‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ

ಮಲ್ಲಿಕಾ ಸಾಕಷ್ಟು ಬೋಲ್ಡ್​ ಪಾತ್ರಗಳ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಕಿಸ್ಸಿಂಗ್​ ಸೀನ್, ಅರೆ ನಗ್ನ ದೃಶ್ಯ​ಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿದ್ದರು.

‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ
‘ತೆರೆ ಹಿಂದೆಯೂ ನಗ್ನಳಾಗುವಂತೆ ಸೂಚಿಸಿದ್ದರು’; ಮಲ್ಲಿಕಾ ಶೆರಾವತ್​ ಬಿಚ್ಚಿಟ್ಟ ನಟರ ಕರಾಳ ಮುಖ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 23, 2021 | 5:19 PM

ಚಿತ್ರರಂಗದಲ್ಲಿ ಕಾಸ್ಟಿಂಗ್​ ಕೌಚ್ ಇದೆ ಎನ್ನುವ​ ವಿಚಾರ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಅವಕಾಶಕ್ಕಾಗಿ ಕಾಂಪ್ರಮೈಸ್​ ಆಗೋಕೆ ಹೇಳಿದ್ದರು ಎನ್ನುವ ಆರೋಪ ಖ್ಯಾತ ನಿರ್ದೇಶಕರು ಹಾಗೂ ನಟರ ಮೇಲೆ ಬಂದಿದೆ. ಅನೇಕ ನಟಿಯರು ತಮಗಾದ ಕಹಿ ಅನುಭವದ ಬಗ್ಗೆ ಹೇಳಿಕೊಳ್ಳುತ್ತಲೇ ಇದ್ದಾರೆ. ಬಾಲಿವುಡ್​ನಲ್ಲಿ ಮಿಂಚಿದ್ದ ಖ್ಯಾತ ನಟಿ ಮಲ್ಲಿಕಾ ಶೆರಾವತ್​ ಕೂಡ ಕಾಸ್ಟಿಂಗ್​ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ.

ಮಲ್ಲಿಕಾ ಸಾಕಷ್ಟು ಬೋಲ್ಡ್​ ಪಾತ್ರಗಳ ಮೂಲಕ ಪಡ್ಡೆ ಹುಡುಗರ ಮನ ಗೆದ್ದಿದ್ದರು. ಕಿಸ್ಸಿಂಗ್​ ಸೀನ್, ಅರೆ ನಗ್ನ ದೃಶ್ಯ​ಗಳನ್ನು ಯಾವುದೇ ಮುಜುಗರವಿಲ್ಲದೆ ಮಾಡುತ್ತಿದ್ದರು. ಅವರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದರೆ ಅಲ್ಲಿ ಒಂದು ಇಂಟಿಮೇಟ್​ ದೃಶ್ಯ ಹಾಗೂ ಕಿಸ್ಸಿಂಗ್​ ದೃಶ್ಯಗಳನ್ನು ನಿರ್ದೇಶಕರು ಇಡುತ್ತಿದ್ದರು. ಇದನ್ನು ನೋಡಿ ಅನೇಕ ಸ್ಟಾರ್​ಗಳು ಮಲ್ಲಿಕಾ ಅವರಿಂದ ಬೆನಿಫಿಟ್​ ಪಡೆಯೋಕೆ ಪ್ರಯತ್ನಿಸಿದ್ದರು. ಈ ಬಗ್ಗೆ ಮಲ್ಲಿಕಾ ಮಾತನಾಡಿದ್ದಾರೆ.

