ಟಾಲಿವುಡ್​ ನಾನಿ ಸಿನಿಮಾ ಸೆಟ್​ ಸೇರಿಕೊಂಡ ದೀಕ್ಷಿತ್​ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್​ ಆಫರ್​

ನಾನಿ ‘ಮೀಟ್​ ಕ್ಯೂಟ್​’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ನಾನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಕ್ಕೆ ದೀಕ್ಷಿತ್​ ಆಯ್ಕೆ ಮಾಡಿಕೊಳ್ಳಲಾಗಿದೆ.

ಟಾಲಿವುಡ್​ ನಾನಿ ಸಿನಿಮಾ ಸೆಟ್​ ಸೇರಿಕೊಂಡ ದೀಕ್ಷಿತ್​ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್​ ಆಫರ್​
ಟಾಲಿವುಡ್​ ನಾನಿ ಸಿನಿಮಾ ಸೆಟ್​ ಸೇರಿಕೊಂಡ ದೀಕ್ಷಿತ್​ ಶೆಟ್ಟಿ; ‘ದಿಯಾ’ ಹೀರೋಗೆ ಬಂಪರ್​ ಆಫರ್​

ನಟ ದೀಕ್ಷಿತ್ ಶೆಟ್ಟಿ ಅಭಿನಯದ ‘ದಿಯಾ’ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಈ ಸಿನಿಮಾದಿಂದ ದೀಕ್ಷಿತ್​ ಶೆಟ್ಟಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿತ್ತು. ಇದರಿಂದ ಅವರಿಗೆ ಆಫರ್​ಗಳ ಸಂಖ್ಯೆ ಹೆಚ್ಚಿತ್ತು. ನಂತರ ಅವರು ತೆಲುಗಿನ ‘ಮುಗ್ಗುರು ಮೊನಗಲ್ಲು’ ಸಿನಿಮಾದಲ್ಲೂ ನಟಿಸಿ ಟಾಲಿವುಡ್​ ಮಂದಿಗೆ ಪರಿಚಯವಾದರು. ಈಗ ಅವರಿಗೆ ಮತ್ತೊಂದು ತೆಲುಗು ಸಿನಿಮಾದಲ್ಲಿ ನಟಿಸೋಕೆ ಅವಕಾಶ ಸಿಕ್ಕಿದೆ. ಅದು ಖ್ಯಾತ ನಟ ನಾನಿ ಜತೆ ಅನ್ನೋದು ವಿಶೇಷ.

ನಾನಿ ‘ಮೀಟ್​ ಕ್ಯೂಟ್​’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದನ್ನು ನಾನಿ ಅವರೇ ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಬರುವ ಪ್ರಮುಖ ಪಾತ್ರಕ್ಕೆ ದೀಕ್ಷಿತ್​ ಆಯ್ಕೆ ಮಾಡಿಕೊಳ್ಳಲಾಗಿದೆ. ದೀಕ್ಷಿತ್​ಗೆ ಜತೆಯಾಗಿ ಆಕಾಂಕ್ಷಾ ಸಿಂಗ್​ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ದೀಕ್ಷಿತ್​ ಪಾತ್ರ ತುಂಬಾನೇ ಪ್ರಾಮುಖ್ಯತೆ ವಹಿಸಲಿದೆಯಂತೆ.

ನಾನಿ ಟಾಲಿವುಡ್​ನಲ್ಲಿ ಬಹುಬೇಡಿಕೆಯ ನಟ. ಅವರ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇರುತ್ತದೆ. ಇನ್ನು, ಅವರ ಜತೆ ನಟಿಸಿದರೆ ವೃತ್ತಿಜೀವನಕ್ಕೆ ದೊಡ್ಡ ಮೈಲೇಜ್​ ಸಿಗಲಿದೆ. ಈಗ ದೀಕ್ಷಿತ್​ಗೆ ನಾನಿ ಜತೆ ತೆರೆ ಹಂಚಿಕೊಳ್ಳೋಕೆ ಅವಕಾಶ ಸಿಕ್ಕಿದ್ದು, ಅವರ ಕರಿಯರ್​ಗೆ ಮೈಲೇಜ್​ ಸಿಗುವ ನಿರೀಕ್ಷೆ ಇದೆ. ಈ ಸಿನಿಮಾವನ್ನು ನಾನಿ ನಿರ್ಮಾಣ ಮಾಡಿದರೆ, ಅವರ ಸಹೋದರಿ ದೀಪ್ತಿ ಗಂಟಾ ಈ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇನ್ನೂ ಕೆಲ ಖ್ಯಾತ ಕಲಾವಿದರು ನಟಿಸುವ ಸಾಧ್ಯತೆ ಇದೆ.

‘ದಿಯಾ’ ಸಿನಿಮಾ 2020ರ ಆರಂಭದಲ್ಲಿ ತೆರೆಕಂಡಿತ್ತು. ಕೆ.ಎಸ್​. ಅಶೋಕ್​ ಈ ಸಿನಿಮಾ ನಿರ್ದೇಶನ ಮಾಡಿದ್ದರು. ಪೃಥ್ವಿ ಅಂಬರ್, ದೀಕ್ಷಿತ್​ ಶೆಟ್ಟಿ, ಖುಷಿ ರವಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈ ಸಿನಿಮಾ ಹಿಂದಿಗೆ ರಿಮೇಕ್​ ಆಗುತ್ತಿದೆ. ತೆಲುಗಿನಲ್ಲಿ ಈ ಸಿನಿಮಾ ರಿಮೇಕ್​ ಆಗಿ ತೆರೆಕಂಡಿದೆ.

ಇದನ್ನೂ ಓದಿ: ಅದ್ಭುತವಾಗಿ ಕಿಸ್​ ಮಾಡುವ ಪುರುಷರೆಂದರೆ ಇಷ್ಟ ಎಂದ ಮಲೈಕಾ ಅರೋರಾ; ಮದುವೆ ವಿಚಾರದಲ್ಲಿ ಮೌನ

ಸರಳ ಸುಂದರಿ ದಿಯಾ ಮಿರ್ಜಾಳ ಫ್ಯಾಶನ್ ಸ್ಟೇಟ್​ಮೆಂಟ್​ ಸಹ ಸರಳ ಆದರೆ ಅಷ್ಟೇ ಸುಂದರ!

Read Full Article

Click on your DTH Provider to Add TV9 Kannada