‘ಸಿದ್ಲಿಂಗು’, ‘ನೀರ್ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಹೊಸ ಚಿತ್ರದ ಟ್ರೈಲರ್ ರಿಲೀಸ್; ‘ಪೆಟ್ರೋಮ್ಯಾಕ್ಸ್​’ಗೆ ನೋಡುಗರು ಏನಂತಾರೆ?

ಕನ್ನಡದಲ್ಲಿ ತಮ್ಮದೇ ಮಾದರಿಯ ಚಿತ್ರಗಳಿಂದ ಹೆಸರು ಮಾಡಿರುವ ವಿಜಯ್ ಪ್ರಸಾದ್ ನಿರ್ದೇಶನದ ನೂತನ ‘ಪೆಟ್ರೋಮ್ಯಾಕ್ಸ್’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

‘ಸಿದ್ಲಿಂಗು’, ‘ನೀರ್ದೋಸೆ’ ಖ್ಯಾತಿಯ ವಿಜಯ್ ಪ್ರಸಾದ್ ಹೊಸ ಚಿತ್ರದ ಟ್ರೈಲರ್ ರಿಲೀಸ್; ‘ಪೆಟ್ರೋಮ್ಯಾಕ್ಸ್​’ಗೆ ನೋಡುಗರು ಏನಂತಾರೆ?
‘ಪೆಟ್ರೋಮ್ಯಾಕ್ಸ್’ ಚಿತ್ರದಲ್ಲಿ ಹರಿಪ್ರಿಯಾ, ಸತೀಶ್ ನೀನಾಸಂ
Follow us
TV9 Web
| Updated By: shivaprasad.hs

Updated on: Sep 23, 2021 | 6:58 PM

ಸ್ಯಾಂಡಲ್​ವುಡ್​ನಲ್ಲಿ ತಮ್ಮ ಭಿನ್ನ ಚಿತ್ರಗಳ ಮೂಲಕ ಗಮನ ಸೆಳೆದವರು ನಿರ್ದೇಶಕ ವಿಜಯ್ ಪ್ರಸಾದ್. ಈಗ ಅವರು ‘ಪೆಟ್ರೋಮ್ಯಾಕ್ಸ್’ ಚಿತ್ರದ ಮೂಲಕ ಮತ್ತೆ ಪ್ರೇಕ್ಷಕರಿಗೆ ಎದುರಾಗಿದ್ದಾರೆ. ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಮೊದಲ ಬಾರಿಗೆ ಸತೀಶ್ ನೀನಾಸಂ ಹಾಗೂ ಹರಿಪ್ರಿಯಾ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ದ್ವಂದ್ವಾರ್ಥದ ಸಂಭಾಷಣೆಯೇ ಹೆಚ್ಚಿರುವ ಟ್ರೈಲರ್ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸುದ್ದಿಯಾಗಿದೆ.

ವಿಜಯ್ ಪ್ರಸಾದ್ ಸಿನಿಮಾಗಳಲ್ಲಿ ದ್ವಂದ್ವಾರ್ಥದ ಸಂಭಾಷಣೆಗಳು, ಮಾನವೀಯ ನೆಲೆಯ ಕಥಾ ಹಂದರ ಎಲ್ಲವೂ ಮಾಮೂಲು. ಅವರ ಈ ಹಿಂದಿನ ನೀರ್ದೋಸೆ, ಸಿದ್ಲಿಂಗು ಮೊದಲಾದ ಚಿತ್ರಗಳನ್ನು ನೋಡಿರುವ ಪ್ರೇಕ್ಷಕರಿಗೆ ಈ ಫಾರ್ಮುಲಾ ಅರ್ಥವಾಗಿರುತ್ತದೆ. ಅದನ್ನೇ ‘ಪೆಟ್ರೋಮ್ಯಾಕ್ಸ್​’ನಲ್ಲೂ ವಿಜಯ್ ಪ್ರಸಾದ್ ಮುಂದುವರೆಸಿದ್ದಾರೆ. ಆದರೆ ಟ್ರೈಲರ್​ಗೆ ವೀಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಪೆಟ್ರೋಮ್ಯಾಕ್ಸ್ ಟ್ರೈಲರ್ ಇಲ್ಲಿದೆ:

ಚಿತ್ರದ ಟ್ರೈಲರ್​ಗೆ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ಧಾರೆ. ‘ನಗುವಿಗಾಗಿ ಇಂತಹ ಸಂಭಾಷಣೆಗಳ ಅಗತ್ಯ ಇರಲಿಲ್ಲ’ ಎಂದು ಒಬ್ಬರು ತಿಳಿಸಿದ್ದರೆ, ಮತ್ತೆ ಹಲವರು, ‘ವಿಜಯ್ ಅವರು ತಮ್ಮ ಈ ಫಾರ್ಮುಲಾ ಬಿಟ್ಟು ಹೊಸದರತ್ತ ಮುಖ ಮಾಡಬೇಕು’ ಎಂದು ಸಲಹೆ ನೀಡಿದ್ದಾರೆ. ಹಲವರು ಟ್ರೈಲರ್​ನಲ್ಲಿರುವ ಸಂಭಾಷಣೆಗೆ ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಸಂಭಾಷಣೆಗಳಲ್ಲಿ ತುಸು ತುಂಟತನ ಇದ್ದರೆ ಚಂದ. ಆದರೆ ಅದು ಅತಿಯಾದರೆ ಮುಜುಗರವಾಗುತ್ತದೆ ಎಂದು ಓರ್ವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೋರ್ವರು ವಿಜಯ್ ಪ್ರಸಾದ್ ಅವರ ಒಟ್ಟು ಉದ್ದೇಶ ಅರ್ಥವಾಗುತ್ತದೆ. ಆದರೆ ಈ ಚಿತ್ರ ಏಕೋ ನಿರೀಕ್ಷೆಯ ಮಟ್ಟದಲ್ಲಿಲ್ಲ ಎಂದಿದ್ದಾರೆ. ಇದನ್ನು ಕುಟುಂಬದೊಂದಿಗೆ ನೋಡಲು ಕಷ್ಟವಾಗುತ್ತದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಪೆಟ್ರೋಮ್ಯಾಕ್ಸ್​’ಗೆ ಧನಾತ್ಮಕ ಅಭಿಪ್ರಾಯವನ್ನೂ ಹಲವು ವೀಕ್ಷಕರು ನೀಡಿದ್ದಾರೆ. ನೀರ್ದೋಸೆ, ಸಿದ್ಲಿಂಗು ಮಾದರಿಯಲ್ಲೇ ಇದೂ ಹಿಟ್ ಆಗಲಿ ಎಂದು ಹಲವರು ಹಾರೈಸಿದ್ದಾರೆ. ಚಿತ್ರದ ಟ್ರೈಲರನ್ನು ಸುಮಾರು 39,000 ಸಾವಿರ ಇಷ್ಟಪಟ್ಟಿದ್ದು, ಸುಮಾರು 1,700 ಜನರು ಇಷ್ಟವಾಗಿಲ್ಲ ಎಂದಿದ್ದಾರೆ. ಚಿತ್ರಕ್ಕೆ ಯಶಸ್ಸು ಸಿಗಲಿ ಎಂದು ಹಲವು ಸಿನಿಮಾ ಪ್ರೇಮಿಗಳು ಶುಭ ಹಾರೈಸಿದ್ದಾರೆ.

‘ಪೆಟ್ರೋಮ್ಯಾಕ್ಸ್’ ಚಿತ್ರವನ್ನು ಸತೀಶ್ ಪಿಚ್ಚರ್ ಹೌಸ್ ಬ್ಯಾನರ್​ನಲ್ಲಿ ಸತೀಶ್ ನೀನಾಸಂ, ರಾಜಶೇಖರ್ ಎಚ್​.ಜಿ ಮೊದಲಾದವರು ನಿರ್ಮಿಸಿದ್ದಾರೆ. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದು, ನಿರಂಜನ್ ಬಾಬು ಛಾಯಾಗ್ರಹಣ ಮಾಡಿದ್ದಾರೆ.

ಇದನ್ನೂ ಓದಿ:

ಸೋತು ಸುಣ್ಣವಾದ ಶಾರುಖ್​ ಖಾನ್​ಗೆ ಸೋಲಿಲ್ಲದ ಸರದಾರನ ನಿರ್ದೇಶನ; ಇಲ್ಲಿದೆ ಹೊಸ ಅಪ್​ಡೇಟ್

ಕನ್ನಡ, ತೆಲುಗಿನ ನಂತರ ಹಿಂದಿಯಲ್ಲಿ ರಿಮೇಕ್ ಆಗಲಿದೆ ವಿಜಯ್ ಸೇತುಪತಿ, ತ್ರಿಷಾ ನಟನೆಯ ಈ ಸೂಪರ್ ಹಿಟ್ ಚಿತ್ರ!

‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ

(Sathish Neenasam and Haripriya starring Petromax kannada movie trailer is released)

ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
Daily Devotional: ವೈಕುಂಠ ಏಕಾದಶಿಯ ಮಹತ್ವ ಮತ್ತು ಆಚರಣೆ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ತಿರುಪತಿಯಲ್ಲಿ ಕಾಲ್ತುಳಿತದಿಂದ 6 ಭಕ್ತರ ಸಾವು: ಡಿಕೆಶಿ ಏನಂದ್ರು ನೋಡಿ
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