ನಾಗ ಚೈತನ್ಯ-ಸಾಯಿ ಪಲ್ಲವಿ ಪಾಲಿಗೆ ಇದು ಬಿಗ್​ ಡೇ; ಈಗಲಾದರೂ ಬರುತ್ತಾರಾ ಸಮಂತಾ?

ಈ ಪ್ರಮುಖ ಸಂದರ್ಭದಲ್ಲಾದರೂ ನಾಗ ಚೈತನ್ಯ ಮತ್ತು ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿ. ಆ ಮೂಲಕ ಅವರು ಎಲ್ಲ ವದಂತಿಗೆ ತೆರೆ ಎಳೆಯಲಿ ಎಂದು ಅವರ ಫ್ಯಾನ್ಸ್​ ಬಯಸುತ್ತಿದ್ದಾರೆ.

ನಾಗ ಚೈತನ್ಯ-ಸಾಯಿ ಪಲ್ಲವಿ ಪಾಲಿಗೆ ಇದು ಬಿಗ್​ ಡೇ; ಈಗಲಾದರೂ ಬರುತ್ತಾರಾ ಸಮಂತಾ?
ನಾಗ ಚೈತನ್ಯ, ಸಾಯಿ ಪಲ್ಲವಿ, ಸಮಂತಾ ಅಕ್ಕಿನೇನಿ,
TV9kannada Web Team

| Edited By: Madan Kumar

Sep 28, 2021 | 2:41 PM

ಹಲವು ದಿನಗಳಿಂದ ನಟ ನಾಗ ಚೈತನ್ಯ ಅವರು ಸುದ್ದಿ ಆಗುತ್ತಲೇ ಇದ್ದಾರೆ. ಅದಕ್ಕೆ ಎರಡು ಕಾರಣ ಇದೆ. ಪತ್ನಿ ಸಮಂತಾ ಅಕ್ಕಿನೇನಿ ಜೊತೆ ಅವರು ಮನಸ್ತಾಪ ಮಾಡಿಕೊಂಡಿದ್ದಾರೆ ಎಂಬ ವದಂತಿ ಒಂದು ಕಾರಣವಾದರೆ, ‘ಲವ್​ ಸ್ಟೋರಿ’ ಸಿನಿಮಾದ ಯಶಸ್ಸು ಇನ್ನೊಂದು ಕಾರಣ. ಅವರ ದಾಂಪತ್ಯದ ಬಗ್ಗೆ ಅನೇಕ ಗಾಸಿಪ್​ಗಳು ಹರಿದಾಡುತ್ತಿವೆ. ಶೀಘ್ರದಲ್ಲೇ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದುಕೊಳ್ಳುತ್ತಾರೆ ಎಂಬ ಮಾತು ಕೂಡ ಕೇಳಿಬರುತ್ತಿದೆ. ಇದು ನಿಜವೋ ಸುಳ್ಳೋ ಎಂಬುದನ್ನು ತಿಳಿದುಕೊಳ್ಳಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅಕ್ಕಿನೇನಿ ಕುಟುಂಬದ ಕಡೆಯಿಂದ ಅಧಿಕೃತ ಹೇಳಿಕೆ ಹೊರಬರಲಿ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ.

ಸಮಂತಾ ಮತ್ತು ನಾಗ ಚೈತನ್ಯ ಡಿವೋರ್ಸ್​ ಬಗ್ಗೆ ಹಲವಾರು ಗಾಸಿಪ್​ ಹರಿದಾಡುತ್ತಿದ್ದರೂ ಕೂಡ ಆ ಬಗ್ಗೆ ಸಮಂತಾ ತಲೆ ಕೆಡಿಸಿಕೊಂಡಂತಿಲ್ಲ. ಅವರು ತಮ್ಮ ಪಾಡಿಗೆ ಹಾಯಾಗಿ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಸೈಕಲ್​ ರೈಡ್​ ಮಾಡಿ ಸುದ್ದಿ ಆಗಿದ್ದರು. ಈಗ, ನಾಗ ಚೈತನ್ಯ ಪಾಲಿಗೆ ಒಂದು ಖುಷಿಯ ದಿನ ಬಂದಿದೆ. ಸಾಯಿ ಪಲ್ಲವಿ ಜೊತೆ ಅವರು ನಟಿಸಿರುವ ‘ಲವ್​ ಸ್ಟೋರಿ’ ಚಿತ್ರ ಒಳ್ಳೆಯ ಓಪನಿಂಗ್​ ಪಡೆದುಕೊಂಡಿದೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಇಡೀ ತಂಡ ಮಂಗಳವಾರ (ಸೆ.28) ಸಕ್ಸಸ್​ ಮೀಟ್​ ಹಮ್ಮಿಕೊಂಡಿದೆ.

ಹೈದರಾಬಾದ್​ನ ಖಾಸಗಿ ಹೋಟೆಲ್​ನಲ್ಲಿ ‘ಲವ್​ ಸ್ಟೋರಿ’ ಸಿನಿಮಾದ ಸಕ್ಸಸ್​ ಮೀಟ್​ ನಡೆಯಲಿದೆ. ಅದಕ್ಕೆ ಮುಖ್ಯ ಅತಿಥಿಗಳಾಗಿ ಅಕ್ಕಿನೇನಿ ನಾಗಾರ್ಜುನ ಮತ್ತು ನಿರ್ದೇಶಕ ಸುಕುಮಾರ್​ ಆಗಮಿಸಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಗಂಡನ ಸಿನಿಮಾ ಗೆದ್ದಿರುವ ಖುಷಿಯಲ್ಲಿ ಈ ಕಾರ್ಯಕ್ರಮಕ್ಕೆ ಸಮಂತಾ ಹಾಜರಿ ಹಾಕುತ್ತಾರೋ ಇಲ್ಲವೋ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಮೂಡಿದೆ.

ಈ ಪ್ರಮುಖ ಸಂದರ್ಭದಲ್ಲಾದರೂ ನಾಗ ಚೈತನ್ಯ ಮತ್ತು ಸಮಂತಾ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿ. ಆ ಮೂಲಕ ಅವರು ಎಲ್ಲ ವದಂತಿಗೆ ತೆರೆ ಎಳೆಯಲಿ ಎಂದು ಅವರ ಫ್ಯಾನ್ಸ್​ ಬಯಸುತ್ತಿದ್ದಾರೆ. ಆದರೆ ಆ ಬಯಕೆ ಈಡೇರುವುದು ಯಾಕೋ ಅನುಮಾನ ಎನ್ನುತ್ತಿವೆ ಮೂಲಗಳು.

‘ಲವ್​ ಸ್ಟೋರಿ’ ಸಿನಿಮಾದ ಪ್ರೀ-ರಿಲೀಸ್​ ಕಾರ್ಯಕ್ರಮದ ಬಳಿಕ ನಟ ಆಮಿರ್​ ಖಾನ್​ ಜೊತೆ ಸೇರಿ ಅಕ್ಕಿನೇನಿ ಕುಟುಂಬ ಪಾರ್ಟಿ ಮಾಡಿತ್ತು. ಆಗಲೂ ಸಹ ಸಮಂತಾ ಗೈರಾಗಿದ್ದರು. ಒಟ್ಟಿನಲ್ಲಿ ಅವರ ಪ್ರತಿ ನಡೆ ಕೂಡ ಪದೇಪದೇ ಅನುಮಾನಕ್ಕೆ ಪುಷ್ಠಿ ನೀಡುತ್ತಲೇ ಇದೆ.

ಇದನ್ನೂ ಓದಿ:

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada