಆ ಚಿತ್ರವು 2022ರ ಜೂನ್ 3ರಂದು ಬಿಡುಗಡೆಯಾಗಲಿದೆ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:

ಸಮಂತಾರ ಖಾಸಗಿ ಅಂಗದ ಬಗ್ಗೆ ಕೆಟ್ಟದಾಗಿ ಕಮೆಂಟ್​ ಮಾಡಿದ್ದ ನಟಿ ಶ್ರೀರೆಡ್ಡಿಗೆ ಈಗ ಅವರ ದಾಂಪತ್ಯದ್ದೇ ಚಿಂತೆ

Maidaan: ಅಜಯ್ ದೇವಗನ್ ನಟನೆಯ ಬಹುನಿರೀಕ್ಷಿತ ‘ಮೈದಾನ್’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆ

ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಮೊದಲು ಭಾವುಕ ಪೋಸ್ಟ್​ ಹಾಕಿದ್ದ ಸ್ಯಾಂಡಲ್​ವುಡ್​ ನಟಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