ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆಯುತ್ತಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಸಮಂತಾಗೆ ನಾಗ ಚೈತನ್ಯ ನೀಡಬೇಕಾಗುವ ಜೀವನಾಂಶದ ಕುರಿತು ಸದ್ಯ ಎರಡೂ ಕುಟುಂಬದವರು ಲೆಕ್ಕಾಚಾರ ಮಾಡುತ್ತಿದ್ದಾರೆ ಎಂಬ ವಿಷಯ ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ.

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ
ಸಮಂತಾ ಅಕ್ಕಿನೇನಿ, ನಾಗ ಚೈತನ್ಯ

ಕಳೆದ ಕೆಲವು ತಿಂಗಳಿನಿಂದ ಸಮಂತಾ ಅಕ್ಕಿನೇನಿ ಮತ್ತು ನಾಗ ಚೈತನ್ಯ ಸಂಸಾರದ ಬಗ್ಗೆ ಬಣ್ಣ ಬಣ್ಣದ ಗಾಸಿಪ್​ಗಳು ಕೇಳಿಬರುತ್ತಿವೆ. ಈ ದಂಪತಿ ನಡುವೆ ಭಾರಿ ಮನಸ್ತಾಪ ಉಂಟಾಗಿದೆ ಎನ್ನಲಾಗುತ್ತಿದೆ. ಹಾಗಾಗಿ ಶೀಘ್ರದಲ್ಲೇ ಅವರು ವಿಚ್ಛೇದನ ಪಡೆದರೂ ಅಚ್ಚರಿ ಇಲ್ಲ ಎಂಬ ಗುಸುಗುಸು ಹಬ್ಬಿದೆ. ಇಷ್ಟೆಲ್ಲ ಸುದ್ದಿ ಹರಿದಾಡಿದರೂ ಕೂಡ ಅವರ ಕುಟುಂಬದವರು ಸರಿಯಾದ ರೀತಿಯಲ್ಲಿ ಸ್ಪಷ್ಟನೆ ನೀಡದೇ ಇರುವುದರಿಂದ ಅನುಮಾನ ಇನ್ನಷ್ಟು ಬಲವಾಗಿದೆ. ಒಂದು ವೇಳೆ ವಿಚ್ಛೇದನ ಪಡೆಯುವುದು ಖಚಿತವಾದರೆ ಸಮಂತಾಗೆ ನಾಗ ಚೈತನ್ಯ ಕಡೆಯಿಂದ ಬರುವ ಜೀವನಾಂಶ ಎಷ್ಟು ಎಂಬುದು ಈಗ ಹಾಟ್​ ಟಾಪಿಕ್​ ಆಗಿದೆ.

ಸಮಂತಾ ಮತ್ತು ನಾಗ ಚೈತನ್ಯ ನಡುವೆ ಮತ್ತೆ ಸಾಮರಸ್ಯ ಮೂಡಿಸಲು ಎರಡೂ ಕುಟುಂಬದವರು ಪ್ರಯತ್ನಿಸುತ್ತಿದ್ದಾರೆ. ಸಂಸಾರದ ಕಿರಿಕ್​ನಿಂದಾಗಿ ಅವರು ಆಪ್ತ ಸಮಾಲೋಚಕರನ್ನೂ ಭೇಟಿ ಮಾಡಿದ್ದಾರೆ ಎನ್ನಲಾಗಿದೆ. ಹಾಗಿದ್ದರೂ ಕೂಡ ಈ ಜೋಡಿ ನಡುವಿನ ಅಸಮಾಧಾನ ಸರಿ ಆಗಿಲ್ಲ. ಹಾಗಾಗಿ ವಿಚ್ಛೇದನ ಪಡೆಯುವುದು ಬಹುತೇಕ ಖಚಿತ ಎಂಬ ಸುದ್ದಿ ಹರಿದಾಡುತ್ತಿದೆ. ಡಿವೋರ್ಸ್​ ಪಡೆದರೆ ಸಮಂತಾಗೆ ನಾಗ ಚೈತನ್ಯ ನೀಡಬೇಕಾಗುವ ಜೀವನಾಂಶದ ಕುರಿತು ಸದ್ಯ ಎರಡೂ ಕುಟುಂಬದವರು ಲೆಕ್ಕಾಚಾರ ಮಾಡುತ್ತಿದ್ದಾರೆ ಎಂಬ ವಿಷಯ ಟಾಲಿವುಡ್​ ಅಂಗಳದಲ್ಲಿ ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಸಮಂತಾ ಅವರು ಅಂದಾಜು 50 ಕೋಟಿ ರೂ. ಹಣವನ್ನು ಜೀವನಾಂಶವಾಗಿ ಪಡೆಯಲಿದ್ದಾರೆ. ಅವರು ಬಹುಬೇಡಿಕೆಯ ನಟಿ ಆಗಿರುವುದರಿಂದ ವಿಚ್ಛೇದನದ ಬಳಿಕ ಜೀವನ ನಿರ್ವಹಣೆ ಕಷ್ಟವಾಗುವುದಿಲ್ಲ. ಸಿನಿಮಾ ಮಾತ್ರವಲ್ಲದೇ ವೆಬ್​ ಸಿರೀಸ್​ಗಳಿಂದಲೂ ಅವರಿಗೆ ಸಿಕ್ಕಾಪಟ್ಟೆ ಆಫರ್​ ಬರುತ್ತಿದೆ. ಈ ವರ್ಷ ಬಿಡುಗಡೆಯಾದ ‘ದಿ ಫ್ಯಾಮಿಲಿ ಮ್ಯಾನ್​ 2’ ವೆಬ್ ಸರಣಿ ಯಶಸ್ಸಿನ ನಂತರ ಸಮಂತಾ ಇಮೇಜ್​ ಬದಲಾಗಿದೆ.

