‘ಅವುಗಳಿಂದ ಬಹಳ ನೋವಾಗಿದೆ’; ವೈಯಕ್ತಿಕ ಜೀವನದ ಗಾಸಿಪ್​ಗಳ ಕುರಿತು ಕೊನೆಗೂ ಮೌನ ಮುರಿದ ನಾಗ ಚೈತನ್ಯ

Naga Chaitanya and Samantha: ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಗುತ್ತಿರುವ ಚರ್ಚೆಯ ಕುರಿತು ಮೌನ ಮುರಿದಿದ್ದಾರೆ. ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ.

‘ಅವುಗಳಿಂದ ಬಹಳ ನೋವಾಗಿದೆ’; ವೈಯಕ್ತಿಕ ಜೀವನದ ಗಾಸಿಪ್​ಗಳ ಕುರಿತು ಕೊನೆಗೂ ಮೌನ ಮುರಿದ ನಾಗ ಚೈತನ್ಯ
ಸಮಂತಾ, ನಾಗ ಚೈತನ್ಯ (ಸಂಗ್ರಹ ಚಿತ್ರ)

ಪ್ರಸ್ತುತ ಟಾಲಿವುಡ್ ಸೇರಿದಂತೆ ವಿವಿದೆಡೆ ಬಹಳಷ್ಟು ಚರ್ಚೆಯಾಗುತ್ತಿರುವುದು ನಟಿ ಸಮಂತಾ ಹಾಗೂ ನಟ ನಾಗ ಚೈತನ್ಯ ಅವರ ದಾಂಪತ್ಯದ ವಿಚಾರ. ಈ ಕುರಿತು ದಿನಕ್ಕೊಂದು ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು ನಾಗ ಚೈತನ್ಯ ಮಾಧ್ಯಮವೊಂದರೊಂದಿಗೆ ಮಾತನಾಡಿದ್ದು, ಪ್ರಕರಣದ ಕುರಿತಂತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಗಾಸಿಪ್​ಗಳಿಗೆ ತಮ್ಮ ಹೆಸರನ್ನು ಬಳಸಿಕೊಳ್ಳುತ್ತಿರುವುದು ಮೊದಲಿಗೆ ನೋವು ತಂದಿತ್ತು ಎಂದು ಅವರು ಸತ್ಯ ತೆರೆದಿಟ್ಟಿದ್ದಾರೆ.

ಫಿಲ್ಮ್ ಕಂಪ್ಯಾನಿಯನ್ ಸೌತ್‌ಗೆ ಅವರು ನೀಡಿದ ಸಂದರ್ಶನದಲ್ಲಿ ಅವರು ಇತ್ತೀಚಿನ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ. “ನನ್ನ ವೃತ್ತಿಜೀವನದ ಮೊದಲಿನಿಂದಲೂ, ವೈಯಕ್ತಿಕ ಜೀವನವನ್ನು ಹಾಗೂ ವೃತ್ತಿ ಜೀವನವನ್ನು ಪ್ರತ್ಯೇಕವಾಗಿ ನೋಡುವ ಪ್ರವೃತ್ತಿ ಬೆಳೆಸಿಕೊಂಡಿದ್ದೇನೆ. ಇದನ್ನು ನಾನು ನನ್ನ ಹೆತ್ತವರಿಂದ ಕಲಿತಿದ್ದೇನೆ. ಅವರು ಮನೆಗೆ ಬಂದ ಮೇಲೆ ಎಂದಿಗೂ ಕೆಲಸದ ಬಗ್ಗೆ ಮಾತನಾಡುತ್ತಿರಲಿಲ್ಲ. ಹಾಗೆಯೇ ಅವರು ಕೆಲಸಕ್ಕೆ ಹೋದಾಗ, ಅವರ ವೈಯಕ್ತಿಕ ಜೀವನವು ಎಂದಿಗೂ ಅಲ್ಲಿ ಇಣುಕುತ್ತಿರಲಿಲ್ಲ. ಈ ಸಮತೋಲನವನ್ನು ನೋಡಿ ಬೆಳೆದ ನಾನು ಕೂಡ ಅದನ್ನೇ ರೂಡಿಸಿಕೊಂಡಿದ್ದೇನೆ’’ ಎಂದು ಅವರು ಹೇಳಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಸಕ್ತಿ ಕಳೆದುಕೊಂಡಿರುವುದರ ಕುರಿತು ತಿಳಿಸಿದ ಅವರು, ‘‘ಅದೃಷ್ಟವಶಾತ್ ಅಥವಾ ದುರದೃಷ್ಟವಶಾತ್, ನಾನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಆಸಕ್ತಿ ಕಳೆದುಕೊಂಡಿದ್ದೇನೆ. ಕಳೆದ ವರ್ಷ ಮೊದಲ ಲಾಕ್‌ಡೌನ್ ನಂತರ ನನ್ನ ಜೀವನದಲ್ಲಿ ಬದಲಾಯಿಸಿಕೊಂಡ ಬೆಳವಣಿಗೆ ಇದು’’ ಎಂದು ನಾಗ ಚೈತನ್ಯ ಹೇಳಿದ್ದಾರೆ. ತಮ್ಮ ವೈಯಕ್ತಿಕ ಜೀವನದ ಪ್ರತೀ ಕ್ಷಣಗಳೂ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿರುವುದರ ಕುರಿತು ಅವರು ಮೌನ ಮುರಿದಿದ್ದಾರೆ.

