ಸೋತು ಸುಣ್ಣವಾದ ಶಾರುಖ್​ ಖಾನ್​ಗೆ ಸೋಲಿಲ್ಲದ ಸರದಾರನ ನಿರ್ದೇಶನ; ಇಲ್ಲಿದೆ ಹೊಸ ಅಪ್​ಡೇಟ್

ರಾಜ್​ಕುಮಾರ್​ ಹಿರಾನಿ ಅವರು ಬಾಲಿವುಡ್​ನಲ್ಲಿ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. 2 ದಶಕಗಳಿಂದ ಚಿತ್ರರಂಗದಲ್ಲಿ ಇರುವ ಅವರು ಮಾಡಿದ್ದು ಕೇವಲ 5 ಸಿನಿಮಾ. ಅವೆಲ್ಲವೂ ಸೂಪರ್​ ಹಿಟ್.

ಸೋತು ಸುಣ್ಣವಾದ ಶಾರುಖ್​ ಖಾನ್​ಗೆ ಸೋಲಿಲ್ಲದ ಸರದಾರನ ನಿರ್ದೇಶನ; ಇಲ್ಲಿದೆ ಹೊಸ ಅಪ್​ಡೇಟ್
ಶಾರುಖ್​ ಖಾನ್​
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Sep 23, 2021 | 6:13 PM

ಶಾರುಖ್​ ಖಾನ್​ ಇತ್ತೀಚಿನ ವರ್ಷಗಳಲ್ಲಿ ಮುಟ್ಟಿದ್ದೆಲ್ಲವೂ ಸೋಲು ಕಾಣುತ್ತಿದೆ. ಇತ್ತೀಚೆಗೆ ಅವರ ಸಿನಿಮಾ ಗೆದ್ದ ದಾಖಲೆಯೇ ಇಲ್ಲ. ಈ ಬಗ್ಗೆ ಶಾರುಖ್​ಗೂ ಸಾಕಷ್ಟು ಬೇಸರವಿದೆ. ಒಂದೊಳ್ಳೆಯ ಹಿಟ್​ ಸಿನಿಮಾ ನೀಡಬೇಕು ಎಂಬುದು ಅವರ ಆಸೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಖ್ಯಾತ ನಿರ್ದೇಶಕರ ಜತೆ ಕೈಜೋಡಿಸೋಕೆ ಶಾರುಖ್​ ಪ್ಲ್ಯಾನ್​ ಮಾಡುತ್ತಿದ್ದಾರೆ. ಈಗ ಅವರು ಜನಪ್ರಿಯ ನಿರ್ದೇಶಕ ರಾಜ್​ಕುಮಾರ್​ ಹಿರಾನಿ ಜತೆ ಸಿನಿಮಾ ಮಾಡಲಿದ್ದಾರೆ ಎನ್ನುವ ಗಾಸಿಪ್​ ಹರಿದಾಡಿದೆ.

ರಾಜ್​ಕುಮಾರ್​ ಹಿರಾನಿ ಅವರು ಬಾಲಿವುಡ್​ನಲ್ಲಿ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಪಡೆದುಕೊಂಡಿದ್ದಾರೆ. 2 ದಶಕಗಳಿಂದ ಚಿತ್ರರಂಗದಲ್ಲಿ ಇರುವ ಅವರು ಮಾಡಿದ್ದು ಕೇವಲ 5 ಸಿನಿಮಾ. ಅವೆಲ್ಲವೂ ಸೂಪರ್​ ಹಿಟ್. ಪ್ರತಿ ಸಿನಿಮಾಗೆ 2-3 ವರ್ಷ ತೆಗೆದುಕೊಳ್ಳುವ ಅವರು ಪರ್ಫೆಕ್ಟ್​ ಆಗಿ ಸಿನಿಮಾ ಮಾಡುತ್ತಾರೆ. ಈ ಕಾರಣಕ್ಕೆ ಅವರ ನಿರ್ದೇಶನದ ಎಲ್ಲಾ ಚಿತ್ರಗಳು ಹಿಟ್​ ಆಗಿವೆ. ಈಗ ಶಾರುಖ್​ ಜತೆ ಇದೇ ಮೊದಲ ಬಾರಿಗೆ ಹಿರಾನಿ ಕೈಜೋಡಿಸುತ್ತಿದ್ದಾರೆ.

