ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ

TV9 Digital Desk

| Edited By: ಮದನ್​ ಕುಮಾರ್​

Updated on: Oct 01, 2021 | 8:47 AM

ನಾಗ ಚೈತನ್ಯ ಮತ್ತು ಅವರ ಪತ್ನಿ ಸಮಂತಾ ಅಕ್ಕಿನೇನಿ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿ ಇದೆ. ಈ ಸಂದರ್ಭದಲ್ಲಿ ಸಾಯಿ ಪಲ್ಲವಿ ನೀಡಿರುವ ಸ್ಪಷ್ಟನೆ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ.

ನಾಗ ಚೈತನ್ಯ ಜತೆ ಸಾಯಿ ಪಲ್ಲವಿ ಲಿಪ್​ ಲಾಕ್​ ಮಾಡಿದ್ದು ನಿಜವೇ? ‘ಲವ್​ ಸ್ಟೋರಿ’ ಹಿಂದಿನ ಸತ್ಯ ಬಾಯ್ಬಿಟ್ಟ ನಟಿ
ನಾಗ ಚೈತನ್ಯ, ಸಾಯಿ ಪಲ್ಲವಿ
Follow us

ನಟಿ ಸಾಯಿ ಪಲ್ಲವಿ ಅವರಿಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ಹಲವು ಕಾರಣಗಳಿಗಾಗಿ ಅವರನ್ನು ಜನರು ಇಷ್ಟಪಡುತ್ತಾರೆ. ಸಿಂಪಲ್ ಆಗಿ ಪಕ್ಕದ್ಮನೆ ಹುಡುಗಿಯಂತೆ ಕಾಣುವ ಅವರು ಯಾವುದೇ ಗ್ಲಾಮರ್​ನ ಹಂಗಿಲ್ಲದೇ ಸೂಪರ್​ ಸ್ಟಾರ್​ ನಟಿಯಾಗಿ ಬೆಳೆದಿದ್ದಾರೆ. ನಟನೆಯ ಮೂಲಕ ಎಲ್ಲರನ್ನೂ ಸೆಳೆದುಕೊಂಡಿದ್ದಾರೆ. ಇನ್ನು, ತಾವು ನಿಭಾಯಿಸುವ ಪಾತ್ರಗಳ ಬಗ್ಗೆ ಅವರು ಕೊಂಚ ಮಡಿವಂತಿಕೆಯನ್ನೂ ಇಟ್ಟುಕೊಂಡಿದ್ದಾರೆ. ನಟರ ಜೊತೆ ಲಿಪ್​ ಲಾಕ್​ ಮಾಡಲು ಸಾಯಿ ಪಲ್ಲವಿ ಸದಾ ಹಿಂಜರಿಯುತ್ತಾರೆ. ಆದರೆ ಇತ್ತೀಚೆಗೆ ರಿಲೀಸ್​ ಆಗಿರುವ ‘ಲವ್​ ಸ್ಟೋರಿ’ ಸಿನಿಮಾದಲ್ಲಿ ನಟ ನಾಗ ಚೈತನ್ಯ ಜೊತೆ ಲಿಪ್​ ಲಾಕ್​ ಮಾಡಿರುವ ದೃಶ್ಯ ಹೈಲೈಟ್​ ಆಗುತ್ತಿದೆ. ಅದರ ಬಗ್ಗೆ ಸಾಯಿ ಪಲ್ಲವಿ ಮಾತನಾಡಿದ್ದಾರೆ.