“ಹೌದು, ಆರಂಭದಲ್ಲಿ ಅಂತಹ ಬೆಳವಣಿಗೆಗಳು, ಸುದ್ದಿಗಳು ನೋವು ನೀಡುತ್ತವೆ. ಆದರೆ ನಾನು ಇತ್ತೀಚೆಗೆ ಈಗಿನ ಮಾಧ್ಯಮಗಳ ಕುರಿತು ಯೋಚಿಸಿದಾಗ ಒಂದಷ್ಟು ಅಂಶಗಳು ಸ್ಪಷ್ಟವಾಗಿದೆ. ನಮ್ಮ ಹಿರಿಯರ ಕಾಲದಲ್ಲಿ, ಮಾಧ್ಯಮಗಳಾಗಿ ನಿಯತಕಾಲಿಕೆಗಳು ಇರುತ್ತಿದ್ದವು. ಅವು ತಿಂಗಳಿಗೊಮ್ಮೆ ಬರುತ್ತಿದ್ದುದರಿಂದ ಕೇವಲ ಗಟ್ಟಿಯಾದ ಮಾಹಿತಿಯಷ್ಟೇ ಉಳಿಯುತ್ತಿತ್ತು. ಈಗ ಕ್ಷಣ ಕ್ಷಣವೂ ಮಾಹಿತಿ ನೀಡುವುದರಿಂದ ಪ್ರತೀ ನಿಮಿಷದ ವಿಚಾರಗಳೂ ಸುದ್ದಿಯಾಗುತ್ತವೆ. ಆದರೆ ನಾನು ನಂಬಿದ ಪ್ರಕಾರ, ಈಗಲೂ ಕೂಡ ಗಟ್ಟಿಯಾಗಿರುವುದು ಮಾತ್ರ ಜನರ ಮನಸ್ಸಿನಲ್ಲಿ ಉಳಿಯುತ್ತದೆ. ಉಳಿದ ಅನಪೇಕ್ಷಿತ ಸುದ್ದಿಗಳನ್ನು ಅವರು ಮರೆಯುತ್ತಾರೆ’’ ಎಂದು ನಾಗ ಚೈತನ್ಯ ಹೇಳಿದ್ದಾರೆ.

ಪ್ರಸ್ತುತ ನಾಗ ಚೈತನ್ಯ ತಮ್ಮ ನೂತನ ಚಿತ್ರ ‘ಲವ್ ಸ್ಟೋರಿ’ಯ ಪ್ರಚಾರದ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸಾಯಿ ಪಲ್ಲವಿ ನಾಯಕಿಯಾಗಿ ನಟಿಸಿದ್ದು, ಶೇಖರ್ ಕಮ್ಮುಲ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಸೆಪ್ಟೆಂಬರ್ 24ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದನ್ನೂ ಓದಿ:

ಟಾಲಿವುಡ್​ ನಾನಿ ಸಿನಿಮಾ ಸೆಟ್​ ಸೇರಿಕೊಂಡ ದೀಕ್ಷಿತ್​ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್​ ಆಫರ್​

ಶಮಿತಾ ಜೊತೆಗಿನ ಸಂಬಂಧ ಸ್ನೇಹಕ್ಕೂ ಮೀರಿದ್ದು ಎಂದು ಸತ್ಯ ಒಪ್ಪಿಕೊಂಡ ರಾಕೇಶ್ ಬಾಪಟ್; ಮುಂದೇನು?

(Naga Chaitanya opens up about break up gossips with Samantha here is full details)

Read Full Article

Click on your DTH Provider to Add TV9 Kannada