2018ರಲ್ಲಿ ತೆರೆಗೆ ಬಂದ ‘ಸಂಜು’ ಚಿತ್ರವೇ ಕೊನೆ. ಇದಾದ ನಂತರದಲ್ಲಿ ರಾಜ್​ಕುಮಾರ್​ ಹಿರಾನಿ ಯಾವುದೇ ಸಿನಿಮಾ ಘೋಷಿಸಿಲ್ಲ. ಈ ಚಿತ್ರ ಸಂಜಯ್​ ದತ್​ ಅವರ ಬಯೋಪಿಕ್​ ಆಗಿತ್ತು. ಈಗ ಅವರು ಸೈಲೆಂಟ್​ ಆಗಿ ಹೊಸ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಮೂಲಕ ಶಾರುಖ್​ ಅವರನ್ನು ಗೆಲ್ಲಿಸೋಕೆ ಸಿದ್ಧತೆ ನಡೆಸಿದ್ದಾರೆ.

ಮುನ್ನಾ ಭಾಯ್​ ಎಂ.ಬಿ.ಬಿ.ಎಸ್, ಲಗೇ ರಹೋ ಮುನ್ನಾ ಭಾಯ್​, 3 ಈಡಿಯಟ್ಸ್​, ಪಿಕೆ ಹಾಗೂ ಸಂಜು ಚಿತ್ರಗಳನ್ನು ರಾಜ್​ಕುಮಾರ್​ ಹಿರಾನಿ ನಿರ್ದೇಶಿಸಿದ್ದಾರೆ. ಇವರಿಗೆ ಸೋಲಿಲ್ಲದ ಸರದಾರ ಎನ್ನುವ ಖ್ಯಾತಿ ಕೂಡ ಇದೆ. ಈಗ ಅವರು ಶಾರುಖ್​ ಜತೆ ಸಿನಿಮಾ ಮಾಡುತ್ತಿದ್ದಾರೆ ಎನ್ನುವ ವಿಚಾರ ಅಭಿಮಾನಿಗಳಿಗೆ ಖುಷಿ ನೀಡಿದೆ. ಅಂದಹಾಗೆ, ಈ ಸಿನಿಮಾ ಶೀಘ್ರವೇ ಸೆಟ್ಟೇರಲಿದೆ.

ಶಾರುಖ್​ ಸದ್ಯ, ‘ಪಠಾಣ್​’ ಹಾಗೂ ಅಟ್ಲೀ ನಿರ್ದೇಶನದ ಇನ್ನೂ ಹೆಸರಿಡದ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ಜತೆಗೆ ಡಿಸ್ನಿ+ ಹಾಟ್​​ಸ್ಟಾರ್​ ಜತೆ ಅವರು ಪ್ರಾಜೆಕ್ಟ್​ ಒಂದನ್ನು ಮಾಡುತ್ತಾರೆ ಎನ್ನಲಾಗಿದೆ. ಈ ಬಗ್ಗೆ ಸಾಕಷ್ಟು ಜಾಹೀರಾತುಗಳನ್ನು ನೀಡಲಾಗುತ್ತಿದೆ.

ಇದನ್ನೂ ಓದಿ:  ಶಾರುಖ್​ ಮನೆ ಎದುರು ನಿಂತ ಅಭಿಮಾನಿಗಳು; ಬಾಲ್ಕನಿಯಿಂದ ಮೊಬೈಲ್​ ಎಸೆದ ಕಿಂಗ್​ ಖಾನ್​

ಡಿವೋರ್ಸ್​ ಪಡೆದರೆ ಸಮಂತಾಗೆ ಸಿಗುವ ಹಣ ಎಷ್ಟು? ಅಕ್ಕಿನೇನಿ ಸೊಸೆಯ ಬಹುಕೋಟಿ ಕಹಾನಿ

’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್