AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕರೀನಾಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಸಲಹೆ ನೀಡುವುದಿಲ್ಲ’; ಅದೇ ದಾಂಪತ್ಯದ ಯಶಸ್ಸಿನ ಗುಟ್ಟು ಎಂದ ಸೈಫ್!

Saif Ali Khan and Kareena Kapoor: ಬಾಲಿವುಡ್ ನಟ ಸೈಫ್ ಅಲಿ ಖಾನ್ ಪತ್ನಿ ಕರೀನಾ ಕಪೂರ್​ಗೆ ಸಾಮಾಜಿಕ ಜಾಲತಾಣದ ಕುರಿತು ತಾನು ಯಾವುದೇ ಸಲಹೆ ನೀಡುವುದಿಲ್ಲ ಎಂದಿದ್ದಾರೆ. ಅದು ಯಶಸ್ವೀ ದಾಂಪತ್ಯದ ಗುಟ್ಟು ಎಂದೂ ಹೇಳಿ ಎಲ್ಲರನ್ನು ಅವರು ಅಚ್ಚರಿಗೆ ತಳ್ಳಿದ್ದಾರೆ.

‘ಕರೀನಾಗೆ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಸಲಹೆ ನೀಡುವುದಿಲ್ಲ’; ಅದೇ ದಾಂಪತ್ಯದ ಯಶಸ್ಸಿನ ಗುಟ್ಟು ಎಂದ ಸೈಫ್!
ಸೈಫ್ ಅಲಿ ಖಾನ್, ಕರೀನಾ ಕಪೂರ್
TV9 Web
| Updated By: shivaprasad.hs|

Updated on:Oct 01, 2021 | 10:16 AM

Share

​ಬಾಲಿವುಡ್​ನ ತಾರಾ ಜೋಡಿಗಳಲ್ಲಿ ಒಂದಾದ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಜೋಡಿಯು ಸದಾ ಒಂದಿಲ್ಲೊಂದು ಕಾರಣಗಳಿಂದ ಸುದ್ದಿಯಲ್ಲಿರುತ್ತಾರೆ. ಪ್ರಸ್ತುತ ಸೈಫ್ ಅಲಿ ಖಾನ್ ತಮ್ಮ ಯಶಸ್ವಿ ದಾಂಪತ್ಯದ ಗುಟ್ಟನ್ನು ರಟ್ಟು ಮಾಡಿದ್ದು, ಅದನ್ನು ಕೇಳಿ ಎಲ್ಲರೂ ಮನದುಂಬಿ ನಕ್ಕಿದ್ದಾರೆ. ದಾಂಪತ್ಯದ ಯಶಸ್ಸಿನ ಗುಟ್ಟನ್ನು ಕೇಳಿ ನಗುವಂಥದ್ದು ಏನಿದೆ ಎಂದು ಯೋಚಿಸುತ್ತಿದ್ದೀರಾ? ಅದಕ್ಕೆ ಕಾರಣ, ಸೈಫ್ ಹೇಳಿದ ಮಾತು! ಕರೀನಬಾ ಕಪೂರ್​ಗೆ ಸಾಮಾಜಿಕ ಜಾಲತಾಣದ ಕುರಿತಂತೆ ಯಾವುದೇ ಸಲಹೆಯನ್ನು ತಾವು ನೀಡಲು ಹೋಗುವುದಿಲ್ಲ. ಅದೇ ತಮ್ಮ ದಾಂಪತ್ಯದ ಯಶಸ್ಸಿನ ಗುಟ್ಟು ಎಂದು ಸೈಫ್ ತಮಾಷೆ ಮಾಡಿದ್ದಾರೆ.

ಸೈಫ್ ಹಾಗೆ ಹೇಳಲು ಕಾರಣವನ್ನೂ ಬಹಿರಂಗಪಡಿಸಿದ್ದಾರೆ. ತಾನು ಕರೀನಾಗೆ ಏನು ಮಾಡಬೇಕು, ಏನು ಮಾಡಬೇಡ ಎಂಬುದನ್ನು ಹೇಳಲು ಹೋಗುವುದಿಲ್ಲ; ಸಾಮಾಜಿಕ ಜಾಲತಾಣದ ವಿಷಯದಲ್ಲೂ ಹಾಗೆಯೇ ಎಂದು ಅವರು ನುಡಿದಿದ್ದಾರೆ. ಕರೀನಾ ಕಪೂರ್ ಕಳೆದ ವರ್ಷ ಇನ್ಸ್ಟಾಗ್ರಾಂ ಪ್ರವೇಶಿಸಿದ್ದರು. ಅದರಲ್ಲಿ ಅವರು ತಮ್ಮ ವೈಯಕ್ತಿಕ ಜೀವನದ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೆಚ್ಚಾಗಿ ಸೈಫ್, ತೈಮೂರ್ ಹಾಗೂ ಜೇಹ್ ಅವರ ಚಿತ್ರಗಳಿರುತ್ತವೆ. ಈಗ ಅದರ ಕುರಿತಂತೆ ಸೈಫ್ ಮಾತನಾಡಿದ್ದಾರೆ.