ಈ ಸಿನಿಮಾ ನೋಡಿದ ಬಳಿಕ ಎಲ್ಲರಿಗೂ ಅನಿಸಿದ್ದು ಏನೆಂದರೆ ಸಾಯಿ ಪಲ್ಲವಿ ಅವರು ತಮ್ಮ ಲಿಪ್​ ಲಾಕ್​ ನಿರ್ಬಂಧವನ್ನು ತೆಗೆದು ಹಾಕಿದ್ದಾರೆ. ಆದರೆ ಅದು ನಿಜವಲ್ಲ. ಆ ಬಗ್ಗೆ ಸ್ವತಃ ಸಾಯಿ ಪಲ್ಲವಿ ಸ್ಪಷ್ಟನೆ ನೀಡಿದ್ದಾರೆ. ಇಂದಿಗೂ ಅವರು ತಮ್ಮ ನಿಯಮಕ್ಕೆ ಬದ್ಧರಾಗಿದ್ದಾರೆ. ‘ನಿಜವಾಗಿಯೂ ಈ ಸಿನಿಮಾದಲ್ಲಿ ನಾನು ನಾಗ ಚೈತನ್ಯಗೆ ಕಿಸ್​ ಮಾಡಿಲ್ಲ. ಅದು ನಿಜ ಎಂಬಂತೆ ಕಾಣುವ ರೀತಿಯಲ್ಲಿ ನಮ್ಮ ಕ್ಯಾಮೆರಾಮ್ಯಾನ್​ ಆ ದೃಶ್ಯವನ್ನು ಸೆರೆ ಹಿಡಿದಿದ್ದಾರೆ ಅಷ್ಟೇ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಇನ್ಮುಂದೆ ಕೂಡ ತಾವು ಯಾವುದೇ ಸಿನಿಮಾದಲ್ಲೂ ಲಿಪ್​ ಲಾಕ್​ ದೃಶ್ಯ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

‘ನಾನು ಲಿಪ್​ ಲಾಕ್​ ದೃಶ್ಯಗಳ ವಿರೋಧಿ. ಅದನ್ನು ನಿರ್ದೇಶಕ ಶೇಖರ್​ ಕಮ್ಮುಲ ಅವರಿಗೆ ನಾನು ಮೊದಲೇ ತಿಳಿಸಿದ್ದೆ. ಹಾಗಾಗಿ ಅವರು ನನಗೆ ಈ ವಿಚಾರದಲ್ಲಿ ಎಂದಿಗೂ ತೊಂದರೆ ಕೊಟ್ಟಿಲ್ಲ. ಈ ಸಿನಿಮಾದಲ್ಲಿ ನೀವು ನೋಡುತ್ತಿರುವುದು ನಮ್ಮ ಛಾಯಾಗ್ರಾಹಕರ ಮ್ಯಾಜಿಕ್​. ಪಾತ್ರ ಚೆನ್ನಾಗಿದ್ದರೆ ನಟನೆ ಕೂಡ ಚೆನ್ನಾಗಿ ಮೂಡಿಬರುತ್ತದೆ’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ.

ಸದ್ಯ ನಾಗ ಚೈತನ್ಯ ಮತ್ತು ಅವರ ಪತ್ನಿ ಸಮಂತಾ ಅಕ್ಕಿನೇನಿ ನಡುವೆ ವೈಮನಸ್ಸು ಮೂಡಿದೆ ಎಂಬ ಸುದ್ದಿ ಇದೆ. ಅವರು ಶೀಘ್ರದಲ್ಲೇ ವಿಚ್ಛೇದನ ಪಡೆಯುತ್ತಾರೆ ಎಂದೂ ಹೇಳಲಾಗುತ್ತಿದೆ. ಈ ಸಂದರ್ಭದಲ್ಲಿ ಸಾಯಿ ಪಲ್ಲವಿ ನೀಡಿರುವ ಸ್ಪಷ್ಟನೆ ಬಗ್ಗೆ ಅಭಿಮಾನಿಗಳ ವಲಯದಲ್ಲಿ ಚರ್ಚೆ ಆಗುತ್ತಿದೆ. ‘ಲವ್​ ಸ್ಟೋರಿ’ ಚಿತ್ರಕ್ಕೆ ಗೆಲುವು ಸಿಕ್ಕಿದ್ದು, ಕೆಲವೇ ದಿನಗಳ ಹಿಂದೆ ಸಕ್ಸಸ್​ ಮೀಟ್​ ನಡೆಸಲಾಯಿತು.

ಇದನ್ನೂ ಓದಿ:

ಸಮಂತಾ ಡಿವೋರ್ಸ್​ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್​ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು

ನಾಗ ಚೈತನ್ಯ-ಸಾಯಿ ಪಲ್ಲವಿ ಪಾಲಿಗೆ ಇದು ಬಿಗ್​ ಡೇ; ಈಗಲಾದರೂ ಬರುತ್ತಾರಾ ಸಮಂತಾ?

ತಾಜಾ ಸುದ್ದಿ

Related Stories

Click on your DTH Provider to Add TV9 Kannada