ಈ ವೆಬ್​ ಸಿರೀಸ್​ನಲ್ಲಿ ಅವರು ಸಿಕ್ಕಾಪಟ್ಟೆ ಬೋಲ್ಡ್​ ಆಗಿ ನಟಿಸಿದ್ದರು. ಕೆಲವು ಇಂಟಿಮೇಟ್​ ದೃಶ್ಯಗಳಲ್ಲೂ ಅವರು ಕಾಣಿಸಿಕೊಂಡಿದ್ದರು. ಅಂತಹ ಇನ್ನೂ ಕೆಲವು ದೃಶ್ಯಗಳನ್ನು ರಿಲೀಸ್​ಗೂ ಮೊದಲೇ ನಿರ್ದೇಶಕರು ಸೆನ್ಸಾರ್​ ಮಾಡಿದರು ಎಂಬ ಮಾತಿದೆ. ಅವರು ಇಂಥ ಪಾತ್ರ ಮಾಡಿದ್ದು ಕೂಡ ಸಂಸಾರದ ಸಾಮರಸ್ಯ ಕೆಡಲು ಕಾರಣ ಆಗಿರಬಹುದು ಎಂಬ ಗುಮಾನಿ ಇದೆ. ಇದಕ್ಕೆಲ್ಲ ತೇಪೆ ಹಚ್ಚಲು ಅಕ್ಕಿನೇನಿ ಕುಟುಂಬ ಸಣ್ಣ-ಪುಟ್ಟ ಪ್ರಯತ್ನ ಮಾಡುತ್ತಿದೆಯಾದರೂ ಅದರಿಂದ ಗಾಸಿಪ್ ಮಂದಿಯ ಬಾಯಿ ಮುಚ್ಚಿಸಲು ಸಾಧ್ಯವಾಗುತ್ತಿಲ್ಲ.

ಇದನ್ನೂ ಓದಿ:

ಸಮಂತಾ-ನಾಗ ಚೈತನ್ಯ ಫ್ಯಾಮಿಲಿಯ ಇನ್ನೊಂದು ಗುಟ್ಟು ಬಯಲು; ಮಗನ ಸಿನಿಮಾಗೆ ನಾಗಾರ್ಜುನ ತಲೆ ಹಾಕುತ್ತಿಲ್ಲ

ಸಮಂತಾ ಡಿವೋರ್ಸ್​ ವದಂತಿ ಬೆನ್ನಲ್ಲೇ ನಾಗ ಚೈತನ್ಯ-ಸಾಯಿ ಪಲ್ಲವಿ ಲವ್​ ಸ್ಟೋರಿ ಮೇಲೆ ಕಣ್ಣಿಟ್ಟ ಸಿನಿಪ್ರಿಯರು

Read Full Article

Click on your DTH Provider to Add TV9 Kannada