ಸಲ್ಮಾನ್ ಬಾಳಿನಲ್ಲಿ ದೀರ್ಘಕಾಲ ಉಳಿದ ಸಂಬಂಧ ಯಾವುದು?; ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಹೇಳಿಕೊಂಡ ನಟ 

Salman Khan: ಬಾಲಿವುಡ್​ನ ನಟ ಸಲ್ಮಾನ್ ಖಾನ್ ತಮ್ಮ ಜೀವನದಲ್ಲಿ ದೀರ್ಘಕಾಲ ಉಳಿದ ಸಂಬಂಧದ ಕುರಿತು ಮಾತನಾಡಿ ಅಭಿಮಾನಿಗಳ ಹುಬ್ಬೇರಿಸಿದ್ದಾರೆ.

ಸಲ್ಮಾನ್ ಬಾಳಿನಲ್ಲಿ ದೀರ್ಘಕಾಲ ಉಳಿದ ಸಂಬಂಧ ಯಾವುದು?; ವೈಯಕ್ತಿಕ ಜೀವನದ ಬಗ್ಗೆ ಮನಬಿಚ್ಚಿ ಹೇಳಿಕೊಂಡ ನಟ 
ಸಲ್ಮಾನ್ ಖಾನ್ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: shivaprasad.hs

Updated on:Sep 24, 2021 | 10:06 AM

Big Boss 15: ಬಾಲಿವುಡ್​ನ ಖ್ಯಾತ ನಟ ಸಲ್ಮಾನ್ ಖಾನ್ ತಮ್ಮ ವೈಯಕ್ತಿಕ ಜೀವನದ ಕುರಿತ ಸುದ್ದಿಗಳಿಗಾಗಿಯೂ ಸುದ್ದಿಯಲ್ಲಿರುತ್ತಾರೆ. ಬಾಲಿವುಡ್​ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಕರೆಯಲಾಗುವ ಸಲ್ಲು, ಇದೀಗ ತಮ್ಮ ಜೀವನದಲ್ಲಿ ದೀರ್ಘಕಾಲ ಉಳಿದ ಸಂಬಂಧದ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಕೊನೆಗೂ ಸಲ್ಲು ತಮ್ಮ ವೈಯಕ್ತಿಕ ಜೀವನದ ಸಂಗಾತಿಯ ಕುರಿತು ಮಾತನಾಡಿರುವುದು ಅವರ ಅಭಿಮಾನಿಗಳ ಕಣ್ಣರಳಿಸಿದ್ದು, ಸಲ್ಲು ಬದ್ಧತೆಗೆ ಮೆಚ್ಚುಗೆ ಸೂಚಿಸಿದ್ದಾರೆ. ಅಷ್ಟಕ್ಕೂ ಸಲ್ಲು ಜೊತೆ ದೀರ್ಘಕಾಲ ಒಡನಾಡಿದ ಸಂಗಾತಿ ಯಾರು ಗೊತ್ತೇ? ಇಲ್ಲಿದೆ ಮಾಹಿತಿ.