‘ನಾನು ನೇರವಾಗಿ ಕಾಸ್ಟಿಂಗ್​ ಕೌಚ್​ ಎದುರಿಸಿಲ್ಲ. ನನಗೆ ಸ್ಟಾರ್​ಡಮ್​ ಸುಲಭವಾಗಿ ಸಿಕ್ಕಿತ್ತು. ಮುಂಬೈಗೆ ಬರುತ್ತಿದ್ದಂತೆ ಆಫರ್​ಗಳು ಸಿಕ್ಕವು. ನಾನು ಹೆಚ್ಚು ಸ್ಟ್ರಗಲ್​ ಮಾಡುವ ಪರಿಸ್ಥಿತಿ ಎದುರಾಗೇ ಇಲ್ಲ. ‘ಮರ್ಡರ್’​ ಸಿನಿಮಾದಲ್ಲಿ ನಾನು ಬೋಲ್ಡ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ. ಹೀಗಾಗಿ, ಸಾಕಷ್ಟು ನಟರು ನನ್ನ ಬಳಿ ಬೇರೆ ರೀತಿಯಲ್ಲಿ ಮಾತನಾಡೋಕೆ ಆರಂಭಿಸಿದರು. ನೀವು ಸಿನಿಮಾದಲ್ಲಿ ಮಾತ್ರವಲ್ಲ ನಮ್ಮ ಜತೆಯೂ ಆ ರೀತಿ ಮಾಡಬಹುದು ಎಂದು ಆಹ್ವಾನ ನೀಡಿದ್ದರು’ ಎಂದಿದ್ದಾರೆ ಮಲ್ಲಿಕಾ. ಈ ಮೂಲಕ ತೆರೆ ಹಿಂದೆಯೂ ಬೆತ್ತಲಾಗೋಕೆ ಹೀರೋಗಳು ಆಹ್ವಾನ ನೀಡಿದ್ದರು ಎಂದು ಪರೋಕ್ಷವಾಗಿ ಹೇಳಿದ್ದಾರೆ ಮಲ್ಲಿಕಾ. ಆದರೆ, ಎಲ್ಲಿಯೂ ಅವರು ಹೀರೋಗಳ ಹೆಸರನ್ನು ಬಹಿರಂಗ ಮಾಡಿಲ್ಲ.

‘ನಾನು ಯಾವುದಕ್ಕೂ ಕಾಂಪ್ರಮೈಸ್​ ಆಗುವುದಿಲ್ಲ. ನಾನು ಕಾಂಪ್ರಮೈಸ್​ ಆಗೋಕೆ ಬಂದಿಲ್ಲ. ನಾನು ಇಲ್ಲಿಗೆ ಬಂದಿದ್ದು ನನ್ನ ಕರಿಯರ್​ ಬೆಳೆಸಿಕೊಳ್ಳೋಕೆ ಎಂದು ನೇರವಾಗಿ ಹೇಳಿದ್ದೆ. ಇದರಿಂದ ಅನೇಕರು ನನ್ನ ಜತೆ ನಟಿಸೋಕೆ ಹಿಂದೇಟು ಹಾಕಿದ್ದರು’ ಎಂದು ಮಲ್ಲಿಕಾ ಹೇಳಿದ್ದಾರೆ.

ಮಲ್ಲಿಕಾ ಶೆರಾವತ್​ ಈಗ ಚಿತ್ರರಂಗದಲ್ಲಿ ಆ್ಯಕ್ಟೀವ್​ ಆಗಿಲ್ಲ. ಆಗೊಂದು ಈಗೊಂದು ಸಿನಿಮಾ ಮಾಡುತ್ತಿದ್ದಾರೆ ಅವರು. 2019ರ ನಂತರದಲ್ಲಿ ಅವರು ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಲ್ಲಿ ಬೆತ್ತಲೆ ಯೋಗ; ದಿನಕ್ಕೆ 50 ಲಕ್ಷ ಸಂಭಾವನೆ ಕೇಳಿದ ಸ್ಪರ್ಧಿ

‘ಚಿತ್ರರಂಗ ಪ್ರವೇಶಿಸಿ ಕುಟುಂಬದ ಗೌರವ ಹಾಳು ಮಾಡುತ್ತಿ’ ಎಂದ ತಂದೆಗೆ ಮಗಳ ಉತ್ತರವೇನು?; ಇದು ಮಲ್ಲಿಕಾ ಯಶಸ್ಸಿನ ಕತೆ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