ಕರೀನಾ ಇನ್ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಾಗಿರುವುದರಿಂದ ಅದರಿಂದ ಅವರಿಗೆ ಬ್ರೇಕ್ ತೆಗೆದುಕೊಳ್ಳಲು ಹೇಳಿದ್ದೀರಾ ಎಂದು ಸೈಫ್ ಅವರಲ್ಲಿ ಪ್ರಶ್ನಿಸಲಾಗಿತ್ತು. ಆಗ ಸೈಫ್ ಮಾತನಾಡುತ್ತಾ, ದಾಂಪತ್ಯದಲ್ಲಿ ಮತ್ತೊಬ್ಬರಿಗೆ ಅದು ಮಾಡು, ಇದು ಮಾಡಬೇಡ ಎನ್ನುವುದು ಒಳ್ಳೆಯದಲ್ಲ ಎಂದಿದ್ದಾರೆ. ಆರ್​ಜೆ ಸಿದ್ಧಾರ್ಥ್ ಕಣ್ಣನ್ ಅವರೊಂದಿಗೆ ಮಾತನಾಡುತ್ತಾ ಸೈಫ್, ‘‘ಇಲ್ಲ ಇಲ್ಲ. ದಾಂಪತ್ಯದಲ್ಲಿ ಮತ್ತೊಬ್ಬರಿಗೆ ಏನು ಇಷ್ಟವೋ ಅದನ್ನು ಮಾಡಲು ಸ್ವತಂತ್ರವಿರಬೇಕು. ಅದು ಒಳ್ಳೆಯ ಬೆಳವಣಿಗೆ. ಕರೀನಾ ಮಲ್ಟಿ ಟಾಸ್ಕರ್. ಆದ್ದರಿಂದಲೇ ಎಲ್ಲವನ್ನೂ ಆಕೆ ಒಟ್ಟಿಗೇ ನಿಭಾಯಿಸುತ್ತಾಳೆ. ಜಾಲತಾಣಗಳಲ್ಲಿ ಸಕ್ರಿಯರಾಗಿದ್ದಾರೆ ಎಂದ ಮಾತ್ರಕ್ಕೆ ಅದನ್ನೇ ಮಾಡುತ್ತಿರುತ್ತಾರೆ ಎಂದು ಯೋಚಿಸುವುದು ತಪ್ಪು’’ ಎಂದು ಸೈಫ್ ನುಡಿದಿದ್ದಾರೆ.

ಇದೇ ವೇಳೆ ತಮ್ಮ ಕುರಿತೂ ಸೈಫ್ ಮಾತನಾಡಿದ್ದಾರೆ. ‘‘ವಾಸ್ತವವಾಗಿ ನನಗೆ ಮೊಬೈಲ್ ಹೆಚ್ಚಾಗಿ ಬಳಸಿ ತಲೆ ನೋವು ಬರುತ್ತಿತ್ತು. ಫೋನ್​ಗೆ ಅಡಿಕ್ಟ್ ಆಗಿದ್ದೆ. ಆಗ ಕರೀನಾ, ತೈಮೂರ್ ಎಲ್ಲಾ ಹೆಚ್ಚಾಗಿ ಬಳಸಬೇಡಿ ಎಂದರು. ಆದರೆ ಕರೀನಾ ಅವಳ ಬಳಕೆಯನ್ನು ಚೆನ್ನಾಗಿ  ನಿರ್ವಹಿಸುತ್ತಾಳೆ. ಆದ್ದರಿಂದ ಆಕೆಗೆ ನಾನು ಏನೂ ಹೇಳುವ ಅಗತ್ಯವಿಲ್ಲ’’ ಎಂದು ಸೈಫ್ ಪತ್ನಿಯನ್ನು ಹೊಗಳಿದ್ದಾರೆ.

ಇದನ್ನೂ ಓದಿ:

ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ

ಸ್ಯಾಂಡಲ್​ವುಡ್​ ನಟಿ ಸವಿ ಮಾದಪ್ಪ ಸಾವಿನ ಬೆನ್ನಲ್ಲೇ ಮತ್ತೋರ್ವ ನಟಿಯ ಆತ್ಮಹತ್ಯೆ; ಪ್ರಿಯಕರನಿಗಾಗಿ ಹುಡುಕಾಟ

Published On - 9:59 am, Fri, 1 October 21