ಇತ್ತೀಚೆಗೆ ನಡೆದ ಪ್ರಚಅರ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಸಲ್ಮಾನ್, ತಮ್ಮ ಕುರಿತೇ ಜೋಕ್ ಮಾಡಿಕೊಂಡಿದ್ದಾರೆ. ಅವರೊಂದಿಗೆ ಹೆಚ್ಚು ಕಾಲ ಬಾಳಿದ ಸಂಗಾತಿಯೆಂದರೆ ಅದು ಬಿಗ್​ಬಾಸ್ ಅಂತೆ! ಇದನ್ನು ಹೇಳಿ ಸಲ್ಮಾನ್ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿದ್ದಾರೆ. ಅವರು ಹಾಗೆ ಹೇಳಲು ಕಾರಣವಿದೆ. ಬಿಗ್​ಬಾಸ್ 2010ರಲ್ಲಿ ಆರಂಭವಾಗಿದ್ದು, ಅಲ್ಲಿಂದ ಇಲ್ಲಿಯವರೆಗೆ ಸಲ್ಮಾನ್ ನಿರೂಪಣೆಯ ಜವಾಬ್ದಾರಿ ಹೊತ್ತಿದ್ದಾರೆ. ಭಾರತದಲ್ಲಿ ಬಿಗ್​ಬಾಸ್ ಯಶಸ್ವಿಯಾಗಲು ಸಲ್ಮಾನ್ ಪಾಲೂ ಬಹಳ ದೊಡ್ಡದಿದೆ. ಅವರ ನಿರೂಪಣೆಗೆ ವೀಕ್ಷಕರು ಫಿದಾ ಆಗಿದ್ದಾರೆ. ಇತ್ತೀಚೆಗೆ ಬಿಗ್​ಬಾಸ್ ಒಟಿಟಿ ನಡೆಯುವಾಗಲೂ ಸಲ್ಮಾನ್ ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹಲವು ಸ್ಪರ್ಧಿಗಳು, ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇತ್ತ ಸಲ್ಮಾನ್ ವೈಯಕ್ತಿಕ ಜೀವನವೂ ಅಂತಹ ಯಶಸ್ಸಿನ ತುದಿಯಲ್ಲೇನೂ ಇಲ್ಲ. ಹಲವು ನಟಿಯರ ಜೊತೆ ಸುತ್ತಾಡಿದ ಅವರು ಈಗ ಏಕಾಂಗಿಯಾಗಿ ಉಳಿದಿದ್ದಾರೆ. ಆದ್ದರಿಂದಲೇ ಈ ಎಲ್ಲದರಿಂದ ರೋಸಿ ಹೋಗಿರುವ ಅವರು, ತಮ್ಮ ಜೊತೆ ದೀರ್ಘಕಾಲ ಉಳಿದ ಸಂಬಂಧ ಎಂದರೆ ಅದು ಬಿಗ್​ಬಾಸ್ ಎಂದಿದ್ದಾರೆ. ‘‘ನನ್ನ ಬದುಕಿನ ದೀರ್ಘಕಾಲಿಕ ಸಂಬಂಧವೆಂದರೆ ಅದು ಬಿಗ್​ಬಾಸ್. ಇದು ನನ್ನ ಜೀವನದಲ್ಲಿ ಹಲವು ಬದಲಾವಣೆಗಳನ್ನು ತಂದಿದೆ. ನಾಲ್ಕು ತಿಂಗಳ ಸ್ಪರ್ಧೆಯ ನಂತರ ಬೇರೆಯಾಗುವಾಗ ದುಃಖವಾಗುತ್ತದೆ. ಆದರೆ ಮತ್ತೆ ಹೊಸ ಸೀಸನ್​ನಲ್ಲಿ ಜೊತೆಯಾಗಲು ಕಾತರದಿಂದ ಕಾಯುತ್ತೇವೆ’’ ಎಂದು ಅವರು ಹೇಳಿಕೊಂಡಿದ್ದಾರೆ.

ಬಿಗ್​ಬಾಸ್​ನ ನೂತನ ಸೀಸನ್​ನ ಹಲವು ವಿಶೇಷತೆಗಳನ್ನೂ ಸಲ್ಮಾನ್ ಈ ವೇಳೆ ತೆರೆದಿಟ್ಟಿದ್ದಾರೆ. ‘ಜಂಗಲ್’(ಅರಣ್ಯ)ದ ಪರಿಕಲ್ಪನೆಯಲ್ಲಿ ಶೋ ಮೂಡಿಬರುತ್ತಿದ್ದು, ಹಿಂದಿನ ಬಾರಿಗಿಂತ ಬಹಳ ಭಿನ್ನವಾಗಿದೆ. ಬರೋಬ್ಬರಿ 250 ಕ್ಯಾಮೆರಾಗಳ ಮೂಲಕ ಈ ಬಾರಿ ಬಿಗ್​ಬಾಸ್ ಮನೆಯ ಕಣ್ಗಾವಲು ನಡೆಯಲಿದೆ. ಅಲ್ಲದೇ ಈ ಬಾರಿ ಸ್ಪರ್ಧೆ 5 ತಿಂಗಳ ಕಾಲ ನಡೆಯಲಿದೆ’ ಎಂದಿದ್ದಾರೆ. ಸಲ್ಮಾನ್ ಮಾತಿನಿಂದ ವೀಕ್ಷಕರಲ್ಲಿ ಬಿಗ್​ಬಾಸ್ ಕುತೂಹಲ ಹೆಚ್ಚಾಗಿದೆ.

ಇದನ್ನೂ ಓದಿ:

ಮದುವೆ ಕಾರ್ಡ್​ ಪ್ರಿಂಟ್​ ಆದ್ಮೇಲೆ ಪ್ರೇಯಸಿ ಕೈಯಲ್ಲಿ ಸಿಕ್ಕಿಬಿದ್ದಿದ್ದ ಸಲ್ಮಾನ್ ಖಾನ್​​; ಮುರಿದು ಬಿದ್ದಿತ್ತು ಶಾದಿ

Salman Khan: ಬಿಗ್​ಬಾಸ್​ 15ಕ್ಕೆ ಸಲ್ಮಾನ್ ಪಡೆಯೋ ಸಂಭಾವನೆ ನೂರಿನ್ನೂರು ಕೋಟಿಯಲ್ಲ; ಬರೋಬ್ಬರಿ ₹ 350 ಕೋಟಿ!

Valimai: ಬೈಕ್​ ಸ್ಟಂಟ್​ ಮಾಡುತ್ತ ಫ್ಯಾನ್ಸ್​ ಎದೆಬಡಿತ ಹೆಚ್ಚಿಸಿದ ಅಜಿತ್​; ಹೇಗಿದೆ ಗೊತ್ತಾ ‘ವಲಿಮೈ’ ಝಲಕ್​​?

(Salman Khan opens up about his long lasting relationship)

Published On - 9:57 am, Fri, 24 September 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